ಕನ್ನಡಿ ಮುಂದಿನ ನಗ್ನ ಚಿತ್ರಗಳು (ಗಜಲ್ ಸಂಕಲನ); ಪ್ರಶಾಂತ ಅಂಗಡಿ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಕನ್ನಡ ಸಾರಸ್ವತ ಲೋಕದಲ್ಲಿ ಕವಿಯನ್ನು ವಯಸ್ಸು, ಹುದ್ದೆಗಳಿಂದ ಅಳಿಯಲಾಗದು. ಕವಿಯನ್ನು ಕಾವ್ಯ, ಭಾವದಿಂದ, ಕಲ್ಪನಾ ರಚಿತ ಕಾವ್ಯಶಕ್ತಿ, ಸಾಹಿತ್ಯದ ಗಟ್ಟಿತನ, ಕವನಗಳ ಅಂತಃಶಕ್ತಿ, ಕವಿಯ ಚಾರಿತ್ರ್ಯ, ಬರಹ ಬದುಕಿನ ಸಂಬಂಧ, ಶಿಕ್ಷಣ, ಸಮಾಜ, ಸಂಘಟನೆಗಳಿಗೆ ಕವಿಯ ಕೊಡುಗೆ, ಜಗದಲಿ ತಾನಿದ್ದು ಜಗದಗಲದ ತಾರ್ಕಿಕ, ಮಾರ್ಮಿಕ, ಬದಲಾವಣೆಗಳಲ್ಲಿ ಕವಿಯ ಪ್ರಯತ್ನಗಳು, ಕವಿಯ ನಡಾವಳಿಕೆಗಳೊಂದಿಗೆ, ಸ್ತ್ರೀ ಸಮ್ಮಾನ, ಸಹಕಾರ, ಪರೋಪಕಾರ, ಆತ್ಮಿಯತೆ, ಗೌರವ, ನನ್ನತನವನ್ನು ಧಾರೆ ಎರೆಯುವ ಧಾರಾಳತನ, ಮಿತಭಾಷೆ, ನಾಡು ನುಡಿಯ ಪ್ರೇಮ, ಜಗದ ಕಂಟಕಗಳನ್ನು ತನ್ನ ಸಂಕಟಗಳೆಂದು ಮುಂದಾಳುತನದಿಂದ ಭಯವಿಲ್ಲದೆ ಎದೆಯೊಡ್ಡಿ ಜಯವನ್ನು ಹೆಕ್ಕಿ ಜಯದ ಶ್ರೇಯಸ್ಸು ಇನ್ನೊಬ್ಬರಿಗೆ ನೀಡುವವ, ಪರಿಸರದಲಿ ತಾನಿದ್ದು ರಸಋಷಿಯಂತೆ ವಿರಮಿಸದೆ ಕಸದಲ್ಲೂ ಹೊಸದನ್ನು ಸಂಶೋಧಿಸುವ ಕವಿ, ಸ್ವಾರ್ಥತೆಗೆ ನೀರು ಹಾಕಿ ನಿಸ್ವಾರ್ಥತೆಗೆ ನಿತ್ಯ ನಾಂದಿ ಹಾಡುತ, ನಿಂತ ನೀರಾಗದೆ ಸದಾ ಹರಿಯುತ ಏರಿಗೂ ಈಜುವವನು ಕವಿ. ಕವಿ ಸಮಾಜಕ್ಕೆ ಒಬ್ಬ ಮಾದರಿ ವ್ಯಕ್ತಿ. ಕವಿಯ ಬರಹವಷ್ಟೆ ಅಲ್ಲದೆ ಅವನ ಬದುಕು ಸಮಾಜಕ್ಕೆ ಒಂದು ಪಾಠವಾದೀತು. ನಮ್ಮ ಕರುನಾಡಲ್ಲಿ ಸರ್ವ ಸಂಪನ್ನ ಕವಿಗಳಿದ್ದು ನಮ್ಮ ದೇಶಕ್ಕಷ್ಟೆ ಅಲ್ಲದೆ ಇಡೀ ಜಗತ್ತಿಗೆ ತಮ್ಮ ಜ್ಞಾನದ ಅರಿವನ್ನು ಪೀಠಗಳಿಂದ ತೋರಿಸಿದ್ದಾರೆ.

ಆತ್ಮೀಯ ಓದುಗ ಮಿತ್ರರೆ ಇಂದು ಕನ್ನಡಿ ಮುಂದಿನ ನಗ್ನ ಚಿತ್ರಗಳು ಎಂಬ ಗಜಲ್ ಸಂಕಲನವನ್ನು ರಚಿಸಿ ಕನ್ನಡ ತಾಯಿಯ ಪಾದದಡಿ ಇಟ್ಟು ಪ್ರತಿ ಕನ್ನಡಿಗರ ಮನ ಮನೆಗಳಿಗೆ ತಮ್ಮ ಬರಹದ ಕಾವ್ಯಶಕ್ತಿಯನ್ನು ಕರುಣಾ ಭಾವದಿಂದ, ತಮ್ಮ ಮನದಾಳದಲ್ಲಿ ಸದಾ ಕೋಲಾಹಲ ಏಳುವ ಅಲೆಗಳ ಪ್ರತಿ ಶಬ್ದಗಳನ್ನು ಜೋಡಿಸಿ, ತಮ್ಮ ಮನದಂತರಾಳದಲ್ಲಿ ಬೀಳುವ ಉಲ್ಕಾಪಾತದ ಉಲ್ಕೆಗಳನ್ನು ಆಯಿಸಿ ಚಿಕ್ಕ ವಯಸ್ಸಿನಲ್ಲಿ ಚೊಕ್ಕದಾಗಿ ಕವನಗಳ ರಚಿಸಿ, ನಾಡಿನಾದ್ಯಂತ ಹಿರಿಕಿರಿ ಕವಿಗಳೊಂದಿಗೆ ಸಂಪರ್ಕದಲ್ಲಿದ್ದು ಅವರೆಲ್ಲರ ಹರಕೆ-ಆಶೀರ್ವಾಗಳೊಂದಿಗೆ ತಮ್ಮ ಮೊದಲ ಗಜಲ್ ಸಂಕಲನದ ಸಂತಸದಲ್ಲಿದ್ದಾರೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರ ತಾಲೂಕಿನ ದಂಡಗಿಹಳ್ಳಿ ಎಂಬ ಚಿಕ್ಕ ಹಳ್ಳಿಯ ಕಾವ್ಯ ಪ್ರತಿಭೆಯ ಕವಿ ಸಹೋದರ ಪ್ರಶಾಂತ್ ಅಂಗಡಿ.

ಅನೇಕ ಹಿರಿಯ ಕವಿಗಳಷ್ಟು ಗಟ್ಟಿ ಸಾಹಿತ್ಯ, ಸತ್ವಯುತ ಕಾವ್ಯ ಬರೆಯುವ ಪ್ರಶಾಂತ್ ಅಂಗಡಿಯವರು ಅನೇಕ ಕವಿಗೋಷ್ಠಿಗಳಲ್ಲಿ ನನಗೆ ಭೇಟಿಯಾಗಿದ್ದರು. ಸರ್, ನೀವು ನನ್ನ ಕೃತಿಗೆ ಅಭಿಪ್ರಾಯಗಳನ್ನು ಬರೆದುಕೊಡಿ ಎಂದಾಗ,ಎಲ್ಲೋ ಒಂದು ಕಡೆಗೆ ಮುಜುಗರ, ಸಂಕೋಚಗಳು ಜೊತೆಗೆ ಅಷ್ಟು ಅಭಿಪ್ರಾಯಗಳನ್ನು ನನ್ನಿಂದ ಬರೆಯಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿತು. ಕನ್ನಡಿ ಮುಂದಿನ ನಗ್ನ ಚಿತ್ರಗಳು ಎನ್ನುವ ಗಜಲ್ ಸಂಕಲನವನ್ನು ಪಡೆದು ಓದುವ ಚಡಪಡಿಕೆಯೊಂದಿಗೆ ಅಲ್ಲೆ ಒಂದೆರಡು ಗಜಲ್ ಗಳನ್ನು ಓದಬೇಕೆಂದು ಕೃತಿಯನ್ನು ತೆರೆದು ನೋಡಿದರೆ ಈ ಎಲ್ಲಾ ಗಜಲ್ ಗಳು ಕವಿಯದ್ದೆ ಎಂಬ ಮನಸ್ಸಿನ ಪ್ರಶ್ನೆಗಳೇ ನನ್ನ ಮನದಲ್ಲಿ ಏಳತೊಡಗಿದವು. ಮನೆಗೆ ಬಂದು ಪ್ರತಿಯ ಗಜಲ್ ಗಳನ್ನು ಓದುತಿದ್ದರೆ ಓದುತ್ತಾ ಓದುತ್ತಾ ಆ ಎಲ್ಲ ಗಜಲ್ ಗಳು ತಮ್ಮಷ್ಟಕ್ಕೆ ತಾವೇ ನನ್ನಿಂದ ಓದಿಸಿಕೊಂಡು ಹೋಗುತ್ತಿವೆ. ಪ್ರತಿ ಗಜಲ್ ಗಳಲ್ಲಿ ಸಂದೇಶಗಳನ್ನು, ಉಪದೇಶಗಳನ್ನು, ಹಾಗೂ ಮಾರ್ಗದರ್ಶನ ಮಾಡುವ ಪರಿಯನ್ನು ಓದಿದರೆ ಈ ಕವಿಯ ಮೆದುಳು ಕಾವ್ಯ ಜಗತ್ತಿನಲ್ಲಿ ಹಾಗೂ ಬದುಕಿನಲ್ಲಿ ತುಂಬಾ ಅನುಭವ ಪಡೆದುಕೊಂಡಿದೆ ಎಂದೆನಿಸುತ್ತದೆ.

- Advertisement -

ಈ ಕವಿಯ ಕಾವ್ಯದ ಪ್ರತಿ ಗಜಲ್ ಗಳಲ್ಲಿ ಸಮಾಜ ಕಳಕಳಿ ಎದ್ದು ಕಾಣುತ್ತದೆ. ಇಂದಿನ ಯುವಕರಿಗೆ ಉತ್ತಮ ಸಂದೇಶ ಸಾರುತ ಪ್ರತಿಯೊಬ್ಬರೂ ತಮ್ಮ ಬದುಕನ್ನು ಸುಧಾರಿಸಿಕೊಂಡು ಉತ್ತಮ ನಾಗರಿಕರಾಗುವ ಗುಣತುಂಬುವ ಉಪದೇಶ, ಕಳವಳ ಇವರ ಕಾವ್ಯದ ಮುಖ್ಯ ಉದ್ದೇಶವಾಗಿದ್ದು ವಿಶೇಷವಾಗಿದೆ. ಇಲ್ಲಿ ನಾನು ‘ವಿಶೇಷವಾಗಿದೆ’ ಎಂಬ ಪದ ಬಳಕೆ ಮಾಡಲು ಒಂದು ಮುಖ್ಯ ಕಾರಣವಿದೆ, ಅದೇನೆಂದರೆ ಇಂದಿನ ಕಾಲಘಟ್ಟದಲ್ಲಿ ಅನೇಕ ಯುವಕವಿಗಳು ಹೆಣ್ಣು, ಕೆಂದುಟಿ, ಪ್ರೀತಿ, ಪ್ರೇಮ, ಮಿಲನ, ಹೃದಯಗಳಾಟದ, ಕದ್ದು ಮುಚ್ಚಿ ಮರಸುತ್ತುವಂತ ಕಾವ್ಯರಚನೆಯಲ್ಲಿ ಮುಂದಿರುತ್ತಾರೆ ಆದರೆ ಪ್ರಶಾಂತ್ ಅಂಗಡಿಯವರ ಕಾವ್ಯದಲ್ಲಿ ಹಾಗೆಲ್ಲಿ ಕಂಡು ಬಾರದೇ ಇರುವದರಿಂದ ಈ ಗಜಲ್ ಕವಿಯನ್ನು ವಿಶೇಷ ಕವಿ ಮತ್ತು ಕಾವ್ಯ ಎಂದು ಸಂಬೋಧಿಸಿರುವೆ. ಗಜಲ್ ಸಂಕಲನದಲ್ಲಿ ಕವಿಯು ಆಧ್ಯಾತ್ಮ, ಸತ್ಸಂಗ ಬದುಕು, ಅರಿತು ಬದುಕುವ ನಡೆ, ಸತ್ಯಾಸತ್ಯದ ವ್ಯತ್ಯಾಸದ ತೂಕ, ಸಮಾನತೆ, ಸಮ್ಮಾನಗಳ ಆಚಾರ ವಿಚಾರ ಸಾರುವ ಸಂತರಾಗಿದ್ದಾರೆ.

ಸದೃಢತೆ ಕಳೆದುಕೊಂಡ ಸಮಾಜಕ್ಕೆ ಸಂತೈಸುವವನು ಕವಿಯಾಗಲಾರ, ಸಮಾಜ ಕೆಳಮಟ್ಟಕ್ಕೆ ಇಳಿಯದಂತೆ ನೋಡುವವ, ಸಮಾಜ ಅಭಿವೃದ್ಧಿಗಾಗಿ ಸದಾ ಹಂಬಲಿಸುವವ, ಮರಗುವವ. ತನ್ನ ಪರಿಸರವನ್ನು ಸಾರಾಸಗಟಾಗಿ ಸುಧಾರಿಸುವವನು ಸಮ ಸಮಾಜದ ಮಾದರಿ ಪ್ರಜೆಯಾದವನು ಕವಿ ಅನಿಸಿಕೊಂಡಾನು. ಹಾಗೇನೇ ಇಲ್ಲಿ ಕವಿ ಶ್ರೀ ಪ್ರಶಾಂತ ಅಂಗಡಿಯವರು ಪ್ರತಿ ಗಜಲ್ ಗಳಲ್ಲಿ ದಾಸರು, ಸಂತರಂತೆ ಉಪದೇಶಗಳನ್ನು ಸುವಿಚಾರಾದಿಯಾಗಿ ಹೇಳಿದ್ದಾರೆ. ಪ್ರತಿಯೊಬ್ಬರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎನ್ನುವ ಮಾತು ಇಷ್ಟವಾಗುವದು. ಜಗದಲ್ಲಿ ಪ್ರತಿಯೊಬ್ಬರು ಕೂಡಾ ನಾನೆ ಒಳ್ಳೆಯವನು, ನಾನೇ ಸರಿ, ನಾನೇ ಜಾಣ ಎಂದೆಲ್ಲಾ ಹೇಳುತ್ತಾ ಸದಾ ಪಾಪದ ತಪ್ಪುಗಳನ್ನು ಮಾಡುತ್ತಿರುತ್ತಾರೆ ಆದರೆ ಎಲ್ಲರು ತಮ್ಮನ್ನು ತಾವು ಅಥೈ೯ಸಿಕೊಂಡು , ಸರಿತಪ್ಪುಗಳನ್ನು ತೂಗುತ್ತ ಬದುಕಿದರೆ ಸಮಾಜದಲ್ಲಿ ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರ, ಕಳ್ಳತನ, ಕೊಲೆ, ಸುಲಿಗೆ ನಡೆಯುವದಿಲ್ಲವೇನೊ ಎಂಬುದು ಕವಿಯ ಆಶಯ.

ಮುಖ್ಯವಾಗಿ ಕವಿ ತನ್ನ ಮನದ ಭಾವನೆಗಳನ್ನು ಬಿತ್ತರಿಸುತ್ತ ಕಾವ್ಯಕ್ಕೆ ಅಲಂಕಾರ ಪ್ರಾಸಗಳ ಗೋಜಿಗೆ ಹೋಗದೆ, ನೇರ ಸಂದೇಶದಂತೆ, ಉಪದೇಶಗಳಂತೆ ಅತ್ಮಿಯತೆಯ ಸಲಹೆಯಂತೆ ಪದಪದಗಳ ಪೋಣಿಸಿ ಗಜಲ್ ಗಳನ್ನು ಬರೆದಿದ್ದಾರೆ.

ಹಿರಿಯ ಕವಿ ಡಾ.ಗೌರೀಶ ಕಾಯ್ಕಿಣಿ ಯವರ ಹೇಳಿಕೆಯಂತೆ ಒಬ್ಬ ಯುವ ಕವಿ ಎಂಬ ಚಿಗುರು ಸಸಿಗೆ ನೀರು ಗೊಬ್ಬರ ಹಾಕಿ ಪ್ರೋತ್ಸಾಹಿಸಬೇಕು ಅದು ಮುಂದೆ ಬೆಳೆದು ಹೆಮ್ಮರವಾಗುವದು ಎಂಬಂತೆ ಆತ್ಮೀಯ ಸಹೋದರ ಕವಿ ಪ್ರಶಾಂತ ಅಂಗಡಿಯವರ ಈ ಗಜಲ್ ಸಂಕಲನದಲ್ಲಿ ಜಾತಿ,ಧರ್ಮ, ದೇವರು,ಮೇಲು,ಕೀಳು ಸೇರಿದಂತೆ ಹಲವಾರು ಸಾಮಾಜಿಕ ಮೌಢ್ಯಗಳು ಚುಚ್ಚಿ ಚುಚ್ಚಿ ಬದುಕು ನಶ್ವರವಾಗುತ್ತಿರುವುದನ್ನು ತಮ್ಮ ಸೂಕ್ಷ್ಮ ಗ್ರಹಿಕೆಯಿಂದ ಅವುಗಳಿಗೆ ಗಜಲ್ ರೂಪಕೊಟ್ಟು ಸಮಾಜದ ನೋವುಗಳಿಗೆ ಸ್ಪಂದಿಸುತ್ತಾರೆ.ಎಲ್ಲದಕ್ಕೂ ಮೀರಿದ್ದು ಮಾನವೀಯತೆ ಎನ್ನುವ ಗಜಲ್ ಕವಿ ಈ ಮಣ್ಣಿನ ಸೊಗಡು, ಪ್ರೀತಿ, ಪ್ರೇಮ, ಪ್ರಣಯ, ಹಾಸ್ಯ,ದಾರಿದ್ರ್ಯ, ಸಾಮಾಜಿಕ ಬದುಕನ್ನು ಕಟ್ಟಿಕೊಡುವ ಒಂದು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.

ಈ ಗಜಲ್ ಗಳನ್ನು ಓದುತ್ತಾ ಹೋದಂತೆಲ್ಲಾ ನಮ್ಮದೇ ಬದುಕಿನ ನಗ್ನ ಚಿತ್ರಗಳನ್ನು ನಾವೇ ನೋಡಿಕೊಂಡಂತೆ ಭಾಸವಾಗುತ್ತದೆ. ಯಾವುದೇ ರೀತಿಯ ಬದುಕನ್ನು ಕಟ್ಟಿಕೊಂಡ ಮೇಲೆ ನಮ್ಮ ವಾಸ್ತವ ಜಗತ್ತಿನ ಅಂತಃಚಕ್ಷು ತೆರೆದು ನೋಡಿದರೆ ಅಲ್ಲಿ ಬರೀ ಶೂನ್ಯ ಸಂಪಾದನೆ ಎನ್ನುವುದು ಕವಿ ಅಭಿಪ್ರಾಯ ಪಡುತ್ತಾರೆ.

ಕನ್ನಡಿ ಮುಂದಿನ ನಗ್ನ ಚಿತ್ರಗಳು ಎಂಬ ಪ್ರಥಮ ಗಜಲ್ ಸಂಕಲನಕ್ಕೆ ಪ್ರೋತ್ಸಾಹಿಸಿ ನನ್ನ ನಾಲ್ಕಾರು ಮಾತುಗಳನ್ನು ಬರೆದು ನೀಡಿರುವೆ. ಕವಿಯ ಕಾವ್ಯ ಹೆಮ್ಮರವಾಗಿ ಬೆಳೆಯಲಿ. ಕನ್ನಡ ಸಾರಸ್ವತ ಲೋಕದಲ್ಲಿ ಕವಿಗೆ ಹೆಚ್ಚಿನ ಯಶಸ್ಸು ಸಿಗಲಿ. ಈ ಯುವಕವಿಯಿಂದ ಇನ್ನು ಹೆಚ್ಚಿನ ಕೃತಿಗಳು ಹೊರಬರಲಿ ಎಂದು ಕೋಟಿ ಕನ್ನಡಿಗರು ಶುಭ ಹಾರೈಸೋಣ.


ಇಂಗಳಗಿ ದಾವಲಮಲೀಕ
ಶಿಕ್ಷಕ, ಸಾಹಿತಿಗಳು ಹತ್ತಿಮತ್ತೂರು

- Advertisement -

1 COMMENT

Comments are closed.

- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!