‘ಕನಸು ಕನ್ನಡ’ ಹಾಡುಗಳ ಧ್ವನಿಸುರಳಿ ಬಿಡುಗಡೆ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಬೆಳಗಾವಿ: ಉದಯೋನ್ಮುಖ ಕವಿ ರುದ್ರಗೌಡ ಸಣಕಲ್‌ ಬರೆದ ಹಾಡುಗಳ ‘ಕನಸು ಕನ್ನಡ’ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಭಾನುವಾರ ಇಲ್ಲಿನ ವಿಜಯನಗರದಲ್ಲಿಸರಳವಾಗಿ ನಡೆಯಿತು.

ಈ ಧ್ವನಿಸುರಳಿಯಲ್ಲಿಒಟ್ಟು 4 ಹಾಡುಗಳಿದ್ದು, ಗಾಯಕರಾದ ವಿಶ್ವಪ್ರಸಾದ ಗಾನಗಿ, ಸುಹಾಸಿನಿ ದೇಶಪಾಂಡೆ, ರೂಪ ಕಡಗಾವಿ, ಗಗನದೀಪ್‌ ಕುರಳ್ಹೆ, ಸಂಜೀವ್‌ ಮಲಾಜುರೆ, ಸುಜಾತಾ ಸಣ್ಣಕ್ಕಿ ಹಾಡಿದ್ದಾರೆ.

ಯಾದವೇಂದ್ರ ಪೂಜಾರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಯೂಟ್ಯೂಬ್‌ನಲ್ಲೂಈ ಧ್ವನಿಸುರುಳಿ ಲಭ್ಯವಿದೆ.(https://youtu.be/Zr5axFdABa8)
ಹಾಡುಗಳ ರಚನಾಕಾರ ರುದ್ರಗೌಡ ಸಣಕಲ್‌ ಅವರು ಮೂಲತಃ ಮುರಗೋಡ ಗ್ರಾಮದವರು. ವೃತ್ತಿಯಲ್ಲಿಸಾಫ್ಟವೇರ್‌ ಇಂಜಿನಿಯರ್‌ ಆಗಿರುವ ಅವರು ಹವ್ಯಾಸಿ ಬರಹಗಾರರು.

- Advertisement -

ಕಾಲೇಜು ದಿನಗಳಲ್ಲಿಕವಿತೆ/ಕವನ ಬರೆಯುವ ಹವ್ಯಾಸ ಬೆಳೆಸಿಕೊಂಡವರು. 10 ವರ್ಷಗಳ ಹಿಂದೆ ಬರೆದ ‘ನಾನು ಬರೆಯಬೇಕು ಕವಿತೆ’ಗೆ ಪೂಜಾರಿ ಅವರ ಸಂಗೀತ ಸಂಯೋಜನೆ ಇನ್ನಷ್ಟು ಹಾಡುಗಳನ್ನು ಬರೆಯಲು ಪ್ರೇರೇಪಿಸಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎಚ್‌.ಬಿ. ಕೋಲ್ಕಾರ್‌ ಮಾತನಾಡಿ, ಬೆಳಗಾವಿಯು ಅನೇಕ ಭಾಷೆಗಳ ಸಂಗಮ ಸ್ಥಾನವಾಗಿದೆ. ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿಭಾಷೆಯ ಮಿತಿ ಇರಬಾರದು ಎಂದು ಅಭಿಪ್ರಾಯಪಟ್ಟರು.

ತಮ್ಮ ಭಾಷಣದಲ್ಲಿದ.ರಾ. ಬೇಂದ್ರೆ, ಚಂಪಾ ಸಾಹಿತ್ಯ, ವಚನಕಾರರು, ಸರ್ವಜ್ಞ, ಭಾಷಾ ಪಲ್ಲಟದ ಕ್ರಿಯೆ , ಸಾಹಿತ್ಯ ಮತ್ತು ಸಂಗೀತದ ಮಹತ್ವ, ಸಹಜ ಪ್ರಾಸದ ಗುಣ ವಿಷಯಗಳ ಬಗ್ಗೆ ಉಲ್ಲೇಖಿಸಿದ ಅವರು, ಬೇಂದ್ರೆಯವರ ಸಹಜ ಪ್ರಾಸ ಕುರಿತು ಮಾತನಾಡಿದರು. ಸಹಜ ಪ್ರಾಸವು ಸಂಗೀತವನ್ನು ವರ್ಧಿಸುತ್ತದೆ. ದಾಸರ ಪದಗಳು ಸಂಗೀತದ ಮೂಲಕ ಜನರನ್ನು ಬಹುಬೇಗ ತಲುಪಿದವು ಎಂದರು.

ಸಾಹಿತ್ಯವನ್ನು ಸಂಗೀತದ ಮೂಲಕ ಜನರಿಗೆ ಬಹುಬೇಗ ತಲುಪಿಸಬಹುದು. ಉತ್ತಮ ಸಂಗೀತ ಸೃಷ್ಟಿಗೆ ಸಾಹಿತ್ಯದ ರಸ ಸಹಕಾರಿಯಾಗುತ್ತದೆ ಎಂದು ಸಂಗೀತ ನಿರ್ದೇಶಕ ಯಾದವೇಂದ್ರ ಪೂಜಾರಿ ಹೇಳಿದರು.

ಡಾ|| ರಾಜೇಂದ್ರ ಭಾಂಡನಕರ್‌, ಡಾ.ಸ್ನೇಹಾ ರಾಜೂರಿಕರ್‌, ಗಾಯಕ ಗಗನದೀಪ್‌ ಕುರಳ್ಹೆ , ಹಾಡುಗಳು ರಚನಾಕಾರ ರುದ್ರಗೌಡ ಸಣಕಲ್‌, ತಂದೆ-ತಾಯಿಗಳಾದ ಕಲ್ಲಪ್ಪ ಸಣಕಲ್‌, ಕಸ್ತೂರಿ ಸಣಕಲ್‌ ಮತ್ತು ಧರ್ಮಪತ್ನಿ ಡಾ. ನಂದಿನಿ ಕಡಬಿ, ಮತ್ತಿತರರು ಪಾಲ್ಗೊಂಡಿದ್ದರು.

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!