ಮುಜಫರ್ ನಗರ – ‘ಸಮಾಜಕ್ಕೆ ಹಾನಿ ‘ ಎಂಬ ಕಾರಣದಿಂದ ಉತ್ತರ ಪ್ರದೇಶದ ಮುಜಫರ್ ನಗರದ ಖಾಪ್ ಸಮಾಜದ ಪಂಚಾಯತ್ ಪ್ರಕಾರ ಹುಡುಗಿಯರು ಪ್ಯಾಂಟು ಮತ್ತೆ ಸ್ಕರ್ಟ್ ಧರಿಸುವಂತಿಲ್ಲ ಅಷ್ಟೇ ಏಕೆ ಹುಡುಗರು ಕೂಡ ಅರ್ಧ ಪ್ಯಾಂಟ್ ಧರಿಸುವಂತಿಲ್ಲ.
ಸಮಾಜದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕರೆಯಲಾದ ಖಾಪ್ ಪಂಚಾಯತಿ ಸಭೆಯಲ್ಲಿ ಮಾತನಾಡಿದ ಖಾಪ್ ಅಧ್ಯಕ್ಷ ಹಾಗೂ ಭಾರತೀಯ ಕಿಸಾನ್ ಸಂಘಟನ್ ಅಧ್ಯಕ್ಷರು, ಹುಡುಗಿಯರು ಅಂಥ ಡ್ರೆಸ್ ಧರಿಸುವುದು ನಮ್ಮ ಸಂಸ್ಕೃತಿಯಲ್ಲ ಅಂದಿದ್ದಾರೆ.
ಈ ನಿಯಮಗಳನ್ನು ಉಲ್ಲಂಘಿಸಿದರೆ ಅಂಥವರನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.