spot_img
spot_img

ಅಂಚೆ ಇಲಾಖೆಯ ‘ಆಪ್ ಕೆ ಸಾಥ್’ ಅಭಿಯಾನಕ್ಕೆ ಚಾಲನೆ ‘ಅಂಚೆ ಇಲಾಖೆಯಲ್ಲಿ ಮಾಡುವ ಉಳಿತಾಯ ಹೆಚ್ಚು ಭದ್ರತೆ’

Must Read

spot_img

ಮೂಡಲಗಿ: ಭಾರತೀಯ ಅಂಚೆ ಇಲಾಖೆಯಲ್ಲಿ ಹಣ ಉಳಿತಾಯದ ಹಲವಾರು ಉಪಯುಕ್ತ ಯೋಜನೆಗಳು ಇದ್ದು ಜನರು ಅವುಗಳ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಗೋಕಾಕ ಅಂಚೆ ವಿಭಾಗ ಅಧೀಕ್ಷಕ ಸಿ.ಜಿ. ಕಾಂಬಳೆ ಅವರು ಹೇಳಿದರು.

ಭಾರತೀಯ ಅಂಚೆ ಇಲಾಖೆಯ ಗೋಕಾಕ ವಿಭಾಗದಿಂದ ಮೂಡಲಗಿಯ ಅಂಚೆ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಅಂಚೆ ಇಲಾಖೆಯ ‘ಆಪ್ ಕೆ ಸಾಥ್’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜನರು ಅಂಚೆ ಕಚೇರಿಯ ವಿವಿಧ ಯೋಜನೆಗಳಲ್ಲಿ ಇಡುವ ಹಣಕ್ಕೆ ಪೂರ್ಣ ಪ್ರಮಾಣದ ಭದ್ರತೆ ಇರುತ್ತದೆ ಎಂದು ಹೇಳಿದರು.

ಸುಕನ್ಯಾ ಸಮೃದ್ಧಿ ಯೋಜನೆ, ಆರ್‍ಡಿ, ಟರ್ಮ ಡಿಪಾಶಿಟ್, ಕೆವಿಟಿ, ಪಿಎಲ್‍ಐ, ಆರ್‍ಪಿಎಲ್‍ಐ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಮತ್ತು ಜೀವನ ಜ್ಯೋತಿ ವಿಮಾ ಯೋಜನೆಗಳು, ಅಟಲ್ ಪೆನ್‍ಶನ್ ಮತ್ತು ಹಿರಿಯ ನಾಗರಿಕರಾಗಿ ವಿಶೇಷ ಬಡ್ಡಿ ದರದಲ್ಲಿ ಠೇವಣಿ ಯೋಜನೆಗಳು ಇದ್ದು, ಉತ್ತಮ ಬಡ್ಡಿ ದರ ಸಹ ಇರುವುದು ಎಂದರು.

ನಿಶ್ಚಿತ ಬಡ್ಡಿ ನೀಡಿಕೆ, ತ್ವರಿತ ಸೇವೆ, ಉಳಿತಾಯ ಖಾತೆ ಕಾರ್ಯನಿರ್ವಹಣೆ ಸೇರಿದಂತೆ ಎಲ್ಲ ಸೇವೆಗಳಿಗೆ ಅಂಚೆ ಇಲಾಖೆಯು ದಕ್ಷವಾಗಿದೆ ಎಂದರು.
ಪಟ್ಟಣದ ಸಂದರ್ಭದಲ್ಲಿ ಬ್ಯಾನರದೊಂದಿಗೆ ಅಂಚೆ ಇಲಾಖೆಯ ಯೋಜನೆಗಳ ಬಗ್ಗೆ ಕರಪತ್ರಗಳನ್ನು ವಿತರಿಸಿ ಜನರಲ್ಲಿ ಅರಿವು ಮೂಡಿಸಿದರು.

ಇದೇ ಸಂದರ್ಭದಲ್ಲಿ 75ಕ್ಕೂ ಅಧಿಕ ಆರ್‍ಡಿಗಳನ್ನು ಮಾಡಿದ ಹಾಗೂ ರೂ. 6 ಲಕ್ಷ ಮೌಲ್ಯದ ಹಿರಿಯ ನಾಗರಿಕರ ಠೇವಣಿ ಮಾಡಿದ ಗ್ರಾಹರಿಗೆ ಠೆವಣಿ ಪಾಸ್‍ಬುಕ್‍ಗಳನ್ನು ವಿತರಿಸಿದರು.

ಗೋಕಾಕ ಅಂಚೆ ನಿರೀಕ್ಷಕ ಶಿವಮೂರ್ತಿ ಎನ್.ಎಚ್, ಮೂಡಲಗಿ ಅಂಚೆ ಕಚೇರಿಯ ರವಿ ಸಿ.ಬಿ, ಡಿ.ಆರ್. ಪಾಟೀಲ ಹಾಗೂ ಮೂಡಲಗಿ ಅಂಚೆ ಕಚೇರಿ ವ್ಯಾಪ್ತಿಗೆ ಬರುವ ಗ್ರಾಮಗಳ ಅಂಚೆ ಕಚೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!