spot_img
spot_img

ಅಧಿಕಾರ, ಹಣವಿದ್ದವರ ಅಸತ್ಯವೂ ಸತ್ಯವಾಗುತ್ತದೆ

Must Read

- Advertisement -

ಕೆಲವೊಮ್ಮೆ ಅಸತ್ಯದಿಂದಾಗುವ ಅಪಾಯಗಳನ್ನು ತಿಳಿದುಸುಮ್ಮನಿರುವುದು ಉತ್ತಮವೆನಿಸುತ್ತದೆ. ಆದರೆ, ಏನು ಆಗಬಾರದೋ ಅದೇ ಮುಂದೆ ನಡೆದಾಗ ಸತ್ಯ ತಿಳಿಸಿ ಎಚ್ಚರಿಸಬಹುದಿತ್ತೆನಿಸುವುದೂ ಸತ್ಯವೆ. ಆದರೆ ನಮ್ಮನ್ನು ತಡೆದ ಶಕ್ತಿಯೇ ಎಲ್ಲದ್ದಕ್ಕೂ ಕಾರಣವಾದಾಗ ಸತ್ಯಕ್ಕೆ ಸಾವಿಲ್ಲ.

ನಡೆಯೋದನ್ನು ನಿಲ್ಲಿಸೋ ಅಧಿಕಾರ ನಮಗಿಲ್ಲ. ನಡೆದ ಮೇಲೆ ಹೇಳೋ ಅಧಿಕಾರವೂ ನಮಗಿಲ್ಲ. ಇದು ಅಧ್ಯಾತ್ಮದ ಪ್ರಕಾರ ಚಿಂತನೆ ಮಾಡಬಹುದಷ್ಟೆ. ಈ ವಿಚಾರವನ್ನು ಮಧ್ಯವರ್ತಿಗಳು ಮಾಧ್ಯಮಗಳು ಸರಿಯಾಗಿ ತಿಳಿದು, ಯಾವ ವಿಷಯ ಮುಂದೆ ವಿಷವಾಗುವುದೆನ್ನುವುದರ ಬಗ್ಗೆ ಚಿಂತನೆ ಮಾಡದೆ ಜನಸಾಮಾನ್ಯರೆಡೆಗೆ ತರೋದಕ್ಕೆ ತಮ್ಮೆಲ್ಲಾ ಶಕ್ತಿಯನ್ನು ಬಳಸಿ ಇದರ ಪರಿಣಾಮವನ್ನೂ ಮನರಂಜನೆಯ ವಸ್ತುವಾಗಿಸಿದರೆ ಅಧರ್ಮ ವಾಗುತ್ತದೆ.

ಇದರಿಂದ ಸಂಸಾರದ ಜೊತೆಗೆ ಸಮಾಜವೂ ದಾರಿತಪ್ಪಿದಾಗ ಸತ್ಯ ಕಠೋರವಾಗುತ್ತದೆ. ಭೌತಿಕ ಜಗತ್ತಿನಲ್ಲಿ ಜೀವನ ನಡೆಸುವಾಗ ತಡೆದುಕೊಳ್ಳುವ ಶಕ್ತಿ ನಮಗಿರಬೇಕು ಎನ್ನುವವರೆ ತಡೆದುಕೊಳ್ಳುವುದಿಲ್ಲ ಎಂದು ಅರ್ಥವಾಗುತ್ತದೆ. ಕಾರಣ ಭೌತಿಕದಲ್ಲಿ ಅಧಿಕಾರ ಹಣವಿದ್ದವರ ಅಸತ್ಯವೂ ಸತ್ಯವಾಗುತ್ತದೆ. ಸತ್ಯ ಅಸತ್ಯವಾಗುತ್ತದೆ. ಎನ್ನುವಾಗ ಅಲ್ಲಿ ಶಕ್ತಿಗಿಂತ ವ್ಯಕ್ತಿ ಮುಖ್ಯವಾಗುತ್ತಾನೆ.

- Advertisement -

ವ್ಯಕ್ತಿತ್ವ ಒಂದೇ ಸಮನಾಗಿರಲು ಮಾನವನಲ್ಲಿ ಒಂದೇ ಶಕ್ತಿಯಿರಬೇಕು. ಸಮಾಜದ ಮಧ್ಯೆ ಇರೋವಾಗ ಹಾಗಿರುವವರು ವಿರಳ. ಇದ್ದರೂ ಅವರನ್ನು ಗುರುತಿಸುವವರು ವಿರಳ. ಅವರ ಸತ್ಯಕ್ಕೆ ಬೆಲೆಯಿಲ್ಲದ ಕಾರಣ ಸತ್ಯ ಹಿಂದುಳಿದು ಮಿಥ್ಯ ಮುಂದೆ ನಡೆಯುತ್ತದೆ. ನಿಧಾನವಾಗಿ ಹಿಂದಿನಿಂದ ಬಂದ ಸತ್ಯ ಎಷ್ಟೋ ಜೀವ ಹೋದ ಮೇಲೆ ಕಾಣುತ್ತದೆ. ನಮ್ಮ ಪುರಾಣ,ಇತಿಹಾಸದ ಕಥೆಗಳೇ ಇದಕ್ಕೆ ಸಾಕ್ಷಿ.

ಯುದ್ದ ತಡೆಯಲು ಹೋದವರನ್ನೇ ಶತ್ರುಗಳಾಗಿ ಕಂಡವರು ಜೀವ ಬಿಟ್ಟರು. ಜೀವ ಇದ್ದವರಿಗಷ್ಟೇ ಸತ್ಯದರ್ಶನ ಆಗಿದ್ದು. ಯಾವುದನ್ನು ತಕ್ಷಣ ಒಪ್ಪಿಕೊಳ್ಳಲು ಕಷ್ಟ. ಒಪ್ಪದಿದ್ದರೂ ಕಷ್ಟ ನಷ್ಟ ತಪ್ಪಿದ್ದಲ್ಲ.ಆಗೋದನ್ನು ತಡೆಯಲಾಗದು, ಆಗೋದೆಲ್ಲಾ ಒಳ್ಳೆಯದಕ್ಕೆ, ಆದ ಮೇಲೆ ಸತ್ಯದರ್ಶನ. ಪ್ರಕೃತಿಗೆ ವಿರುದ್ದ ನಡೆದ ಮೇಲೆ ಪ್ರಕೃತಿ ವಿಕೋಪ ಸಹಜ. ಪ್ರಕೃತಿಯನ್ನು ಸದ್ಬಳಕೆ ಮಾಡಿಕೊಂಡರೆ ಮನುಕುಲಕ್ಕೆ ಉತ್ತಮ ಭವಿಷ್ಯ.

ಭವಿಷ್ಯವನ್ನು ಯಾರಿಂದಲೋ ಕೇಳಿಕೊಂಡು ಜೀವನ ನಡೆಸುವಾಗ ಎಷ್ಟೋ ಅಸತ್ಯ,ಅನ್ಯಾಯ,ಅಧರ್ಮಕ್ಕೆ
ಸಹಕರಿಸಿದ್ದರೆ ಅದರ ಪ್ರತಿಫಲವಾಗಿ ಮಕ್ಕಳ ಭವಿಷ್ಯ ಹಾಳಾಗಬಹುದಲ್ಲವೆ? ಮಕ್ಕಳಿಗಾಗಿ ಜ್ಞಾನದಿಂದ ಆಸ್ತಿ ಮಾಡಿದರೆ ಪ್ರಕೃತಿಯೂ ಹಾಳಾಗೋದಿಲ್ಲ.ಇದಕ್ಕೆ ಬೇಕು ಸತ್ಯಜ್ಞಾನದ ಶಿಕ್ಷಣ. ಸತ್ಯವೇ ಇಲ್ಲದ ಶಿಕ್ಷಣಪಡೆದವರಿಗೆ
ಭೌತಿಕ ಸತ್ಯವಷ್ಟೇ ಕಾಣೋದು. ಅರ್ಧಸತ್ಯ ಹಿಂದುಳಿದು ಜೀವನ ಮಧ್ಯವರ್ತಿಗಳ ಪಾಲಾಗೋದು.ಒಟ್ಟಿನಲ್ಲಿ “ಸತ್ಯವಂತರಿಗೆ ಇದು ಕಾಲವಲ್ಲ ದುಷ್ಟಜನರಿಗೆ ಸುಭಿಕ್ಷ ಕಾಲ” ಎಂದು ಎಷ್ಟೋ ವರ್ಷಗಳ ಹಿಂದೆಯೇ ದಾಸರು
ತಿಳಿಸಿದ್ದರೂ ಸತ್ಯವನ್ನು ಹುಡುಕೋದು ಬಿಡೋದಿಲ್ಲ. ತಿಳಿದ ಮೇಲೆ ಹೇಳದೆ ಇರಲಾಗೋದಿಲ್ಲ. ಇದನ್ನು ಧರ್ಮ
ಸಂಕಟವೆಂದರೆ ಸರಿಯಾಗಬಹುದು. ಸತ್ಸಂಗಗಳಲ್ಲಿಯೇ ಸತ್ಯ ಮರೆಯಾದರೆ ಸಂಘಟನೆಯಲ್ಲಿ ಒಗ್ಗಟ್ಟು ಇರೋದಿಲ್ಲ. ಹೀಗಾಗಿ ಅಸತ್ಯದ ಸಂಘಟನೆ ಬೆಳೆಯುತ್ತದೆ. ಕಾಲಕ್ಕೆ ತಕ್ಕಂತೆ ಸತ್ಯಾನ್ವೇಷಣೆ.ವಿಜ್ಞಾನ
ಜಗತ್ತಿನಲ್ಲಿ ಬೌತಿಕ ಸತ್ಯವೇ ಸುಖವೆನಿಸಿರುವಾಗ ದು:ಖಕ್ಕೆ ಕಾರಣವೇನು? ಸತ್ಯಾಸತ್ಯತೆಯನ್ನು ಯಾರೋ ತಿಳಿಸುವುದರಿಂದ ಒಪ್ಪಲು ಕಷ್ಟ.ಅವರವರ ಅನುಭವಕ್ಕೆ ತಕ್ಕಂತೆ ಸತ್ಯದರ್ಶನ. ಹೀಗಾಗಿ ದೇವರು ಪ್ರತಿಯೊಬ್ಬರಿಗೂ ಸತ್ಯದರ್ಶನ ಮಾಡಿಸುವುದು ಸತ್ಯ. ಇದಕ್ಕೆ ಕಾಲಕೂಡಿಬರಬೇಕು.

- Advertisement -

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group