spot_img
spot_img

‘ಎಲ್ಲರಿಗಾಗಿ ಅಂಬೇಡ್ಕರ ‘ ಕುರಿತ ಲೇಖನ ಸ್ಪರ್ಧೆ

Must Read

spot_img
- Advertisement -

ಬೆಂಗಳೂರು – ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 133 ನೇ ಜಯಂತಿಯ ಅಂಗವಾಗಿ “ಎಲ್ಲರಿಗಾಗಿ ಅಂಬೇಡ್ಕರ್” ಎಂಬ ಶೀರ್ಷಿಕೆಯ ಅಡಿಯಲ್ಲಿ ಶೇಷಾದ್ರಿಪುರಂ ಸಂಜೆ ಕಾಲೇಜಿನ ಅಂಬೇಡ್ಕರ್ ಅಧ್ಯಯನ ಕೇಂದ್ರವು ಪದವಿ ವಿದ್ಯಾರ್ಥಿಗಳಿಗಾಗಿ ಅಂಬೇಡ್ಕರ್ ಅವರನ್ನು ಕುರಿತಾದ ರಾಜ್ಯಮಟ್ಟದ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ.

ಜೂನ್ 30, 2024 ರ ಒಳಗೆ ನಿಮ್ಮ ಲೇಖನಗಳು  godhoolikannadasangha@sedc.ac.in ಈ ವಿಳಾಸಕ್ಕೆ ಅಥವಾ ಪ್ರಾಂಶುಪಾಲರು, ಶೇಷಾದ್ರಿಪುರಂ ಸಂಜೆ ಕಾಲೇಜು, ನಂ-27, ನಾಗಪ್ಪ ಬೀದಿ, ಶೇಷಾದ್ರಿಪುರಂ, ಬೆಂಗಳೂರು-560020 ಇಲ್ಲಿಗೆ ತಲುಪುವಂತೆ ಅಂಚೆ ಮೂಲಕ ಕಳುಹಿಸತಕ್ಕದ್ದು.

ಲೇಖನದ ವಿಷಯಗಳು:
ಅಂಬೇಡ್ಕರ್ ಚಿಂತನೆಗಳು ಮತ್ತು ಸಾಮಾಜಿಕ ನ್ಯಾಯ
ಅಂಬೇಡ್ಕರ್ ಚಿಂತನೆಗಳು ಮತ್ತು ಆರ್ಥಿಕ ವ್ಯವಸ್ಥೆ
ಅಂಬೇಡ್ಕರ್ ಚಿಂತನೆಗಳು ಮತ್ತು ಕೃಷಿ
ಅಂಬೇಡ್ಕರ್ ಚಿಂತನೆಗಳು ಮತ್ತು ವಾಣಿಜ್ಯ ವ್ಯವಹಾರ
ಅಂಬೇಡ್ಕರ್ ಚಿಂತನೆಗಳು ಮತ್ತು ಯುವಜನತೆ
ಅಂಬೇಡ್ಕರ್ ಚಿಂತನೆಗಳು ಮತ್ತು ಶಿಕ್ಷಣ
ಅಂಬೇಡ್ಕರ್ ಚಿಂತನೆಗಳು ಮತ್ತು ಸಂವಿಧಾನ
ಅಂಬೇಡ್ಕರ್ ಚಿಂತನೆಗಳು ಮತ್ತು ರಾಜಕೀಯ ವ್ಯವಸ್ಥೆ
ಅಂಬೇಡ್ಕರ್ ಚಿಂತನೆಗಳು ಮತ್ತು ಮೀಸಲಾತಿ
ಅಂಬೇಡ್ಕರ್ ಚಿಂತನೆಗಳು ಮತ್ತು ಸ್ತ್ರೀ ಸಬಲೀಕರಣ
ಅಂಬೇಡ್ಕರ್ ಚಿಂತನೆಗಳು ಮತ್ತು ಆಧ್ಯಾತ್ಮ

- Advertisement -

ನಿಯಮಗಳು:
ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ
ಯಾವುದಾದರೂ ಒಂದು ವಿಷಯವನ್ನು ಆರಿಸಿಕೊಂಡು 5 ಪುಟಕ್ಕೆ ಮೀರದಂತೆ ಂ 4 ಅಳತೆಯ ಬಿಳಿ ಹಾಳೆಯಲ್ಲಿ ಲೇಖನವನ್ನು ಸಿದ್ದಪಡಿಸಿ ಕಳುಹಿಸಬೇಕು.
ಲೇಖನಗಳು ಸ್ವಂತ ಆಲೋಚನೆಯಿಂದ ಕೂಡಿದ್ದವುಗಳಾಗಿರಬೇಕು. ಇತರೇ ಯಾವುದೇ ಪುಸ್ತಕಗಳಿಂದ ನಕಲು ಮಾಡಿರಬಾರದು.
ಲೇಖನಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿಯೇ ಬರೆದಿರಬೇಕು.
ಲೇಖನದ ಕೊನೆಯಲ್ಲಿ  ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇ ಮೈಲ್ ವಿಳಾಸ ನಮೂದಿಸಿರಬೇಕು.
ಲೇಖನವನ್ನು ವಿದ್ಯುನ್ಮಾನ ಪ್ರತಿಯಲ್ಲಿ (Soft copy) ನೀಡುವುದಾದರೆ ಕನ್ನಡ ನುಡಿ ಅಥವಾ ಬರಹ ಫಾಂಟ್‍ನಲ್ಲಿ ಟೈಪಿಸಿರಬೇಕು. ತಮ್ಮ ಸ್ವಹಸ್ತದಲ್ಲಿಯೂ ಬರೆಯಬಹುದು.
ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು.
ಲೇಖನಗಳನ್ನು ತಮ್ಮ ಕಾಲೇಜಿನ ಪ್ರಾಂಶುಪಾಲರಿಂದ ಅನುಮೋದಿಸಿ ( attested ) ಕಳುಹಿಸಿಕೊಡುವುದು ಕಡ್ಡಾಯವಾಗಿರುತ್ತದೆ. ಇ ಮೇಲ್ ಮುಖಾಂತರ ಕಳುಹಿಸುವವರು ಪ್ರಾಂಶುಪಾಲರ ಧೃಡೀಕರಣ ಪತ್ರವನ್ನು ಪಿಡಿಎಫ್ ಮೂಲಕ ಕಳುಹಿಸತಕ್ಕದ್ದು.


ಡಾ ಸತ್ಯಮಂಗಲ ಮಹಾದೇವ
ಡಾ ಎನ್.ಎಸ್. ಸತೀಶ್
ಸಂಚಾಲಕರು        ಪ್ರಾಂಶುಪಾಲರು
ಅಂಬೇಡ್ಕರ್ ಅಧ್ಯಯನ ಕೇಂದ್ರ

Previous article
Next article
- Advertisement -
- Advertisement -

Latest News

ಕಿಟದಾಳದಲ್ಲಿ ಜರುಗಿದ ಕಲಿಕಾ ಹಬ್ಬ

ಸೀರೆ ತೊಟ್ಟುಕೊಂಡು ಬಂದ ಬಾಲಕಿಯರು, ಮದುವಣಗಿತ್ತಿಯಂತೆ ಕಂಗೊಳಿಸಿದ ಶಾಲಾ ಆವರಣ. ಎಲ್ಲರ ತಲೆ ಮೇಲೊಂದು ಕಲರ್ ಕಲರ್ ಪೇಪರ್ ಟೋಪಿ. ಹೌದು, ಹೀಗೆ ಶಾಲೆಯಲ್ಲೊಂಥರಾ ಹಬ್ಬದ...
- Advertisement -

More Articles Like This

- Advertisement -
close
error: Content is protected !!
Join WhatsApp Group