Thursday, January 21, 2021

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ

Must Read

ಪ್ರೆಸ್ ಅಸೋಸಿಯೇಶನ್ ಪದಾಧಿಕಾರಿಗಳ ಸನ್ಮಾನ

‘ಕಲಾವಿದರ ಕಲೆ ಮತ್ತು ಹೃದಯ ಶ್ರೀಮಂತವಾದದ್ದು’ - ಬಾಲಶೇಖರ ಬಂದಿ ಮೂಡಲಗಿ: ‘ಕಲಾವಿದರು ಆರ್ಥಿಕವಾಗಿ ಬಡವರಾಗಿದ್ದರೂ ಸಹ ಅವರು ನಂಬಿರುವ ಕಲೆ ಮತ್ತು ಹೃದಯವು ಶ್ರೀಮಂತವಾಗಿರುತ್ತದೆ’ ಎಂದು...

ಡ್ರಗ್ಸ್ ಕೇಸ್; ರಾಗಿಣಿಗೆ ಜಾಮೀನು

ಕೊನೆಗೂ ೧೪೦ ದಿನಗಳ ಜೈಲುವಾಸದ ನಂತರ ಕನ್ನಡದ ಚಿತ್ರನಟಿ ರಾಗಿಣಿ ದ್ವಿವೇದಿಗೆ ಕೋರ್ಟ್ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.ಡ್ರಗ್ಸ್ ಕೇಸಿನಲ್ಲಿ ಜೈಲು ಪಾಲಾಗಿದ್ದ ರಾಗಿಣಿ ಹಾಗೂ ಸಂಜನಾ...

ದಿನಕ್ಕೊಂದು ಸಾಮಾನ್ಯಜ್ಞಾನ

"ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು". ಧರ್ಮ× ಅಧರ್ಮ, ಧಾರ್ಮಿಕ ಕ್ಷೇತ್ರ, ×ರಾಜಕೀಯ ಕ್ಷೇತ್ರ, ಭೂಮಿ×ಆಕಾಶ, ಸತ್ಯಜ್ಞಾನ × ಮಿಥ್ಯಜ್ಞಾನ,ಸ್ತ್ರೀ ಶಕ್ತಿ × ಪುರುಷ ಶಕ್ತಿ...
- Advertisement -

ಗೋಕಾಕ : ಸತತ ಪರಿಶ್ರಮ, ಸ್ಪಷ್ಟ ಗುರಿ ಮತ್ತು ಉತ್ತಮ ಮಾರ್ಗದರ್ಶನವಿದ್ದರೆ ಮಾತ್ರ ಉತ್ತಮ ಸಾಧನೆಗೈಯಲು ಸಾಧ್ಯವಾಗುತ್ತದೆ ಎಂದು ಮೂಡಲಗಿ ತಹಶೀಲ್ದಾರ ದಿಲ್‍ಶಾದ್ ಮಹಾತ್ ಹೇಳಿದರು.

ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ಕಳೆದ ಶನಿವಾರದಂದು ಜರುಗಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಸಾಧಕ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಮುಂದಿನ ಜೀವನ ಉಜ್ವಲವಾಗಲಿ. ನಿಮ್ಮಿಂದ ಹೆಚ್ಚೆಚ್ಚು ಸಾಧನೆಗಳು ನಡೆದು ಕಲಿತಿರುವ ಶಾಲೆಗೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು.

ಅಧ್ಯಕ್ಷತೆಯನ್ನು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ವಹಿಸಿ, ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೂಡಲಗಿ ವಲಯದ ವಿದ್ಯಾರ್ಥಿನಿ ಶೃತಿ ಪಾಟೀಲ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಲಗಿ ವಲಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಮಲ್ಲಾಪೂರ ಪಿಜಿಯ ಶಾಲೆಯ ಕು.ಶೃತಿ ಬಿ.ಪಾಟೀಲ(623), ದ್ವಿತೀಯ ಸ್ಥಾನ ಪಡೆದಿರುವ ಕಲ್ಲೋಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸತ್ಯನಾರಾಯಣ ಖಂಡ್ರಟ್ಟಿ(621) ಹಾಗೂ ತೃತೀಯ ಸ್ಥಾನ ಗಳಿಸಿರುವ ಕು.ಅಕ್ಷತಾ ಸಾಯನ್ನವರ(617) ಅವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯ ಅವರು ಸಾಧಕ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ.ಗಳ ನಗದು ಪುರಸ್ಕಾರ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ತಾಲೂಕಾ ಆರೋಗ್ಯಾಧಿಕಾರಿ ಡಾ.ಆರ್.ಎಸ್. ಬೆಣಚಿನಮರಡಿ, ಗೋಕಾಕ ಶಿಕ್ಷಣಾಧಿಕಾರಿ ಜಿ.ಬಿ. ಬಳಗಾರ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಪಿಎಸ್‍ಐ ಎಚ್.ವಾಯ್. ಬಾಲದಂಡಿ, ಉದ್ಯಮಿ ಹಾಗೂ ಹಿರಿಯ ಪತ್ರಕರ್ತ ದಿಲೀಪ ಮಜಲಿಕರ, ಘಯೋಮನೀಬ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಎಪಿಎಂಸಿ ಅಧ್ಯಕ್ಷ ಶ್ರೀಪತಿ ಗಣೇಶವಾಡಿ, ಪ್ರಭಾಶುಗರ ನಿರ್ದೇಶಕರಾದ ಲಕ್ಷ್ಮಣ ಗಣಪ್ಪಗೋಳ, ಶಿವಲಿಂಗ ಪೂಜೇರಿ, ಉದ್ಯಮಿ ಬಸವರಾಜ ಹತ್ತರಕಿ, ರಾಜಾಪೂರ ಪಿಕೆಪಿಎಸ್ ಅಧ್ಯಕ್ಷ ಬಸವಂತ ಕಮತಿ, ಎಂಡಿಆರ್‍ಎಸ್ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಗಂಗರಡ್ಡಿ, ಬಸವರಾಜ ಕಸ್ತೂರಿ, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.

- Advertisement -
- Advertisement -
- Advertisement -

Latest News

ಪ್ರೆಸ್ ಅಸೋಸಿಯೇಶನ್ ಪದಾಧಿಕಾರಿಗಳ ಸನ್ಮಾನ

‘ಕಲಾವಿದರ ಕಲೆ ಮತ್ತು ಹೃದಯ ಶ್ರೀಮಂತವಾದದ್ದು’ - ಬಾಲಶೇಖರ ಬಂದಿ ಮೂಡಲಗಿ: ‘ಕಲಾವಿದರು ಆರ್ಥಿಕವಾಗಿ ಬಡವರಾಗಿದ್ದರೂ ಸಹ ಅವರು ನಂಬಿರುವ ಕಲೆ ಮತ್ತು ಹೃದಯವು ಶ್ರೀಮಂತವಾಗಿರುತ್ತದೆ’ ಎಂದು...
- Advertisement -

More Articles Like This

- Advertisement -