ಕನ್ನಡ ಕವಿ ಕಾವ್ಯ ಪರಿಚಯ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

Times of ಕರ್ನಾಟಕ ಕನ್ನಡದ ವೆಬ್ ಪತ್ರಿಕೆಯಲ್ಲಿ ಸುದ್ದಿ, ಸ್ಥಳ ಪರಿಚಯದ ಲೇಖನಗಳಲ್ಲದೆ ಕನ್ನಡ ನಾಡಿನ ಖ್ಯಾತ ಸಾಹಿತಿಗಳ ಪರಿಚಯವನ್ನೂ ಪ್ರಕಟಿಸಲು ಹೆಮ್ಮೆ ಪಡುತ್ತೇವೆ.

ಈ ಪಯಣದಲ್ಲಿ ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೇರಿಸಿರುವ, ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟಿರುವ ಹಿರಿಯ ಸಾಹಿತಿಗಳನ್ನು ನೆನೆಯುವುದು ನಮ್ಮ ಕರ್ತವ್ಯ. ಇಂದಿನ ಯುವ ಪೀಳಿಗೆಗೆ ನಮ್ಮ ಸಾಹಿತ್ಯ, ಸಾಹಿತಿಗಳ ಬಗ್ಗೆ ಮಾಹಿತಿ ಹೊಂದುವ ಅತೀ ಜರೂರತು ಇದೆ ಎಂಬ ಭಾವನೆಯಲ್ಲಿ ಸಂಕ್ಷಿಪ್ತವಾಗಿ ಈಗಿರುವ ಹಾಗೂ ಹಿಂದೆ ಆಗಿ ಹೋಗಿರುವ ಕನ್ನಡ ಸಾಹಿತ್ಯದ ಕಣ್ಮಣಿಗಳ ಕುರಿತು ಬರಹಗಳನ್ನು ಪ್ರಕಟಿಸಲಿದ್ದೇವೆ.

ಸಾಹಿತ್ಯಾಭಿಮಾನಿಗಳಿಗೆ, ಕನ್ನಡಾಭಿಮಾನಿಗಳಿಗೆ Times of ಕರ್ನಾಟಕದ ಈ ಕೆಲಸ ಇಷ್ಟವಾಗುತ್ತದೆಯೆಂಬ ನಂಬಿಕೆ ನಮ್ಮದು
ಇಂದಿನ ಮೊದಲ ಪರಿಚಯ ಬರಹ ಕುವೆಂಪು ಅವರ ಕುರಿತಾಗಿದೆ….

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
( ಕುವೆಂಪು )

 • ಜನನ: 29-12-1904,
 • ಜನನ ಸ್ಥಳ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ
 • ಸ್ಥಳ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ
 • ತಂದೆತಾಯಿ: ವೆಂಕಟಪ್ಪಗೌಡ, ಸೀತಮ್ಮ
 • ಹೆಂಡತಿ: ಹೇಮಾವತಿ
 • ವೃತ್ತಿ: ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಅಧ್ಯಾಪಕ ಮತ್ತು ಕುಲಪತಿಗಳಾಗಿದ್ದರು.
- Advertisement -

🔸ಕನ್ನಡ ಕವಿತೆಗಳನ್ನು ಬರೆಯಲು ಪ್ರೋತ್ಸಾಹಿಸಿದವರು ಐರಿಶ್ ಕವಿ ಜೇಮ್ಸ್ ಕಸಿನ್ಸ್.

🔸 ಆತ್ಮಕಥೆ: ನೆನಪಿನ ದೋಣಿಯಲ್ಲಿ

🔺 ಮಹಾಕಾವ್ಯ: ಶ್ರೀ ರಾಮಾಯಣ ದರ್ಶನಂ

🔸 ಕವನಸಂಕಲನಗಳು: ಅಮಲನ ಕಥೆ, ಪ್ರೇಮಕಾಶ್ಮೀರ, ಕೊಳಲು,ಕೋಗಿಲೆ, ಕಲಾಸುಂದರಿ, ಕನ್ನಡ ಕಾವ್ಯಾಂಜಲಿ, ಸೋವಿಯತ್ ರಷ್ಯಾ, ಅನಿಕೇತನ ಇತ್ಯಾದಿ

🔻 ಮಹಾ ಕಾದಂಬರಿಗಳು- ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು

🔸 ಜೀವನ ಚರಿತ್ರೆಗಳು: ಶ್ರೀ ರಾಮಕೃಷ್ಣ ಪರಮಹಂಸ,ಸ್ವಾಮಿ ವಿವೇಕಾನಂದ( ಗದ್ಯ ಬರಹ)

🔻 ಖಂಡಕಾವ್ಯ: ಚಿತ್ರಾಂಗದ( ಹೊಸ ಛಂದಸ್ಸು ಬಳಕೆ)

🔸 ವಿಮರ್ಶೆ/ಕಾವ್ಯಮೀಮಾಂಸೆ: ಕಾವ್ಯವಿಹಾರ, ತಪೋನಂದನ, ವಿಭೂತಿಪೂಜೆ,ದ್ರೌಪದಿ ಶ್ರೀಮುಡಿ.

🔴 ಬಿರುದು ಮತ್ತು ಪ್ರಶಸ್ತಿಗಳು:

 1. 2ನೇ ರಾಷ್ಟ್ರಕವಿ(1964)
 2. ಜ್ಞಾನಪೀಠ ಪ್ರಶಸ್ತಿ(1967)
 3. ಮೊಟ್ಟಮೊದಲ ಪಂಪ ಪ್ರಶಸ್ತಿ(1987)
 4. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1955),
 5. ಪದ್ಮಭೂಷಣ(1958),
 6. ಕರ್ನಾಟಕ ರತ್ನ(1992)

🔸 ರಸಋಷಿ-ಬಿರುದು

——ವಿಶೇಷ ಅಂಶಗಳು—–

 • ಧಾರವಾಡದಲ್ಲಿ 37 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. (1957)
 • 2004ರಲ್ಲಿ ಕುವೆಂಪು ಶತಮಾನೋತ್ಸವದ ನೆನಪಿಗಾಗಿ ಕುವೆಂಪು ಭಾಷಾಭಾರತಿ ಎಂಬ ಸಂಸ್ಥೆಯನ್ನು ಕರ್ನಾಟಕ ಸರಕಾರವು 2005ರಲ್ಲಿ ಸ್ಥಾಪಿಸಿತು.

ಎಮ್.ವೈ.ಮೆಣಸಿನಕಾಯಿ, ಬೆಳಗಾವಿ

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!