spot_img
spot_img

ಕಟ್ಟಡ ಕಾರ್ಮಿಕರಿಗೆ ಕಾನೂನು ಅರಿವು-ನೆರವು  ಕಾರ್ಯಕ್ರಮ

Must Read

spot_img
- Advertisement -

ಸಿಂದಗಿ: ಕಾರ್ಮಿಕರು ಎಂದರೆ ವಿವಿಧ ರೀತಿಯ ಕೃಷಿ ಕಾರ್ಮಿಕರು, ಗೃಹ ಕಾರ್ಮಿಕರು, ಕಟ್ಟಡ ಕಾರ್ಮಿಕರು ಎಂದು ಕರೆಯುತ್ತೇವೆ. ಕಟ್ಟಡ ಕಾರ್ಮಿಕರಿಗೆ ಕಾರ್ಮಿಕರ ಗುರುತಿನ ಚೀಟಿ ಮಾಡಿಸಿಕೊಂಡರೆ ಮಾತ್ರ ಸರಕಾರಿ ಸೌಲಭ್ಯಗಳು ಸಿಗುತ್ತವೆ ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ವೈದ್ಯಕೀಯ ಸೌಲಭ್ಯ, ಮಕ್ಕಳ ಶಿಷ್ಯ ವೇತನ, ಮಕ್ಕಳ ಮದುವೆ ಸಹಾಯ ಧನ, ಅಂತ್ಯಕ್ರಿಯ ವೆಚ್ಚ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಬಹುದು ಇತ್ಯಾದಿ ಎಂದು ಜೆ.ಎಮ್.ಎಫ್.ಸಿ ನ್ಯಾಯವಾದಿ ಬಿ.ಎಸ್.ಪಾಟೀಲ ಹೇಳಿದರು.

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಇವರ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಹಮ್ಮಿಕೊಂಡ ಕಾನೂನು ಅರಿವು-ನೆರವು  ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ  ವಹಿಸಿದ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ ಆಲ್ವಿನ್ ಡಿಸೋಜ ಮಾತನಾಡಿ, ಮನುಷ್ಯ ಒಂದು ವ್ಯವಸ್ಥಿತವಾಗಿರಬೇಕು ಅಂದರೆ ಅದಕ್ಕೆ ಸಂವಿಧಾನ ಕಾರಣ  ಪ್ರತಿ ಮನುಷ್ಯನ ತಳಪಾಯ ಅಂದರೆ ಅದು ಸಂವಿಧಾನ. ಸಂವಿಧಾನ ನಮಗೆ ರಕ್ಷಣೆ ಮಾಡುವುದು. ಸರಕಾರ ನಮಗೆ ನೀಡುವ ಸೌಲಭ್ಯಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸ ಸಂಗಮ ಸಂಸ್ಥೆಯು ಮಾಡುತ್ತದೆ. ಕಾನೂನಿನ ಅಡಿಪಾಯ ನಮ್ಮ ಸಂವಿಧಾನ ಸಂವಿಧಾನದಲ್ಲಿ ಅಡಗಿರುವಂತಹ ವ್ಯವಸ್ಥೆಗಳು ಜನ ಸಾಮಾನ್ಯರಾಗಲು ನಮಗೆ ರಕ್ಷಣೆಯನ್ನು ಮಾಡುತ್ತದೆ. ಸಂವಿಧಾನ ಎಲ್ಲರಿಗೂ ಬೇಕು ಶಿಕ್ಷಣವಂತರಿಗೂ ಬೇಕು ಶಿಕ್ಷಣ ಇಲ್ಲದವರಿಗೂ ಬೇಕು. ಈ ಸಂವಿಧಾನ ಕುರಿತು ಪ್ರತಿಯೊಬ್ಬರಿಗೂ ನಂಬಿಕೆ ಇರಲಿ ಎಂದರು.

- Advertisement -

ಕಾರ್ಯಕ್ರಮದಲ್ಲಿ ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಪ್ರಾಸ್ತಾವಿಕವಾಗಿ ಮಾತನಾಡಿದರು.  ಡಾ|| ಎ ಪಿ ಜೆ ಅಬ್ದುಲ್ ಕಲಾಂ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಚೇತನಕುಮಾರ ಹೊಟಗಾರ ಹಾಜರಿದ್ದರು. ವಿಜಯ ವಿ ಬಂಟನೂರ ನಿರೂಪಿಸಿದರು. ರಾಜೀವ ಕುರಿಮನಿ ಸ್ವಾಗತಿಸಿದರು.  ಶ್ರೀಧರ ಕಡಕೋಳ ಭಾರತದ ಸಂವಿಧಾನದ ಪ್ರಾಸ್ತಾವನೆ ಓದಿದರು. ಮಲಕಪ್ಪ ಹಲಗಿ ವಂದಿಸಿದರು.

- Advertisement -
- Advertisement -

Latest News

ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ

ಬೆಳಗಾವಿ: ಮನುಷ್ಯ ಬದುಕಿನ ಹಕ್ಕುಗಳ ಮಹತ್ವವನ್ನು ಸಾರುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್‌ 10 ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. 1948ರಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group