ಇಸ್ಲಾಮಿಕ್ ಸಹಕಾರ ಒಕ್ಕೂಟಕ್ಕೆ ಭಾರತದ ಎಚ್ಚರಿಕೆ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ನಮ್ಮ ಆಂತರಿಕ ವಿಷಯದಲ್ಲಿ ಮೂಗು ತೂರಿಸಬೇಡಿ !

ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನದ ಪಕ್ಷಪಾತಿಯಂತೆ ವರ್ತಿಸಿದ ಇಸ್ಲಾಮಿಕ್ ಸಹಕಾರ ಒಕ್ಕೂಟದ ನಿಲುವಿಗೆ ಭಾರತ ತಕ್ಕ ಪ್ರತಿರೋಧ ವ್ಯಕ್ತಪಡಿಸಿದ್ದು ತನ್ನ ಆಂತರಿಕ ವಿಚಾರದಲ್ಲಿ ಸಂಘಟನೆಯು ಮೂಗು ತೂರಿಸುವುದು ತರವಲ್ಲ ಎಂದು ನೇರ ಹಾಗೂ ದಿಟ್ಟವಾಗಿ ಹೇಳಿದೆ.

ಓಐಸಿ ಎಂದು ಕರೆಯಲ್ಪಡುವ ಇಸ್ಲಾಮಿಕ್ ಸಹಕಾರ ಸಂಘಟನೆಯು ವಿಶ್ವಸಂಸ್ಥೆಯಂತೆ ಒಂದು ದೊಡ್ಡ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು ಜಗತ್ತಿನ ಇಸ್ಲಾಮಿಕ್ ರಾಷ್ಟ್ರಗಳ ಹಿತ ಕಾಪಾಡುವಲ್ಲಿ ಪಾತ್ರವಹಿಸುತ್ತದೆ.
ಮುಸಲ್ಮಾನರು ಹೆಚ್ಚು ಇರುವ ದೇಶಗಳಿಗೆ ಪ್ರಾಧಾನ್ಯತೆಯನ್ನು ನೀಡುವ ಸಂಸ್ಥೆಯು ದೇಶ ದೇಶಗಳ ನಡುವಿನ ಬಿಕ್ಕಟ್ಟು ಪರಿಹರಿಸಲು ಶ್ರಮಿಸುತ್ತಿದೆ.

- Advertisement -

ಆದರೆ ಭಾರತ ಪಾಕ್ ನಡುವಿನ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಓಐಸಿಯು ಪಾಕ್ ಪಕ್ಷಪಾತಿಯಾಗಿ ವರ್ತಿಸಿದ್ದು ಭಾರತವನ್ನು ಕೆರಳಿಸಿದೆ. ಕಾಶ್ಮೀರದ ೩೭೦ ನೇ ವಿಧಿಯನ್ನು ರದ್ದು ಮಾಡಿದಾಗ ಭಾರತಕ್ಕೆ ಬುದ್ಧಿ ಹೇಳಲು ಬಂದಾಗ ಭಾರತ ಕಡಕ್ಕಾಗಿ ಹೇಳಿತ್ತು. ತನ್ನ ಆಂತರಿಕ ವಿಷಯದಲ್ಲಿ ಮೂಗು ತೂರಿಸುವುದು ತರವಲ್ಲ ಎಂದು.

ಭಾರತ ಈಗಾಗಲೇ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳೊಡನೆ ಅತ್ಯುತ್ತಮ ಬಾಂಧವ್ಯ ಕಾಪಾಡಿಕೊಂಡಿದ್ದು ತನಗೆ ಬೆಂಬಲ ನೀಡಬೇಕೆಂಬ ಪಾಕ್ ಬೇಡಿಕೆ ಅರಣ್ಯರೋದನವಾಗಿದೆ.

ಕೇವಲ ತುರ್ಕಿ ಹಾಗೂ ಮಲೇಷಿಯಾದಂಥ ಕಟ್ಟರ್ ಮುಸ್ಲಿಮ್ ದೇಶಗಳು ಪಾಕ್ ಗೆ ಬೆಂಬಲ ಸೂಚಿಸಿದ್ದು ಆದರೂ ಭಾರತವನ್ನು ದಿಟ್ಟವಾಗಿ ವಿರೋಧಿಸಲು ಅವು ಮೀನಮೇಷ ಎಣಿಸುತ್ತಿವೆ.

ಅಂದರೆ ಭಾರತವೀಗ ಮುಸ್ಲಿಮ್ ದೇಶಗಳ ಜೊತೆ ಕೂಡ ಉತ್ತಮ ಬಾಂಧವ್ಯ ಹೊಂದುತ್ತ ಪಾಕಿಸ್ತಾನದ ನಿಜ ಬಣ್ಣವನ್ನು ಬಯಲು ಮಾಡುತ್ತ ಹೊರಟಿದೆ. ಹಾಗೆಯೇ ಎಲ್ಲ ದೇಶಗಳಿಗೂ ಪಾಕ್ ಒಂದು ಉಗ್ರರ ದೇಶವೆಂದು ಮನವರಿಕೆಯಾಗಿದ್ದು ಅದಕ್ಕೆ ಬೆಂಬಲ ಸೂಚಿಸುವುದು ತಮ್ಮ ಪ್ರತಿಷ್ಠೆಗೆ ಪೆಟ್ಟು ಕೊಡುವುದು ಎಂಬ ಭಾವನೆಯಿಂದ ಹಿಂಜರಿಯುತ್ತಿವೆ.

ಇದರಿಂದಲೇ ಓಐಸಿ ಸಂಘಟನೆಗೆ ಭಾರತ ಎಚ್ಚರಿಕೆ ನೀಡಿದ್ದು ಭಾರತದ ಶಕ್ತಿಯನ್ನು ಎತ್ತಿ ತೋರಿಸಿದಂತಾಗಿದೆ.

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!