ಸವದತ್ತಿ – “ಕನ್ನಡ ಉಳಿಸಿ ಬೆಳೆಸಿ ಅಭಿಯಾನದ ಅಂಗವಾಗಿ ಖಾಸಗಿ ಅನುದಾನರಹಿತ 1995-96 ನಂತರದ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರೂ ಕೂಡಾ ಇವತ್ತಿನ ಬಜೆಟ್ ನಲ್ಲಿ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ತರಹದ ಅನುದಾನ ನೀಡದೇ ಇರುವುದು ನಿರಾಶೆಯಾಗಿದೆ ಮತ್ತು ಕರೋನಾ ಸಂಕಷ್ಟದಲ್ಲಿ ಎಲ್ಲ ವರ್ಗದ ಜನರಿಗೆ ಪರಿಹಾರ ನೀಡಿ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಯಾವುದೇ ತರಹದ ಸಹಾಯ ನೀಡದಿರುವುದರಿಂದ ಈ ಬಜೆಟ್ ನಿರಾಸೆ ಮೂಡಿಸಿದೆ” ಎಂದು ಸವದತ್ತಿ ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಅಸುಂಡಿ ಗ್ರಾಮದ ಅನುದಾನರಹಿತ ಶಿಕ್ಷಣ ಸಂಸ್ಥೆ ಕ್ಷೇಮಾಭಿವೃದ್ದಿ ಸಂಘದ ಅದ್ಯಕ್ಷರಾದ ಜಗದೀಶ ಪ. ತೋಟಗಿ ಪತ್ರಿಕೆಗೆ ತಿಳಿಸಿದ್ದಾರೆ.
More Articles Like This
- Advertisement -