ಬೆಂಗಳೂರು – ಸುರೇಶ ಅಂಗಡಿಯವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಸ್ಥಾನ ಸೇರಿದಂತೆ ರಾಜ್ಯದ 3 ಉಪಚುನಾವಣೆಗಳ ದಿನಾಂಕ ಪ್ರಕಟವಾಗಿದೆ.
ಏಪ್ರಿಲ್ 17 ರಂದು ಬೆಳಗಾವಿ ಲೋಕಸಭೆ ಹಾಗೂ ಇನ್ನೆರಡು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಬಸವಕಲ್ಯಾಣ ಮತ್ತು ಮಸ್ಕಿ ಚುನಾವಣೆ ಸಹ ಏಪ್ರಿಲ್ 17ರಂದೇ ನಡೆಯಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ