ಸವದತ್ತಿ – “ಪ್ರತಿಯೊಬ್ಬರ ಬಾಳಿನಲ್ಲಿ ಅಜ್ಞಾನದ ಕಹಿ ಮರೆಯಾಗಲಿ, ಸುಜ್ಞಾನದ ಅನುಭವಗಳು ನಿಮ್ಮ ಮನದಲ್ಲಿ ಸೆರೆಯಾಗಿ, ಜ್ಞಾನ ಭಂಡಾರದ ಬುತ್ತಿ ನಿಮ್ಮ ಮಸ್ತಕ ಸೇರಲಿ, ಕತ್ತಲು ತುಂಬಿದ ದಾರಿಯಲಿ ಗುರುವಿನ ಬೆಳಕು ಮೂಡಿ ಸುಖ ಜೀವನ ನಿಮ್ಮದಾಗಲಿ” ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಅವರು ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ನಿರ್ವಾಣೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿ ರಚಿಸಿದ ರಾಮಚರಿತ್ರೆ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರಿವು, ಸಂಸ್ಕಾರ, ಸಂತೋಷ, ಭಕ್ತಿಯ ಖುಷಿ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಒಳಗಿರುವ ಅಕ್ಷಯ ಪಾತ್ರೆ. ಅದು ಎಂದಿಗೂ ಬರಿದಾಗುವುದಿಲ್ಲ. ತನ್ನಲ್ಲಿರುವ ಜ್ಞಾನವನ್ನು ಇತರರೊಂದಿಗೆ ಹಂಚುವ ಮೂಲಕ, ಇನ್ನೂಬ್ಬರ ಮೊಗದಲ್ಲಿ ಆ ಸಂತಸವನ್ನು ಕಾಣಬೇಕು. ನಾಡಿನ ಸಂಸ್ಕ್ರುತಿ, ಸಂಸ್ಕಾರದ ಜ್ಞಾನ ದಾಸೋಹದ ಸವಿಯನ್ನು ನಾಡಿಗೆ ನೀಡುತ್ತಿರುವ ಪೂಜ್ಯರ ಕಾರ್ಯ ಶ್ಲಾಘನೀಯ” ಎಂದರು.
ನರಗುಂದ ಪತ್ರಿವನಮಠದ ಸಿದ್ದವೀರ ಶಿವಯೋಗಿ ಮಹಾಸ್ವಾಮಿಗಳು ಮಾತನಾಡಿ “ಏಳುಕೊಳ್ಳದ ನಾಡು. ಸಿದ್ಧಿ ಪುರುಷರ ಬೀಡು ಎಂದೇ ಖ್ಯಾತಿ ಹೊಂದಿದ ಈ ಗ್ರಾಮ. ಇಲ್ಲಿನ ಮಠ-ಮಾನ್ಯಗಳು ಸಮಾಜ ತಿದ್ದುವ ಕೆಲಸ ಮಾಡುತ್ತಿರುವದು ಒಳ್ಳೆಯ ಬೆಳವಣಿಗೆ, ಪ್ರತಿಯೊಬ್ಬರೂ ಮಹಾತ್ಮರು ಹೇಳುವ ಆಧ್ಯಾತ್ಮಿಕ ಪ್ರವಚನ ಸಾರವನ್ನು ಅರಿತುಕೊಂಡು ಮುಂದೆ ಸಾಗಬೇಕು ಎಂದರು.
ನಿರ್ವಾಣೇಶ್ವರಮಠದ ಪೀಠಾಧಿಪತಿ ಶ್ರೀಗುರುಮಹಾಂತ ದೇವರು ಸಾನಿಧ್ಯ ವಹಿಸಿದ್ದರು, ಶ್ರೀರೇಣುಕಾ ದೇವಿ ಕೃಷಿ ಪತ್ತಿನ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ, ಎಸ್ ಎಸ್ ಹನಸಿ, ಆದಮಸಾಬ ಮುಲ್ಲಾ, ವಿಠಲ ಗುಡೆನ್ನವರ, ಪರಸಪ್ಪ ಇಮ್ರಾಪೂರ, ವಾಯ್ ವಾಯ್ ಕಾಳಪ್ಪನವರ, ನಾಗಪ್ಪ ಗರಗದ, ಹರ್ಲಾಪೂರದ ಎನ್ ಎಸ್ ಪಾಟೀಲ, ಶರೀಫ್‍ಸಾಬ ಬಾರಿಗಿಡದ, ವಿಶ್ವನಾಥಗೌಡ್ರ, ಶೇಖಪ್ಪ ಹಡಪದ, ಚಿದಾನಂದ ತಳವಾರ, ಹನಮಂತ ಗಾಂಜಿ, ಮಾಳಪ್ಪ ಪವಾಡಿ, ರಾಮಣ್ಣಾ ಕಿತ್ತೂರ, ಯಲ್ಲಪ್ಪ ಕರಿ, ಶರಣಬಸನಗೌಡ ಪಾಟೀಲ, ಗೌಡಪ್ಪ, ಯಲ್ಲಪ್ಪ ದಳವಾಯಿ, ಮಲ್ಲನಗೌಡ ಪಾಟೀಲ ಹಾಗೂ ಉಗರಗೋಳ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.