spot_img
spot_img

ಕನ್ನಡ ಬಳಕೆ ಅಭಿಯಾನ ; ನ್ಯಾಯಾಲಯದಲ್ಲಿ ಕನ್ನಡದಲ್ಲಿನ ವಾದ-ಪ್ರತಿವಾದದ ವೀಕ್ಷಣೆ

Must Read

spot_img

ಮೈಸೂರು – ಕನ್ನಡ ಕಾಯಕ ವರ್ಷದ ಆಚರಣೆ ಅಂಗವಾಗಿ ಕನ್ನಡ ಜಾಗೃತಿ ಸಮಿತಿ ಹಮ್ಮಿಕೊಂಡಿದ್ದ ನ್ಯಾಯಾಲಯದಲ್ಲಿ ಕನ್ನಡ ಬಳಕೆ ಅಭಿಯಾನದಲ್ಲಿ ಇಂದು ಮೈಸೂರು ನ್ಯಾಯಾಲದಲ್ಲಿ ಕನ್ನಡದಲ್ಲಿಯೇ ವಾದ ವಿವಾದ ನಡೆಸಲಾಯಿತು.

ಮೋಟಾರ್ ವಾಹನ ಅಪಘಾತ ಪರಿಹಾರ ಮಂಡಳಿ ಮತ್ತು ಪ್ರಧಾನ ಲಘು ವ್ಯವಹಾರಗಳ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಎಂ.ವಿ.ಸಿ ಸಂಖ್ಯೆ ೭೪೯/೨೦೧೮ ರ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಪರ ವಕೀಲ ಎಸ್ ಜಿ ಶಿವಣ್ಣೇಗೌಡರ ಮತ್ತು ಎರಡನೇ
ಪ್ರತಿವಾದಿ ಪರವಾಗಿ ವಕೀಲರಾದ ವಿ.ಅನಂತರಾಜು ರವರು ಹಾಜರಿದ್ದು ಈ ಪ್ರಕರಣದಲ್ಲಿ ಈಗಾಗಲೇ ಅರ್ಜಿದಾರರು ಮತ್ತು ಪ್ರತಿವಾದಿಗಳ ವಿಚಾರಣೆ ಮುಗಿದಿದ್ದು ಈಗಿನ ಉಭಯ ಪಕ್ಷಗಾರರ ಪರವಾಗಿ ಅವರ ವಕೀಲರುಗಳು ನ್ಯಾಯಾಲಯದಲ್ಲಿ ಕನ್ನಡದಲ್ಲೆ ವಾದಮಂಡನೆ ನಡೆಸಿದರು.

ವೈದ್ಯಕೀಯ ಮತ್ತು ತಾಂತ್ರಿಕ ಆಂಗ್ಲ ಶಬ್ದಗಳನ್ನು ಹೊರತುಪಡಿಸಿ ಉಳಿದೆಲ್ಲ ವಾದವನ್ನು ಕನ್ನಡದಲ್ಲಿ ಮಂಡಿಸಿದರು.

ಕರ್ನಾಟಕ ಸರ್ಕಾರದ ಕನ್ನಡ ಕಾಯಕ ವರ್ಷ ನಾಲ್ಕನೇ ಅಭಿಯಾನದ ಬೆನಗಲ್ ನರಸಿಂಗರಾವ್ ಸ್ಮರಣಾರ್ಥ ನ್ಯಾಯಾಲಯದ ಕನ್ನಡ ಅನುಷ್ಠಾನಕ್ಕಾಗಿ ಮೈಸೂರು ನ್ಯಾಯಾಲಯದ ಆಡಳಿತ ಅಧಿಕಾರಿಯ ಅನುಮತಿಯ ಮೇರೆಗೆ ಮೈಸೂರು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್, ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎ.ಎಸ್ ನಾಗರಾಜ್ , ಅರವಿಂದ್ ಶರ್ಮ , ಸೌಗಂಧಿಕಾ ವಿ ಜೋಯಿಸ್ , ಎನ್.ಜಿ.ಗಿರೀಶ್ , ಡಾ. ಮುಳ್ಳೂರು ನಂಜುಂಡಸ್ವಾಮಿ ನ್ಯಾಯಾಲಯಕ್ಕೆ ಹಾಜರಾಗಿ ವೀಕ್ಷಿಸಿದರು.

ನಂತರ ಕನ್ನಡ ಜಾಗೃತಿ ಸಮಿತಿಯ ಸದಸ್ಯರು ವಕೀಲರ ಸಂಘದ ಕಾರ್ಯದರ್ಶಿಯಾದ ಬಿ.ಶಿವಣ್ಣ ಅವರನ್ನು ಭೇಟಿ ಮಾಡಿದರು ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಭಾಸ್ಕರ್ ಆರಾಧ್ಯ , ರುದ್ರಮೂರ್ತಿ ಶಾಂಭವ ಮೂರ್ತಿ , ವಿಷ್ಣುವರ್ಧನ್ ಹಾಗೂ ಹಲವು ವಕೀಲರು ಹಾಜರಿದ್ದರು.

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!