ಎಲ್ಲಿ ರಾಮನೋ ಅಲ್ಲಿ ಹನುಮನು

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ದವನದ ಹುಣ್ಣಿಮೆ ಹನುಮ ಜಯಂತಿಯ ಸಡಗರ. ನಾಡಿನ ಎಲ್ಲ ಹನುಮಾನ್ ಮಂದಿರಗಳಲ್ಲಿ ಹನುಮಾನ್ ಹುಟ್ಟಿದ ಕ್ಷಣಗಳನ್ನು ಅವನನ್ನು ತೊಟ್ಟಿಲಲ್ಲಿ ಹಾಕುವ ಮೂಲಕ ಪೂಜೆ ಕಾರ್ಯಗಳು ನಡೆಯುವುದನ್ನು ಗಮನಿಸಬಹುದು. ಎಲ್ಲಿ ಹನುಮ ದೇವಾಲಯಗಳಿವೆ. ಅಲ್ಲೆಲ್ಲ ಹನುಮ ಜಯಂತಿ ಆಚರಣೆ ಜರುಗುತ್ತದೆ. ಹಾಗಾದರೆ ಹನುಮ ಜನನ ತಳೆದ ಸ್ಥಳದ ನೆನಪನ್ನು ಈ ಸಂದರ್ಭದಲ್ಲಿ ಕಂಡು ಬಂದರೆ ಜನ್ಮ ಸಾರ್ಥಕವಲ್ಲವೇ.?

ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ. ಹನುಮಂತನು ಕಿಷ್ಕಿಂದೆಯಲ್ಲಿ ಸುಗ್ರೀವನ ಜೊತೆಯಲ್ಲಿರುವಾಗ ಸೀತೆಯನ್ನು ಹುಡುಕಿಕೊಂಡು ಶ್ರೀರಾಮ ಅಲ್ಲಿಗೆ ಬಂದಾಗ ತನ್ನ ಸ್ವಾಮಿಯೊಡನೆ ಬೇಟಿಯಾಗುತ್ತದೆ. ಅಲ್ಲಿಂದ ಮುಂದೆ ರಾಯಾಯಣದ ಅಂತ್ಯದವರೆಗೂ ಹನುಮಂತನ ಪಾತ್ರ ತುಂಬ ಮಹತ್ವವನ್ನು ಪಡೆಯುತ್ತ ಸಾಗುವುದನ್ನು ನಾವು ಕಾಣುತ್ತೇವೆ.

- Advertisement -

ರಾಮಾಯಣದ ಅಂಜನೇಯನ ಪ್ರವೇಶದ ಸಂದರ್ಭದಿಂದ ಬರುವ ಕಾಂಡವನ್ನು ಸುಂದರಕಾಂಡ ಎಂದು ಕರೆಯಲಾಗಿದೆ.ಸೀತಾಮಾತೆಯನ್ನು ಹುಡುಕುವ ಪ್ರತಿ ಸಂದರ್ಭಗಳೂ ಜೊತೆಗೆ ರಾಮ-ರಾವಣರ ಯುದ್ದ ಸಂದರ್ಭದಲ್ಲಿ ಮೂರ್ಛಿತನಾದ ಲಕ್ಷ್ಮಣನನನ್ನು ಬದುಕಿಸಲು ಸಂಜೀವಿನಿ ಪರ್ವತ ಹೊತ್ತು ತರುವಲ್ಲಿ. ಲಂಕೆಗೆ ಸೇತುವೆ ನಿರ್ಮಿಸುವಲ್ಲಿ. ಜೊತೆಗೆ ಯುದ್ದದಲ್ಲಿ ಗೆದ್ದಾಗ ಸುದ್ದಿಯನ್ನು ಹೊತ್ತು ಸೀತಾಮಾತೆಯಲ್ಲಿಗೆ ಹೋಗುವವರೆಗೂ ನಡೆಯುವ ಪ್ರತಿಯೊಂದು ಘಟನೆಯಲ್ಲಿಯೂ ಹನುಮಂತನ ಪಾತ್ರವಿದೆ.ಷ್ಟೇ ಅಲ್ಲ ಲಂಕೆಗೆ ಪ್ರವೇಶ ಮಾಡಿ ವಿಭೀಷಣನ ಮನಃಪರಿವರ್ತನೆ ಮಾಡಿ ಅವನನ್ನು ರಾಮಭಕ್ತನನ್ನಾಗಿ ಮಾಡುವಲ್ಲಿ ಹನುಮಂತನ ಪಾತ್ರ ಬಹುಮುಖ್ಯವಾದುದು. ಯುದ್ದ ಗೆದ್ದ ಮೇಲೆ ಸಣ್ಣ ಮಗುವಾಗಿ ಸೀತಾಮಾತೆಯ ತೊಡೆಯ ಮೇಲೆ ಮಲಗಿ ಅವಳಲ್ಲಿ ಮಾತೃ ಸ್ವರೂಪವನ್ನು ಪಡೆದವನು ಹನುಮಂತ.

ಶ್ರೀ ರಾಮನ ಪಟ್ಟಾಭೀಷೇಕವಾದ ಮೇಲೆ ಅರಮನೆಯಲ್ಲಿ ಘಟನೆಯೊಂದು ನಡೆಯುತ್ತದೆ.ರಾಮನು ಸುಗ್ರೀವ,ವಿಭೀಷಣ ಮುಂತಾದವರಿಗೆ ಪಟ್ಟಾಭಿಷೇಕದ ಕುರುಹಾಗಿ ತನ್ನ ಕೈಯಿಂದಲೇ ಒಂದೊಂದು ಉಡುಗೊರೆ ಕೊಡುತ್ತಾನೆ ಆದರೆ ಹನುಮಂತನಿಗೆ ಏನನ್ನೂ ಕೊಡುವುದಿಲ್ಲ.ಅಲ್ಲಿದ್ದವರಿಗೆಲ್ಲ ಆಶ್ಚರ್ಯ.ಸೀತಾ-ರಾಮರಿಗೆ ಮಾತ್ರ ಅದರ ಹಿಂದಿನ ರಹಸ್ಯ ಗೊತ್ತಿತ್ತು. ಆದರೂ ಸೀತಾಮಾತೆ ಎಲ್ಲರೆದುರು ಇದು ತೋರಬಾರದೆಂದು ತನ್ನ ಕೊರಳಿನಲ್ಲಿದ್ದ ಬಹು ಅಮೂಲ್ಯವಾದ ರತ್ನಹಾರವೊಂದನ್ನು ಹನುಮಂತನಿಗೆ ನೀಡಿದಳು.

ಭಕ್ತಿಯಿಂದ ಅದನ್ನು ಪಡೆದ ಆತ ಅದರ ಒಂದೊಂದು ಮಣಿಯನ್ನು ಕಿತ್ತು ಒಡೆದು ಅದನ್ನು ದೃಷ್ಟಿಸಿ ನೋಡತೊಡಗಿದ.ಅದನ್ನು ನೋಡುತ್ತಿದ್ದ ಕೆಲವರು ಎಷ್ಟೇ ಆದರೂ ಅದು ಕಪಿ ತಾನೇ.? ಅದಕ್ಕೆ ನವರತ್ನ ಹಾರದ ಬೆಲೆಯೇನು ಗೊತ್ತು.? ಎಂದು ಛೇಡಿಸಿದರು.

ಆಗ ಹನುಮಂತ ಕೊಟ್ಟ ಉತ್ತರ ತಾವೆಲ್ಲರೂ ಏಕೆ ಕೋಪಗೊಳ್ಳುವಿರಿ.? ನಾನು ಈ ಮಣಿಗಳ ಮಹತ್ವವನ್ನು ಪರೀಕ್ಷಿಸುತ್ತಿರುವೆ.ಇವುಗಳಲ್ಲಿ ಬಹಳ ಕಾಂತಿಯಿದೆ.ಇವುಗಳು ಹೆಚ್ಚು ಬೆಲೆ ಬಾಳುತ್ತವೆ.ಇವಕ್ಕೆ ಬೆಲೆ ಕಟ್ಟಲೂ ಸಾಧ್ಯವಾಗದಿರಬಹುದು.ಇವುಗಳನ್ನು ಧರಿಸುವುದರಿಂದ ಸೌಂದರ್ಯವೂ ಹೆಚ್ಚಬಹುದು.ನನಗೆ ಇವುಗಳಲ್ಲಿ ನನ್ನ ಹೃದಯದೊಡೆಯ ಶ್ರೀ ರಾಮ ಮಾತೆ ಸೀತಾಮಾತೆ ಇಬ್ಬರೂ ಕಾಣಿಸುತ್ತಿಲ್ಲವಲ್ಲ.ಯಾವ ವಸ್ತುವಿನ ಹೃದಯದಲ್ಲಿ ಭಗವಂತನ ದರ್ಶನವಾಗುತ್ತದೆಯೋ ಆ ವಸ್ತುವೇ ಮಹತ್ವಪೂರ್ಣವಾದುದು.

ಎಂದಾಗ ಎಲ್ಲರ ಮುಖದಲ್ಲಿ ಅಚ್ಚರಿ ಮತ್ತು ಹನುಮಂತನ ಭಕ್ತಿನಿಷ್ಠೆಯ ಅರಿವಾಯಿತು. ಆದರೂ ಅವನ ರಾಮನಿಷ್ಠೆ ಪರೀಕ್ಷಿಸಲು ಸವಾಲು ಎಸೆದರು. ನಿನ್ನ ಹೃದಯದಲ್ಲಿ ಸೀತಾ-ರಾಮರಿದ್ದಾರೆಯೇ.? ಎಂದು ಪ್ರಶ್ನಿಸಲು ತನ್ನ ಎರಡು ಕೈಗಳಿಂದ ಹೃದಯವನ್ನು ಬಗೆದು ಸೀತಾ-ರಾಮರನ್ನು ತೋರಿಸಲು ಎದುರಿಗಿದ್ದ ರಾಮಚಂದ್ರನು ಎದ್ದು ಬಂದು ತನ್ನ ಭಕ್ತನನ್ನು ಗಾಢವಾಗಿ ಆಲಂಗಿಸಿಕೊಂಡನು.ಶ್ರೀ ರಾಮನ ಸ್ಪರ್ಶದಿಂದ ಅವನ ಹೃದಯ ಮೊದಲಿನಂತಾಯಿತು .ರಾಮನ ಸೇವೆಯನ್ನು ಬಹಳ ಸ್ವಾಮಿನಿಷ್ಠೆಯಿಂದ ಮಾಡಿದವನು ಹನುಮಂತ.

ರಾಮಾಯಣದ ಎಲ್ಲ ಘಟನೆಗಳ ಕೊನೆಯಲ್ಲಿ ರಾಮ ಸ್ವರ್ಗಲೋಕಕ್ಕೆ ಹೊರಟಾಗ ಎಲ್ಲರೂ ಅವನನ್ನು ಬೀಳ್ಕೊಡುವ ಕೊನೆಯಲ್ಲಿ ಹನುಮಂತನ ಸರದಿ ಬಂದಾಗ ಅವನು ರಾಮನ ಕಾಲುಗಳ ಮೇಲೆ ಬಿದ್ದು “ಸ್ವಾಮೀ ನಾನು ನಿಮ್ಮ ಚರಣಗಳಲ್ಲಿಯೇ ಇರುತ್ತೇನೆ ಎಂದು ಪ್ರಾರ್ಥಿಸಿದನು. ಆಗ ಶ್ರೀ ರಾಮನು. ಹನುಮಂತ ಇನ್ನು ನಾನು ನನ್ನ ಲೋಕಕ್ಕೆ ಹೋಗುತ್ತಿದ್ದೇನೆ.

ಆದರೆ ನೀನು ದುಃಖ ಪಡಬೇಕಾಗಿಲ್ಲ.ನೀನು ಈ ಪ್ರಥ್ವಿಯಲ್ಲಿಯೇ ಉಳಿದು ಶಾಂತಿ,ಪ್ರೇಮ ಮತ್ತು ಜ್ಞಾನದ ಪ್ರಚಾರ ಮಾಡು, ನೀನು ಸ್ಮರಿಸಿದಾಗಲೆಲ್ಲ ನಾನು ನಿನ್ನ ಮುಂದಿರುತ್ತೇನೆ.ಎಲ್ಲಿ ಎಲ್ಲಿ ನನ್ನ ಕಥೆಯು ನಡೆಯುತ್ತಿರುತ್ತದೆಯೋ ಅಲ್ಲಿ ಅಲ್ಲಿ ನೀನು ಉಪಸ್ಥಿತನಾಗಿರು. ಎಂದು ಹೇಳಿದನು.

ಶ್ರೀ ರಾಮನು ಪರಂಧಾಮವನ್ನೈದಿದ ಮೇಲೆ ಹನುಮಂತನು ಶ್ರೀ ರಾಮ ಲೀಲೆ,ಗುಣಗಳ ಕೀರ್ತನೆ ಮಾಡುವುದು. ಹಾಗೂ ಕೇಳುವ ಮೂಲಕ ರಾಮನ ಗುಣಗಾನದಲ್ಲಿ ತೊಡಗಿದ.ಅಂಜನೇಯನನ್ನು ನಂಬಿದ ಎಲ್ಲರಿಗೂ ಒಂದಲ್ಲ ಒಂದು ಪ್ರತಿಫಲಗಳು ದೊರೆಯುತ್ತ ಸಾಗಿದವು.ಎಲ್ಲಿ ರಾಮಕಥೆ ಜರುಗುತ್ತದೆಯೋ ಅಲ್ಲಿ ಹನುಮಂತನು ಭಕ್ತಿಯಿಂದ ಕೈಮುಗಿದು ಕೇಳುತ್ತಾನೆ ಎಂಬ ಮಾತಿದೆ. ಇಂದಿಗೂ ರಾಮನಾಮ ಸ್ಮರಿಸುವವರು ಹನುಮನ ಗುಣಗಾನವನ್ನು ಕೂಡ ಮಾಡುವರು.

ಶ್ರೀರಾಮನ ಮಂದಿರಗಳು ಎಲ್ಲೆಡೆ ಇರದಿರಬಹುದು.ರಾಮಭಕ್ತನಾದ ಹನುಮಂತನ ದೇಗುಲಗಳು ಇಲ್ಲದ ಊರುಗಳಿಲ್ಲ ಎಂಬಂತೆ ಎಲ್ಲಿ ಹನುಮನ ಮಂದಿರಗಳಿವೆಯೋ ಅಲ್ಲಿ ಜಯ ರಾಮ ಶ್ರೀ ರಾಮ ಜಯ ಜಯ ರಾಮ ಎಂಬ ರಾಮಮಂತ್ರ ಜಪ ಇದ್ದೇ ಇದೆ.ಹೀಗಾಗಿ ಎಲ್ಲಿ ರಾಮನೋ ಅಲ್ಲಿ ಹನುಮನು. ಎಲ್ಲಿ ಹನುಮನೋ ಅಲ್ಲಿ ರಾಮನು ಎಂಬ ಮಾತು ಇಂದಿಗೂ ಕೂಡ ಸತ್ಯವಾಗಿ ಯುಗಯುಗ ಕಳೆದರೂ ಹನುಮನ ರೂಪದಲ್ಲಿ ಭಕ್ತರು ರಾಮನ ಭಕ್ತ ಹನುಮನಿಗೂ ಕೂಡ ತನ್ನದೇ ಆದ ಸ್ಥಾನವನ್ನು ನೀಡಿರುವುದಕ್ಕೆ ಸಾಕ್ಷಿ.

ಹಿಂದೂ ದೇವತೆಗಳಲ್ಲಿ ವಾಯುಪುತ್ರ. ಕಪೀವೀರನೆಂದೇ ಕರೆಯಲ್ಪಡುವ ರಾಮನ ಭಕ್ತ.

ಗಂಗಾವತಿ ಮೂಲಕ ಕಿಷ್ಕಿಂದಾ ರೆಸಾಟ್ ್ ಮಾರ್ಗದಲ್ಲಿ ಅಂಜನಾದ್ರಿ ಪರ್ವತವಿದೆ. ಇಲ್ಲಿ ಬರುವವರು ಮಾತ್ರ ವಿರಳ.ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಹನುಮನುದಿಸಿದ ತಾಣವಾಗಿ ಜನನಿಭಿಡವಾಗುತ್ತಿದೆ. ಏಕೆಂದರೆ ಇದೊಂದು ಬೆಟ್ಟ ಪ್ರದೇಶ,ಈ ಬೆಟ್ಟದ ಮೇಲೆ ದೇವಾಲಯ ಕಾಣುತ್ತದೆ.ಕೇವಲ ಮೆಟ್ಟಿಲುಗಳನ್ನೇರುವ ದಮ್ ಇದ್ದವರಿಗೆ ಮಾತ್ರ ಅಂಜನಾ ಪರ್ವತ ನೋಡಲು ಸಾಧ್ಯ. ಇಲ್ಲದಿದ್ದಲ್ಲಿ ಕೆಳಗೆ ನಿಂತು ಬೆಟ್ಟದ ತುದಿಯಲ್ಲಿ ಕಂಡು ಬರುವ ದೇವಾಲಯ ನೋಡಿ ಮುಂದೆ ಸಾಗಬೇಕಷ್ಟೇ.
ಅಂಜನಾದ್ರಿ ಪರ್ವತಕ್ಕೆ ಬರಬೇಕು. ರಾಮಾಯಣದಲ್ಲಿ ಬರುವ ವಾನರ ರಾಜ ಕೇಸರಿ ಮತ್ತು ಅವನ ಪತ್ನಿ ಅಂಜನಾದೇವಿಯರ ಪುತ್ರ ಆಂಜನೇಯನ ಜನ್ಮಸ್ಥಳ ಈ ಅಂಜನಾದ್ರಿ ಬೆಟ್ಟ.

ಇದು ಗಂಗಾವತಿಯಿಂದ ಕಿಷ್ಕಿಂದಾ ಮಾರ್ಗದಲ್ಲಿ 16 ಕಿ.ಮೀ ಅಂತರದಲ್ಲಿದೆ. ಹುಲಗಿಯಿಂದ ಕೂಡ 15 ಕಿ.ಮೀ ಇದ್ದು ಹುಲಗಿ ಗಂಗಾವತಿ ಮಾರ್ಗದಲ್ಲಿ ಬರುತ್ತದೆ. ಅಂದರೆ ಹುಲಗಿ ಅಥವ ಗಂಗಾವತಿ ಯಾವುದೇ ಮಾರ್ಗದಿಂದಲೂ ಸುಲಭವಾಗಿ ತಲುಪಬಹುದು.ಅಂದರೆ ಸಾರಿಗೆ ವ್ಯವಸ್ಥೆ ಅನುಕೂಲವಿದೆ.

ಒಂದು ದಿನ ವಾನರರಾಜ ಕೇಸರಿ ಮತ್ತು ಅಂಜನಾದೇವಿಯರು ತಮ್ಮ ರಾಜ್ಯದ ಸುಮೇರು ಪರ್ವತದ ಮೇಲೆ ವಿಹರಿಸುತ್ತಿದ್ದರು.ಮಂದ ಮಂದವಾಗಿ ವಾಯು ಬೀಸುತ್ತಿತ್ತು.ಹಾಗೆ ಮೃದುವಾಗಿ ಗಾಳಿ ಬೀಸುತ್ತಿರುವಾಗ ಅಂಜನಾದೇವಿಯ ಸೀರೆಯ ಸೆರಗು ಗಾಳಿಗೆ ಮೇಲಕ್ಕೆ ಹಾರಿತು.ಅವಳಿಗೆ ತನ್ನ ದೇಹವನ್ನು ಯಾರೋ ಸ್ಪರ್ಶಿಸುತ್ತಿರುವರೆಂಬ ಅನುಭವವಾಯಿತು.ಅವಳು ತನ್ನ ವಸ್ತ್ರವನ್ನು ಸರಿ ಮಾಡಿಕೊಂಡು ಕೋಪದಿಂದ”ನನ್ನ ಪಾತಿವೃತ್ಯವನ್ನು ಹಾಳು ಮಾಡುತ್ತಿರುವ ದುಷ್ಟನು ಯಾರು.? ನನ್ನ ಇಷ್ಟ ದೇವರಾದ ಪತಿದೇವ ನನ್ನ ಎದುರಿಗೇ ಇದ್ದಾರೆ.

ಯಾವನು ನನ್ನ ಪಾತಿವೃತ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾನೆ ನಾನು ಈಗಲೇ ಶಾಪವನ್ನು ಕೊಟ್ಟು ಅವನನ್ನು ಭಸ್ಮ ಮಾಡುತ್ತೇನೆ ಎಂದು ಕೋಪದಿಂದ ಅವಳಾಡಿದ ಮಾತಿಗೆ ಪ್ರತಿಯಾಗಿ ವಾಯುದೇವನೇ ಹೇಳುತ್ತಿದ್ದಾನೆಂಬಂತೆ ಅವಳಿಗೆ ಭಾಸವಾಗಿ”ದೇವೀ ನಾನು ನಿನ್ನ ವ್ರತವನ್ನು ಕೆಡಿಸಲಿಲ್ಲ.ದೇವೀ ನಿನಗೆ ನನ್ನಷ್ಟೇ ತೇಜಸ್ವಿ ಮತ್ತು ಬಲಶಾಲಿಯಾದ ಹಾಗೂ ಬುದ್ದಿಶಕ್ತಿಯಲ್ಲಿ ಅದ್ವಿತೀಯನಾದ ಮಗನು ಜನಿಸುತ್ತಾನೆ ಅವನು ಭಗವಂತನ ಸೇವಕನಾಗುತ್ತಾನೆ ನಾನು ಅವನನ್ನು ರಕ್ಷಿಸುತ್ತೇನೆ.”ಎಂಬಂತೆ ಭಾಸವಾಯಿತು.

ಅನಂತರ ಅಂಜನಾದೇವಿ ಮತ್ತು ಕೇಸರಿ ತಮ್ಮ ಸ್ಥಾನಕ್ಕೆ ಹೊರಟುಹೋದರು. ಭಗವಾನ್ ಶಂಕರನು ಅಂಶರೂಪದಿಂದ ಅಂಜನಿಯ ಕಿವಿಯ ಮುಖಾಂತರ ಅವಳ ಗರ್ಭದಲ್ಲಿ ಪ್ರವೇಶಿಸಿದನು. ಚೈತ್ರ ಶುಕ್ಲ ಪೌರ್ಣಮಿ ಮಂಗಳವಾರದ ದಿನ ಅಂಜನಾದೇವಿಯ ಮನೆಯಲ್ಲಿ ಭಗವಾನ್ ಶಂಕರನು ವಾನರ ರೂಪದಲ್ಲಿ ಜನಿಸಿದನು ಎಂಬುದು ರಾಮಾಯಣದಲ್ಲಿ ಬರುವ ದೃಷ್ಟಾಂತ.ಅದು ಈ ಅಂಜನಾ ಪರ್ವತದ ಮೇಲೆ ಅಂಜನೇಯನ ಜನ್ಮಸ್ಥಳ.

ಮಹಾಭಾರತದಲ್ಲಿ ಶ್ರೀ ಕೃಷ್ಣನ ಅವತಾರ ಶ್ರೀರಾಮ.ಅಲ್ಲಿಯೂ ಕೂಡ ಹನುಮಂತನ ಸೇವೆ ನಿರಂತರವಾಗಿ ಸಾಗುತ್ತದೆ.ಕರ್ಣ ಅರ್ಜುನರ ಮಧ್ಯೆ ಕಾಳ ನಡೆವಾಗಲೂ ಕೂಡ ಅರ್ಜುನನ ರಥದ ಮುಂದೆ ಹನುಮಂತನು ವಿರಾಜಮಾನನಾಗಿದ್ದು ಕೂಡ ಶ್ರೀ ಕೃಷ್ಣನ ಅನತಿಯಂತೆ.ಇಂಥ ಹನುಮಂತ ತನ್ನ ವಾಯುಶಕ್ತಿಯಿಂದ ಇಂದಿಗೂ ಜನಮಾನಸದಲ್ಲಿ ವಿರಾಜಮಾನನಾಗಿರುವನು.

ಮುಖ್ಯ ಪ್ರಾಣನು ಎಂತಹ ದೊಡ್ಡ ತತ್ವಕೋವಿದನಾಗಿದ್ದಾನೆಂಬುದು ರಾಮರಹಸ್ಯ ಉಪನಿಷತ್ತಿನಿಂದ ತಿಳಿದು ಬರುತ್ತದೆ. ಸನಕ, ಸನಂದನ, ಸನತ್ಕುಮಾರ ಹಾಗೂ ಸನಾತನ ಈ ನಾಲ್ಕು ಸಹೋದರರು ಅವನಿಂದರಾಮಮಂತ್ರದ ರಹಸ್ಯವನ್ನು ಪಡೆದರು.ದೊಡ್ಡ ದೊಡ್ಡ ಋಷಿಮುನಿಗಳಿಗೂ ವಾಯುಪುತ್ರ ಸಹಕಾರಿಯಾಗಿ ನಿಂತನು,.ತುಲಸೀದಾಸ ಮಹಾತ್ಮರು ಈ ಯುಗದಲ್ಲಿಯೇ ಮಾರುತಿಯನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರು. ಭಗವಾನ್ಹ ನುಮಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವಂತಹ ಸಾಧಕರು ಇಂದಿಗೂ ಇದ್ದಾರೆ. ಅನೇಕ ಮಂತ್ರಗಳು ಹನುಮಾನ್ ಚಾಲೀಸಾ, ಅನುಷ್ಠಾನಗಳ ಮೂಲಕ ಇಂದಿಗೂ ಹನುಮಂತನನ್ನು ಸ್ಮರಣೆ ಮಾಡುತ್ತಿರುವುದಕ್ಕೆ ಸಾಕ್ಷಿ. ಅವನ ಕೃಪೆಯಿಂದ ಭಗವಂತ ರಾಮನ ಪ್ರಾಪ್ತಿಯೂ ಆಗುತ್ತದೆ ಎಂಬ ನಂಬಿಕೆ ನಿಶ್ಚಲವಾಗಿದೆ.


ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಶಿಂದೋಗಿ ಕ್ರಾಸ್
ಮುನವಳ್ಳಿ-591117
ತಾಲೂಕ;ಸವದತ್ತಿ ಜಿಲ್ಲೆ;ಬೆಳಗಾವಿ
8971117442.7975547298

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!