ಸವದತ್ತಿ – “ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರೂ ಕೂಡಾ ಕೋರೋನಾ ಸಂದರ್ಭದಲ್ಲಿ ಸರಕಾರ ಸೂಚನೆ ಕೂಟ್ಟ ಕೂಡಲೇ ಯಾವುದೇ ಶರತ್ತುಗಳಿಲ್ಲದೆ ಕೆಲಸವನ್ನು ನಿರ್ವಹಿಸಿದ್ದಾರೆ. ಕೊರೋನಾ ಕೆಲಸ ಮಾಡುವಾಗ 28 ಕಾರ್ಯಕರ್ತೆಯರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಬಲಿಯಾಗಿದ್ದಾರೆ 173 ಜನರಿಗೆ ಕೋರೋನಾ ಬಂದು ಆ ದಿನಗಳಲ್ಲಿ ಕುಟುಂಬದ ಆದಾಯವನ್ನು ಕಳೆದುಕೂಂಡಿದ್ದಾರೆ ಈಗ ಅವರಿಗೆ ಹಲವಾರು ಕೆಲಸಗಳನ್ನು ಹಚ್ಚಿ ಬೇರೆ ಬೇರೆ ಮಾಹಿತಿಗಳನ್ನು ಪಡೆಯುವುದು ಇದರಿಂದ ಶಿಕ್ಷಕಿಯರಿಗೂ ತೊಂದರೆಯಾಗುತ್ತಿದೆ.ಮಕ್ಕಳಿಗೆ ಬಾಲ್ಯ ಶಿಕ್ಷಣ ಕೊಡುವುದು ಆಗುತ್ತಿಲ್ಲ.ಕೆಲಸದ ಹೊರೆ ಹೆಚ್ಚಿ ಹಲವಾರು ಸಮಸ್ಯೆಗಳನ್ನು ಎದುರಿಸಿ ನಮ್ಮ ಅಂಗನವಾಡಿ ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ ಆದ್ದರಿಂದ ಸರಕಾರ ಅವರಿಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು” ಎಂದು ಸಿ ಆಯ್ ಟಿ ಯು ಮುಖಂಡ ಎಲ್ ಎಸ್ ನಾಯ್ಕ ರವರು ಮಾತನಾಡಿದರು
ಅವರು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸವದತ್ತಿ ಘಟಕ ಮತ್ತು ಸಿ ಆಯ್ ಟಿ ಯು ಅಂಗನವಾಡಿ ನೌಕರರ ಬೇಡಿಕೆಗಳಿಗೆ ಸ್ಪಂದಿಸದೆ ಇರುವ ಬಜೆಟ್ಟನ್ನು ವಿರೋಧಿಸಿ ಮತ್ತು ಹೆಚ್ಚುವರಿ ಕೆಲಸಗಳನ್ನು ಬಹಿಷ್ಕರಿಸಿ ಸವದತ್ತಿ ಶಿಶು ಅಭಿವೃದ್ದಿ ಕಾರ್ಯಾಲಯದ ಮುಂದೆ ಹಮ್ಮಿ ಕೂಂಡ ಉಪವಾಸ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಿ ಆಯ್ ಟಿ ಯು ಸಂಘದ ಪದಾಧಿಕಾರಿಗಳಾದ ಚಿ ಬಿ ಸಾಲೀಮಠ. ದೇಸಾಯಿಪಟ್ಟಿ.ಎಸ ಎನ ವಾಂಗಿ.ವಿ ಎನ್ ಹಿರೇಮಠವೀಣಾ ಹನುಮಸಾಗರ.ಎನ್ ಬಿ ಗಲಗಲಿ ಅನಿತಾ ಕರಜಗಿಮಠ.ಎಸ್ ವಿ ಮಠದ.ಲಲಿತಾ ಬೂದಿಗೋಪ್ಪ .ಎಸ್ ಎಫ್ ಬ್ಯಾಹಟ್ಟಿ,ಎಲ್ ಎ ಪವಾಡಶೆಟ್ಟಿ ಎಮ್ ಜಿ ಅಮೋಘೀಮಠ ಶಾಂತಾ ಪಿ ಪಾಟೀಲ. ಭಾರತಿ ಸಿಂಗಾರಗೊಪ್ಪ ಮೊದಲಾದವರು ಉಪಸ್ಥಿತರಿದ್ದರು