spot_img
spot_img

ಋಣ ಎನ್ನುವುದು ನಾವು ಎಷ್ಟೋ ಜನ್ಮಗಳಿಂದ ಹೊತ್ತುಕೊಂಡು ಬಂದಿರುವ ಜವಾಬ್ದಾರಿ- ಮುಕ್ತಾನಂದ ಪೂಜ್ಯರು

Must Read

- Advertisement -

ಮುನವಳ್ಳಿ– ಋಣ ಎನ್ನುವುದು ನಾವು ಎಷ್ಟೋ ಜನ್ಮಗಳಿಂದ ಹೊತ್ತುಕೊಂಡು ಬಂದಿರುವ ಜವಾಬ್ದಾರಿ.ಈ ಋಣಾನುಬಂಧವನ್ನು ಎಂದಿಗೂ ಮರೆಯಬಾರದು.ಈ ಜನ್ಮದಲ್ಲಿ ನಮಗೆ ಒದಗುವ ಪ್ರತಿಯೊಂದೂ ಪೂರ್ವಜನ್ಮದ ಋಣಾನುಬಂಧವನ್ನು ಆಧರಿಸಿ ಪೂರ್ವ ನಿರ್ಧರಿತವಾದವುಗಳು.ಒಂದು ಜನ್ಮದಲ್ಲಿ ಪ್ರಾರಂಭವಾದ ಋಣವನ್ನು ಮತ್ತೊಂದು ಜನ್ಮದಲ್ಲಿ ತೀರಿಸಲು ಶ್ರಮ ವಹಿಸಬೇಕು ಎನ್ನುವರು ಏನನ್ನೂ ತಪ್ಪಿಸಿಕೊಂಡರೂ ಋಣಾನುಬಂಧ ತಪ್ಪಿಸಿಕೊಳ್ಳಲಾಗದು ಎಂದು ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಪೂಜ್ಯರು ಹೇಳಿದರು.

ಅವರು ಸಿಂದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದಿಂದ ಹಮ್ಮಿಕೊಂಡ ಗೂಗಲ್ ಮೀಟ್ ಅಂತರ್ಜಾಲ ಸತ್ಸಂಗದಲ್ಲಿ ಶನಿವಾರ “ಋಣಗಳ ಕುರಿತು” ಪ್ರವಚನ ನೀಡಿದರು.
ಜೀವನದಲ್ಲಿ ದೇವ ಋಣ, ಮನುಷ್ಯ ಋಣ, ಪಂಚಭೂತಗಳ ಋಣ,ಪಿತೃಋಣ,ಋಷಿ ಋಣ ಇವುಗಳ ಮೌಲ್ಯಗಳು ನಮ್ಮ ಬದುಕಿನಲ್ಲಿ ಮಹತ್ವವನ್ನು ಪಡೆದಿವೆ.ದೇವ ಋಣ ನಮಗೆ ಬದುಕಲು ಕರುಣಿಸಿರುವ ಜನ್ಮ. ಪಿತೃಋಣ ಬದುಕಿರುವಾಗಲೇ ನಮ್ಮ ತಂದೆ ತಾಯಿ ಹಿರಿಯರನ್ನು ನಾವು ನೋಡಿಕೊಳ್ಳುವ ಋಣ. ಮನುಷ್ಯ ಋಣ ನಮಗೆ ಅಗತ್ಯತೆಗಳನ್ನು ಸಂಸ್ಕೃತಿ ಸಂಸ್ಕಾರ ವಿಜ್ಞಾನದ ಆವಿಷ್ಕಾರಗಳ ಜೊತೆಗೆ ಕರುಣಿಸಿರುವ ಮನುಷ್ಯ ಜನ್ಮದ ಋಣ. ಭೂಮಿ.ನೀರು.ಅಗ್ನಿ.ವಾಯು.ಆಕಾಶ ಈ ಮನುಷ್ಯ ವಾಸಿಸಲು ಭೂಮಿಯನ್ನು ಅವಲಂಬಿಸಿದ್ದಾನೆ. ನೀರಿಲ್ಲದೆ ಬದುಕಿಲ್ಲ. ಉಸಿರಾಡಲಿಕ್ಕೆ ಗಾಳಿ ಬೇಕೇಬೇಕು.ಜೊತೆಗೆ ಒಬ್ಬರಿಂದ ಒಬ್ಬರಿಗೆ ಅಂತರ ಕಾಯ್ದುಕೊಳ್ಳುವ ಮೂಲಕ ಆಕಾಶವನ್ನು ಅವಲಂಬಿಸಿದ್ದಾನೆ.ಅಲ್ಲಿಗೆ ಪಂಚಭೂತಗಳನ್ನು ಬಿಟ್ಟು ಮನುಷ್ಯನಿಲ್ಲ. ಇವೆಲ್ಲವುಗಳ ಋಣವನ್ನು ನಾವು ತೀರಿಸಲೇಬೇಕು ಎಂದು ಶ್ರೀಗಳು ಹೇಳಿದರು.

ಆಧ್ಯಾತ್ಮಿಕವಾಗಿ ಮಾನವನ ಶರೀರವು ಪಂಚಭೂತಗಳಿಂದ ಕೂಡಿದೆ..ನಮ್ಮ ಶರೀರದ ಪ್ರತಿಯೊಂದು ಅವಯವಗಳು ಮಾಡುವ ಕಾರ್ಯಗಳಂತೆ ನಮ್ಮ ಬದುಕಿನಲ್ಲಿ ಪಂಚಭೂತಗಳ ಋಣವನ್ನು ನಾವು ತೀರಿಸಬೇಕು. ಅಂದರೆ ಅವುಗಳ ಮಾಲಿನ್ಯ ಮಾಡದಂತೆ ಶರೀರ ಹೇಗೆ ಸ್ವಚ್ಚತೆಯಿಂದ ಇಟ್ಟುಕೊಳ್ಳುತ್ತೇವೆಯೋ ಹಾಗೆಯೇ ಪಂಚಭೂತಗಳ ಶುದ್ಧತೆಯನ್ನು ಕಾಯ್ದುಕೊಳ್ಳುವುದೂ ಮುಖ್ಯ ಎನ್ನುತ್ತ ಸಾಲುಮರದ ತಿಮ್ಮಕ್ಕನ ಉದಾರಣೆಯನ್ನು ಪರಮಪೂಜ್ಯರು ಶನಿವಾರದ ಸತ್ಸಂಗದಲ್ಲಿ ತಿಳಿಸಿದರು.

- Advertisement -

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಸಿಂಚನಾ ಶಂಕರ ಇಟಗಿ ವಿದ್ಯಾರ್ಥಿನಿಯಿಂದ ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’ ವಚನ ಪಠಣ ಜರುಗಿತು. ನಂತರ ಸುಧಾ ಯಶವಂತ ಗೌಡರ ಸಂಗಡಿಗರಿಂದ “ದಯಾಮಯಾ ಗುರು ಕರುಣಾಮಯಾ” ಪ್ರಾರ್ಥನೆ ಜರುಗಿತು. ಈ ಗೂಗಲ್ ಮೀಟ್ ಅಂತರ್ಜಾಲ ಸತ್ಸಂಗದಲ್ಲಿ ಅನಂತ ಅಜವಾನ.ಅನುರಾಧ ಬೆಟಗೇರಿ.ಅನ್ನಪೂರ್ಣ ಲಂಬೂನವರ.ಚಂಪಾ ಗುದಗಾಪುರ.ಹೊನ್ನಳ್ಳಿ ಕುಟುಂಬದವರು.ಜಯಶ್ರೀ ಕುಲಕರ್ಣಿ ಶಂಕರ ಶೀಲವಂತ.ಯಕ್ಕುಂಡಿ ವಕೀಲರು.ಬಸವರಾಜ ಹಲಗತ್ತಿ. ವೈ.ಬಿ.ಕಡಕೋಳ.ಜೆ.ಎಚ್.ಪಾಟೀಲ.ಚನಬಸು ನಲವಡೆ.ಕವಿತಾ ಶೆಲ್ಲೇದ. ಮಾಲಾ ಸಂಗಮ. ಚಿದಾನಂದ ಬಾರ್ಕಿ.,ವ್ಹಿ.ಸಿ.ಹಿರೇಮಠ.ರಾಜು ಭಜಂತ್ರಿ.ಸವಿತಾ ಕೆಂದೂರ.ರಾಜಶ್ರೀ ಜವಳಿ, ಎಸ್.ವ್ಹಿ.ಚವಡಾಪೂರ, ಶೈಲಾ ಅಂಟಿನ, ವೀಣಾ ದಾಸಮಣಿ, ವಸಂತ ಸಣಕಲ್.ಸೋಮು ಗರಗದ, ಸುಮಂತ ಹೊನ್ನುಂಗರ ಮಾದೇವಿ ಏಣಗಿಮಠ ಸೋಮು ಮಲಗೌಡರ.ಎಂ.ಎಸ್.ಹೊಂಗಲ.ವಿರಾಜ ಕೊಳಕಿ. ವಿಜಯಲಕ್ಷ್ಮೀ ಬಂಡಿ ಯಶವಂತ ಗೌಡರ ಬಿಕ್ಕನಗೌಡರ ಸೇರಿದಂತೆ 60 ಕ್ಕೂ ಹೆಚ್ಚಿನ ಕುಟುಂಬದ ಸದಸ್ಯರು ಮುನವಳ್ಳಿ ಸಿಂದೋಗಿ ಬೈಲಹೊಂಗಲ, ಚಿಕ್ಕುಂಬಿ, ಯಕ್ಕುಂಡಿ, ಬೆಂಗಳೂರು, ಸವದತ್ತಿ, ಬಾಗಲಕೋಟೆ, ದೇವರಹುಬ್ಬಳ್ಳಿ, ಧಾರವಾಡ.ಮೊದಲಾದ ಸ್ಥಳಗಳಿಂದ ಅಂತರ್ಜಾಲದ ಸತ್ಸಂಗದಲ್ಲಿ ಸದ್ಭಕ್ತರು ಪಾಲ್ಗೊಂಡಿದ್ದರು.

ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದ ಪೂಜ್ಯರು. ದೇಶಪ್ರೇಮ.ಸಮಾಜದ ಋಣ.ಕುಟುಂಬದ ಋಣ.ಇವುಗಳನ್ನು ಕುರಿತು ಉದಾಹರಣೆ ಸಹಿತ ವಿಷಯವನ್ನು ಸಾದರಪಡಿಸಿದರು.”ನಾವೆಲ್ಲ ಭಾರತೀರೆಂಬ ಭಾವ ಮೂಡಲಿ” ದೇಶಭಕ್ತಿ ಗೀತೆಯನ್ನು ಹಾಡಿಸುವ ಮೂಲಕ ದೇಶಪ್ರೇಮದ ಮಹತ್ವವನ್ನು ಸಾರಿದರು.

ಸತ್ಸಂಗದ ಪ್ರಯೋಜನ ಕುರಿತು ಶಂಕರ ಕೋರಿ ಅವರ ತಾಯಿ. ಜಯಶ್ರೀ ಕುಲಕರ್ಣಿ.ಎಸ್.ವ್ಹಿ..ಚವಡಾಪೂರ ಉಪನ್ಯಾಸಕರು ಕರಮಡಿಯವರು ತಮ್ಮ ಅನಿಸಿಕೆಗಳನ್ನು ಕಾರ್ಯಕ್ರಮದ ಕೊನೆಯಲ್ಲಿ ಹಂಚಿಕೊಂಡರು. ಎಲ್.ಎಸ್.ಕಂಕಣವಾಡಿ ದಂಪತಿಗಳು ಸತ್ಸಂಗದ ಹೋಸ್ಟ ಆಗಿ ಕಾರ್ಯ ನಿರ್ವಹಿಸಿದರು.ವೀರಣ್ಣ ಕೊಳಕಿ ಕಾರ್ಯಕ್ರಮ ನಿರ್ವಹಿಸುವ ಜೊತೆಗೆ ಸ್ವಾಗತ ವಂದನಾರ್ಪಣೆಗೈದರು.

- Advertisement -

ವರದಿ: ವೈ.ಬಿ.ಕಡಕೋಳ, ಮುನವಳ್ಳಿ

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group