ಸಿಂದಗಿ: ಬೆಳಗಾವಿ ವಿಭಾಗ ಅಬಕಾರಿ ಜಂಟಿ ಆಯುಕ್ತರವರ ಮಾರ್ಗದರ್ಶನದಲ್ಲಿ ವಿಜಯಪುರ ಜಿಲ್ಲೆ ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ ಸೆ.02 ರಂದು ಸಿಂದಗಿ ವಲಯದ ಬಮ್ಮನಜೋಗಿ ಎಲ್.ಟಿ ಗ್ರಾಮದ ಮನೆ ನಂ 960 ರ ಮನೆಯ ಮೇಲೆ ಅಬಕಾರಿ ದಾಳಿ ಮಾಡಲಾಗಿದೆ.
ದಾಳಿಯ ಸಂದರ್ಭ 4.320 ಲೀ ಗೋವಾ ರಾಜ್ಯದ ಮದ್ಯ ಹಾಗೂ 8.640 ಲೀ ಕರ್ನಾಟಕ ರಾಜ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಗ್ರಹಿಸಿಟ್ಟಿರುವ ಖಚಿತ ಮಾಹಿತಿ ಮೇರೆಗೆ ಪತ್ತೆ ಹಚ್ಚಲಾಗಿದೆ.ಆದರೆ ದಾಳಿಗೆ ಒಳಗಾದ ಬಮ್ಮನಜೋಗಿ ಎಲ್.ಟಿಯ ನಿವಾಸಿ ರವಿ.ಚಂದು.ಪವಾರ ಸ್ಥಳದಿಂದ ಪರಾರಿಯಾಗಿದ್ದು ಅಬಕಾರಿ ಉಪ ನಿರೀಕ್ಷಕ ಡಿ.ವ್ಹಿ.ರಜಪೂತ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.
ದಾಳಿಯಲ್ಲಿ ಸಿಂದಗಿ ವಲಯ ಅಬಕಾರಿ ನಿರೀಕ್ಷಕಿ ಶ್ರೀಮತಿ ಆರತಿ ಖೈನೂರ ಅಬಕಾರಿ ಸಿಬ್ಬಂದಿಗಳಾದ ಎಮ್.ಜೆ.ಮೊಕಾಶಿ, ಆರ್.ಬಿ.ಮುಳಸಾವಳಗಿ, ರೇವಣಸಿದ್ದಪ್ಪ ಅತಾಪಿ, ಜೈರಾಮ ರಾಠೋಡ ಹಾಗೂ ಎನ್.ಎಸ್.ಸಾತಲಗಾಂವ, ಎನ್.ಪಿ.ಸೂರ್ಯವಂಶಿ, ವಾಹನ ಚಾಲಕ ಅಜೀಮ ಮನಗೂಳಿ ಭಾಗವಹಿಸಿದ್ದರು.