ಸವದತ್ತಿ – ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೋಟಗೂಡಿ ಇದರ ಗೌರವಾನ್ವಿತ ಶೈಕ್ಷಣಿಕ ಪರಿಷತ್ತಿನ ಸದಸ್ಯರಾಗಿ ಲಕ್ಷ್ಮಿ ಮಹಾದೇವ ಅರಿಬೆಂಚಿ ಯವರನ್ನು ನಾಮ ನಿರ್ದೇಶನ ಮಾಡಿದ್ದು, ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸರಕಾರ ಇವರನ್ನು ನಾಮನಿರ್ದೇಶನ ಮಾಡಿ ಉತ್ತಮ ಸೇವೆಗೆ ಅವಕಾಶ ನೀಡಿದೆ.
ಇವರ ಈ ಆಯ್ಕೆಯನ್ನು ಸವದತ್ತಿ ತಾಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸ್ವಾಗತಿಸಿ ಅರಿಬೆಂಚಿಯವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.ಮುಂದಿನ ದಿನಗಳಲ್ಲಿ ಜಾನಪದ ವಿಶ್ವವಿದ್ಯಾಲಯಕ್ಕೆ ಇವರ ಅನುಪಮ ಸೇವೆ ಸಲ್ಲಲಿ ಎಂದು ಈ ಸಂದರ್ಭದಲ್ಲಿ ವೈ.ಬಿ.ಕಡಕೋಳ ಆಶಿಸಿದ್ದಾರೆ.