ಬೆಂಗಳೂರು – ಭಾವಜೀವಿಯಾಗಿದ್ದ ಭಾವಗೀತೆಗಳ ಕವಿ ಎನ್ ಎಸ್ ಲಕ್ಷ್ಮಿ ನಾರಾಯಣ ಭಟ್ಟರು ವಯೋಸಹಜ ಕಾಯಿಲೆಗಳಿಂದಾಗಿ ತಮ್ಮ ೮೪ ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.
೧೯೩೬ ಅಕ್ಟೋಬರ್ ೨೯ ರಂದು ಶಿವರಾಮ ಭಟ್ಟ ಹಾಗೂ ಮೂಕಾಂಬಿಕೆಯವರ ಮಗನಾಗಿ ಶಿವಮೊಗ್ಗದಲ್ಲಿ ಜನಿಸಿದ್ದ ಲಕ್ಷ್ಮಿ ನಾರಾಯಣ ಭಟ್ಟರು ಭಾವಗೀತೆ, ಸಂಶೋಧನೆ, ಮಕ್ಕಳ ಕವಿತೆಗಳು, ವಿಮರ್ಶಾ ಕ್ಷೇತ್ರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದರು. ಎಂ ಎ ಪದವಿ ಪಡೆದು ಭಾಷಾ ಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಸೇವೆ ಮಾಡಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಬಿಸಿದರು. ಭಟ್ಟರು ಕನ್ನಡ, ಸಂಸ್ಕೃತ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ.