ಮೈಸೂರು – ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಅವರನ್ನು ಮೈಸೂರಿನ ಹೇಮಗಂಗಾ ಕಾವ್ಯ ಬಳಗದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
.ಸನ್ಮಾನ ಸ್ವೀಕರಿಸಿದ ಭೇರ್ಯ ರಾಮಕುಮಾರ್ ಮಾತನಾಡಿ, ಎಲ್ಲಾ ಕೇಂದ್ರ ಸರ್ಕಾರಿ,ರಾಜ್ಯಸರ್ಕಾರಿ,ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಹಾಗೂ ವ್ಯಾಪಾರ ಕೇಂದ್ರಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಬಳಕೆಯಾಗಬೇಕು.ಜಿಲ್ಲಾ ಕೇಂದ್ರದ ಹಾಗೂ ಕವಿಗಳು ಜನಿಸಿದ ಗ್ರಾಮಗಳ ಪ್ರಮುಖ ರಸ್ತೆಗಳಿಗೆ ಹಾಗೂ ವೃತ್ತ ಗಳಿಗೆ ಕವಿಗಳ,ಕಲಾವಿದರ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಎಲ್ಲಿಯಾದರೂ ಕನ್ನಡ ಭಾಷೆ ಬಳಕೆ ಬಗ್ಗೆ ಅಸಡ್ಡೆ ತೋರಿಸಿದರೆ ಕನ್ನಡ ಜಾಗೃತಿ ಸಮಿತಿಗೆ ದೂರು ನೀಡುವಂತೆ ಅವರು ಸಾಹಿತ್ಯಾಭಿಮಾನಿಗಳಗೆ ಕರೆನೀಡಿದರು.
ಸಾಹಿತಿಗಳಾದ ಶ್ರೀಮತಿ ಎ.ಹೇಮಗಂಗಾ,ಜಯಪ್ಪ ಹೊನ್ನಾಳಿ,ಆರಕ್ಷಕ ಅಧಿಕಾರಿ ಹಾಗೂ ಕವಿಗಳಾದ ಮಹಾದೇವನಾಯಕ,ಮೈಸೂರು ರಂಗನಾಥ್ ,ಎಂ.ಬಿ.ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.