spot_img
spot_img

ಕನ್ನಡ ಕಟ್ಟಿದ ಜನರ ಜಂಗಮ ಲಿಂ ಮಲ್ಲಯ್ಯಸ್ವಾಮಿ ಕೆ ಕವಟಗಿಮಠ (ಎಂ.ಕೆ)

Must Read

- Advertisement -

(ಲೇಖನ : ಮಿಥುನ ಅಂಕಲಿ)

ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯ ಜೀವನ ಅವನ ಪಾಲಿಗೆ ಸುಮಧುರವೇ ಆಗಿದೆ.ದೈವ ಕಷ್ಟವನ್ನು ಎಲ್ಲರಿಗೂ ಕೊಡುತ್ತದೆ ಅದನ್ನು ಎದೆಗುಂದದೆ ಸಮಥ೯ವಾಗಿ ಎದುರಿಸಿ ತನ್ನ ಪ್ರತಿಭೆ ಜಾಣ್ಮೆಯಿಂದ ಜಯಶಾಲಿಯಾಗಿ ಶಾಶ್ವತ ನೆನಪಿನಲ್ಲಿ ಉಳಿಯುವಂತಹ ಕಾಯಕ ಮಾಡಿದವರಿಗೆ ಮಾತ್ರ ಇತಿಹಾಸದ ಪುಟಗಳು ಸ್ವಾಗತಿಸುತ್ತವೆ ಇದಕ್ಕೆ ಪೂರಕವೆಂಬಂತೆ ತಮ್ಮ ಜೀವನವನ್ನು ಸಮಾಜಕ್ಕಾಗಿ ಕನ್ನಡ ನಾಡು ನುಡಿಗಾಗಿ ಮುಡುಪಾಗಿಟ್ಟವರು ನಮ್ಮೆಲ್ಲರ ಆರಾಧ್ಯ ಜಂಗಮ ಲಿಂ ಮಲ್ಲಯ್ಯಸ್ವಾಮಿ ಕವಟಗಿಮಠರು.ಸದಾ ಸಮಾಜಮುಖಿ ಕಾಯಕ ಮಾಡಿ ಕನ್ನಡನಾಡಿನ ಸೇವೆ ಮಾಡಿದ ಅಪರೂಪದ ಜಂಗಮ.

ಚಿಕ್ಕೋಡಿ ಪಟ್ಟಣದಲ್ಲಿ ಜಂಗಮ ಪರಂಪರೆಗೆ ಸೇರಿದ ಕವಟಗಿಮಠ ಮನೆತನವಿದೆ.ಈ ಮನೆತನದ ಮೂಲವನ್ನು ಹುಡುಕುತ್ತಾ ಹೋದರೆ ೧೩೦೮ ರಷ್ಟು ಹಿಂದಕ್ಕೆ ಹೋಗಬೇಕಾಗುತ್ತದೆ. ಎಂದರೆ ೭೧೨ ವಷ೯ಗಳ ಇತಿಹಾಸ ಹೊಂದಿದ ಮನೆತನ. ಇವರ ಮೂಲ ಪುರುಷ ಶ್ರೀ ಮಹಾಂತಯ್ಯನವರು.

- Advertisement -

ಇವರು ವಿಜಾಪೂರ ಜಿಲ್ಲೆಯ ಬನಾನಾ ಇಂಬರಗಿಯವರು. ಬಾಳೆಹೊನ್ನುರಿನ ರೇಣುಕಾಚಾಯ೯ರು ಈ ಮನೆತನದ ಗುರುಗಳು. ಇವರ ಮೂಲ ಮನೆತನದ ಹೆಸರು ಹಿರೇಮಠ. ಇವರು ಮಂಕಾಳ ಕವಟೆ ಗ್ರಾಮದಿಂದ ಬಂದಿರುವುದರಿಂದ ಇವರಿಗೆ ಕವಟಗಿಮಠ ಹೆಸರು ಬಂತು. ಚಿಕ್ಕೋಡಿಗೆ ಬಂದ ಇವರ ಮನೆತನ ಸಮಾಜದ ಸೇವೆಯಲ್ಲಿ ನಿರತರಾಯಿತು.

ಇಂತಹ ಅಪರೂಪದ ಕವಟಗಿಮಠ ಮನೆತನದ ನಕ್ಷತ್ರವಾಗಿ ಶರಣ ಕಲ್ಲಯ್ಯ ಸ್ವಾಮಿ ಮತ್ತು ಗೌರಾದೇವಿ ಅವರ ಹಿರಿಯಮಗನಾಗಿ ೦೪ ಜೂನ್ ೧೯೩೫ ರಲ್ಲಿ ಮಲ್ಲಿಕಾಜು೯ನ ಅವರು ಜನಿಸಿದರು.

ಬೆಳೆಯುತ್ತಲೇ ಮಲ್ಲಯ್ಯನೆಂದು ಪರಿಚಿತನಾಗಿ ತಂದೆಯ ಹಾದಿಯಲ್ಲಿ ನಡೆದು ಅವಿಭಕ್ತ ಕುಟುಂಬವಾಗಿರುವುದರಿಂದ ಪ್ರೀತಿ ಸಹಬಾಳ್ವೆಯ ಜೀವನ ಅವರಿಗೆ ಲಭಿಸಿತು.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಿಕ್ಕೋಡಿಯಲ್ಲಿ ಪಡೆದರು ತಂದೆಯ ಅಕಾಲಿಕ ನಿಧನದಿಂದ ೧೪ ನೇ ವಯಸ್ಸಿನಲ್ಲಿ ಮನೆತನದ ಭಾರ ಹೊತ್ತರು.

- Advertisement -

ಮುಂದೆ ೧೯೫೮ ರಲ್ಲಿ ಸಂಸಾರೀಕ ಜೀವನಕ್ಕೆ ಕಾಲಿಟ್ಟು ಸವದತ್ತಿ ಹಿರೇಮಠ ಮನೆತನದ ಶಾಂತಮ್ಮನವರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿದರು. ಸತಿಪತಿಗಳೊಂದಾಗಿ ಸಮಾಜಸೇವೆ ನಾಡುನುಡಿ ಸೇವೆ ಮಾಡತೊಡಗಿದರು.

ತಾಯಿಯವರದು ಕವಿ ಹೃದಯ,ಕರುಣಾಮಯಿ.ಇವರಿಂದ ಮುರುಗೋಡ ಮಹಾಂತ ಮಠದ ಭಕ್ತಿಯ ಭಾವ ಕವಟಗಿಮಠದ ಮನೆತನದಲ್ಲಿ ಆವರಿಸಿತು.ಆ ಸಂದಭ೯ದಲ್ಲಿ ನಿಪ್ಪಾಣಿಗೆ ಬಂದಿದ್ದ ಮಹಾಂತ ಶಿವಯೋಗಿಗಳು ಕವಟಗಿಮಠ ಮನೆತನಕ್ಕೆ ಬಂದು ಆಶೀವ೯ದಿಸಿದ್ದಾರೆ.ದುರದುಂಡೇಶ್ವರನ ಆಶೀವಾ೯ದ ಮನೆತನಕ್ಕಿದೆ.

ಮನೆತನದ ಗುರುವಾಗಿ ಮುರುಗೋಡ ಪೂಜ್ಯರನ್ನು ಸ್ವೀಕರಿಸಿದ್ದಾರೆ. ಸಂಸಾರದ ರಥ ಪ್ರಾರಂಭಿಸಿದ ಆದಶ೯ ದಂಪತಿಗಳಿಗೆ ಎರಡು ಹೆಣ್ಣುಮಕ್ಕಳಾದವು. ಗಂಡು ಮಗು ಆಗಬೇಕೆಂದು ಶ್ರೀ ಮಠಕ್ಕೆ ಬೇಡಿಕೊಂಡು ಸೇವೆ ಮಾಡತೊಡಗಿದರು. ಶ್ರೀಮಠದ ಆಶೀವಾ೯ದಿಂದ ಗಂಡು ಜನಿಸಿತು ಆ ಮಗುವೇ ಕನ್ನಡ ನಾಡಿನ ಧೀಮಂತ ನಾಯಕರಾಗಿ, ಶೈಕ್ಷಣಿಕ ಹರಿಕಾರರಾಗಿ ಬೆಳೆದ ರಾಜಕೀಯ ಮುತ್ಸದ್ದಿ ಶ್ರೀ ಮಹಾಂತೇಶ ಕವಟಗಿಮಠರು.

ಮತ್ತೊವ೯ ಸುಪುತ್ರ ಜಗದೀಶ್ ಕವಟಗಿಮಠರು.ತಂದೆಯ ಹಾದಿಯಲ್ಲಿ ನಡೆದು ಇವರಿವ೯ರು ಸಮಾಜ ಸೇವೆ ಮಾಡುತ್ತಿದ್ದಾರೆ. ಮಲ್ಲಿಕಾಜು೯ ನ ಕವಟಗಿಮಠರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಕನ್ನಡ ಸಾಹಿತ್ಯ ನಾಡುನುಡಿ ಪರಂಪರೆಯನ್ನು ಭದ್ರಪಡಿಸಿದ್ದಾರೆ.

ಸಹಕಾರ ಮತ್ತು ಶಿಕ್ಷಣ ಕ್ಷೇತ್ರ ಅವರ ಎರಡು ಕಣ್ಣುಗಳಾಗಿದ್ದವು. ಕೆಎಲ್ಇ ಸಂಸ್ಥೆ ಹೆಮ್ಮರವಾಗಿ ಬೆಳೆಯಲೂ ಇವರು ಕಾರಣರಾಗಿದ್ದಾರೆ. ಇವರ ಸಾಧನೆ ಪದಗಳಲ್ಲಿ ವಣಿ೯ಸಲು ಅಸಾಧ್ಯ.ಬಿ ಶಂಕರಾನಂದರಂಥಹ ರಾಜಕೀಯ ಧುರೀಣರಿಗೆ ಬೆನ್ನಾಗಿ ನಿಂತು ಬೆಳೆಸಿದ್ದಾರೆ. ನಿಡಸೋಸಿ ಚಿಂಚಣಿ ಚಿಕ್ಕೋಡಿ ಮಠದ ಪರಮ ಭಕ್ತರಾಗಿದ್ದರು.

ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿವ೯ಹಿಸಿದ್ದಾರೆ.ಧಮ೯ದ ಜಂಗಮನಾಗಿ,ರೈತರ ಕಾಮಧೇನುವಾಗಿ,ಬಡವರ ಬಂಧುವಾಗಿ, ಶೈಕ್ಷಣಿಕ ಹರಿಕಾರನಾಗಿ,ಸಮಾಜ ಸೇವಕನಾಗಿ ಕೆಲಸ ಮಾಡಿದ ಕಾಯಕಯೋಗಿ ಇವರು.

ನಿಪ್ಪಾಣಿಗೂ ಎಂ.ಕೆ ಅವರಿಗೂ ಅವಿನಾಭಾವ ಸಂಬಂಧವಿದೆ. ೧೯೫೬ ರಲ್ಲಿ ನಿಪ್ಪಾಣಿ ಕೃಷಿ ಮಾರುಕಟ್ಟೆ ಸಮಿತಿ ಸ್ಥಾಪನೆಯಾಯಿತು. ಎಂ ಕೆ ಅವರು ಚಿಕ್ಕೋಡಿ ಭಾಗದಿಂದ ಅನೇಕ ಬಾರಿ ಎಪಿಎಂಸಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಮುಂದೆ ಅದರ ಅಧ್ಯಕ್ಷರಾಗಿ ಜನಪರ ಕಾಯಕ ಮಾಡಿದ್ದಾರೆ. ಇಂದು ನಿಪ್ಪಾಣಿ ಎಪಿಎಂಸಿ ಇರುವ ಅಕ್ಕೋಳ ರಸ್ತೆಯ ಜಾಗ ಖಾಸಗಿಯವರದಿದ್ದೂ ಅವರ ಮನವೊಲಿಸಿ ೭೦ ಎಕರೆ ಜಾಗ ಖರೀದಿಸಿ ಇತಿಹಾಸದ ಪುಟ ಸೇರಿದ್ದಾರೆ.

ಮೊದಲಿನ ೪೦ ಎಕರೆ ಜಾಗವನ್ನು ದನಗಳ ಪೇಟೆಯಾಗಿಸಿದರು. ೧೯೭೫ ರಲ್ಲಿ ಎಪಿಎಂಸಿಗೆ ಹೊಸ ಚೈತನ್ಯ ಕೊಟ್ಟು ರಾಜ್ಯಪಾಲ ಮೋಹಲಾಲ ಸುಖಾಡಿಯಾ ಇವರಿಂದ ಅಡಿಗಲ್ಲು ಹಾಕಿಸಿ ಮಲ್ಲಯ್ಯಸ್ವಾಮಿಗಳ ಹೆಸರು ಸುವಣಾ೯ಕ್ಷರದಲ್ಲಿ ಬರೆದಿಡುವಂತೆ ಮಾಡಿದರು. ನಿಪ್ಪಾಣಿ ರೈತರ ಏಳಿಗೆಗಾಗಿ ದುಡಿದರು.ಸದ್ದಿಲ್ಲದೇ ಕನ್ನಡದ ವ್ಯವಹಾರ ಮಾಡಿ ನುಡಿ ಬೆಳೆಸಿದರು.೧೦ ವಷ೯ಗಳ ಕಾಲ ಎಪಿಎಂಸಿ ಅಧ್ಯಕ್ಷರಾಗಿ ಸೇವೆ ನೀಡಿದ್ದಾರೆ.ದೂಧಗಂಗಾ ಕಾಖಾ೯ನೆಯ ಬೆಳವಣಿಗೆಗಾಗಿ ಮತ್ತು ವಿವಿಧ ಸಂಘಸಂಸ್ಥೆಗಳ ಏಳಿಗೆಗೆ ಶ್ರಮಿಸಿದ್ದಾರೆ.

ಚಿಕ್ಕೋಡಿ ಪುರಸಭೆಗೆ ೩೫ ವಷ೯ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿಪ್ಪಾಣಿ ಪರಿಸರದಲ್ಲೂ ಗಣನೀಯ ಸೇವೆ ಸಲ್ಲಿಸಿದ್ದಾರೆ.ನಾಡಹಬ್ಬಗಳನ್ನು ಅದ್ದೂರಿಯಾಗಿ ಆಚರಿಸಿ ನಾಡಿನ ಹೆಸರಾಂತ ಸಾಹಿತಿಗಳಾದ ಡಾ.ದ.ರಾ.ಬೇಂದ್ರೆ, ತ.ರಾ.ಸು,ಅ.ನ.ಕೃ,ವಿ.ಕೃ.ಗೋಕಾಕ ,ತಿ.ನಂ.ಶ್ರೀ,ಬಸವರಾಜ ಕಟ್ಟೀಮನಿ, ಜಯದೇವಿತಾಯಿ ಲಿಗಾಡೆ ,ಎಣಗಿ ಬಾಳಪ್ಪನವರನ್ನು ಕರೆಯಿಸಿ ನಾಡುನುಡಿಯ ಸೇವೆಗೈಯುತ್ತಾ ಗಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

೧೯೯೫ ರಲ್ಲಿ ನಿಪ್ಪಾಣಿಯಲ್ಲಿ ಕೆಎಲ್ಇ ಮಹಾವಿದ್ಯಾಲಯದ ರಜತ ಮಹೋತ್ಸವದಲ್ಲಿ ಪಾಲ್ಗೊಂಡು ನಿಪ್ಪಾಣಿಯಲ್ಲಿ ಕನ್ನಡಪರ ಚಟುವಟಿಕೆಗಳು ನಡೆಯುವಂತೆ ನೋಡಿಕೊಂಡಿದ್ದಾರೆ. ಹಲವಾರು ಕನ್ನಡ ಸಮ್ಮೇಳನಗಳೂ ಜರುಗುವಂತೆ ಮಾಡಿ ಕನ್ನಡದ ಸೇವೆ ಸಲ್ಲಿಸಿದ್ದಾರೆ.

ಗಡಿ ಸತ್ಯಾಗ್ರಹಗಳಾದಾಗ ನಿಪ್ಪಾಣಿ ಹಿರಿಯರ ಬೆನ್ನಿಗೆ ನಿಂತಿದ್ದಾರೆ.ಹಲವಾರು ಸಾಹಿತಿಗಳನ್ನು ಬೆಳೆಸಿದ್ದಾರೆ.ಇವರಂತೆ ಅವರ ಪುತ್ರ ಶ್ರೀ ಮಹಾಂತೇಶ ಕವಟಗಿಮಠರು ಕೂಡಾ ಇಂದು ನಿಪ್ಪಾಣಿ ಕನ್ನಡದ ಬೆನ್ನಿಗೆ ನಿಂತು ಪೋಷಿಸುತ್ತಿದ್ದಾರೆ.

ಇಂತಹ ಅಪರೂಪದ ಕನ್ನಡದ ಸೇವಕ ಜಂಗಮವಯ೯ ಮಲ್ಲಿಕಾಜು೯ನ ಕವಟಗಿಮಠರು ತನ್ನ ಸಾಥ೯ಕ ಬುದುಕಿಗೆ ವಿರಾಮ ನೀಡಿ ೦೭ ಎಪ್ರಿಲ್ ೧೯೯೭ ರಲ್ಲಿ ಲಿಂಗೈಕ್ಯರಾದರು.

ಚಿಕ್ಕೋಡಿ ಆಡಳಿತಕ್ಕೆ ಒಳಪಟ್ಟ ಅಂದಿನ ನಿಪ್ಪಾಣಿಯಲ್ಲಿ ಕನ್ನಡ ಬೆಳೆಸಿದ ಮಹನೀಯರು ಇವರು.ನಿಪ್ಪಾಣಿ ಕನ್ನಡಮಯವಾಗಿದೆ ಎಂದರೆ ಇವರು ಕೂಡಾ ಕಾರಣರು. ಇವರಿಗೆ ನನ್ನ ಭಕ್ತಿಯ ಪ್ರಣಾಮಗಳು ಕನ್ನಡ ರಾಜ್ಯೋತ್ಸವ ಈ ಸಂದಭ೯ದಲ್ಲಿ ಅವರನ್ನು ಭಕ್ತಿಯಿಂದ ಸ್ಮರಿಸೋಣ

ಮಾಹಿತಿ

  • ಶ್ರೀ ಮಹಾಂತೇಶ ಕವಟಗಿಮಠ
  • ಡಾ ಶಿರೀಷ ಜೋಶಿ
  • ಶ್ರೀ ಶಿವಾನಂದ ಪುರಾಣಿಕಮಠ
  • ಶ್ರೀ ಮಾರುತಿ ಕೊಣ್ಣುರಿ

ಲೇಖನ

  • ಪ್ರೋ ಮಿಥುನ ಅಂಕಲಿ
  • ಖಡಕಲಾಟ*

ಸಹಯೋಗ

  • ಕನ್ನಡ ಸಾಹಿತ್ಯ ಪರಿಷತ್ತು
  • ಶರಣ ಸಾಹಿತ್ಯ ಪರಿಷತ್ತು
  • ಗಡಿನಾಡು ಕನ್ನಡ ಬಳಗ ನಿಪ್ಪಾಣಿ
- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group