ಕಲೆಯೇ ಕಾಯಕ – ಶ್ರೀ ದತ್ತಾತ್ರೇಯ ಸುಗಂಧಿ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಕನ್ನಡ ಕಲಾಲೋಕದಲ್ಲಿ ಒಂದು ಮಾತಿದೆ.”ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಕೈಹಿಡಿಯುತ್ತದೆ”.ಹೌದು ಈ ಮಾತು ಅಕ್ಷರಶಃ ಸತ್ಯ. ಕಲಾದೇವಿಯ ಹಾರೈಕೆ ಅಂತಹದು.

ಹಾನಗಲ್ ಎಂದಾಕ್ಷಣ ಮೊದಲಿಗೆ ನೆನಪಾಗುವುದು,ಐತಿಹಾಸಿಕ ತಾರಕೇಶ್ವರನ ನಾಡು.ಕುಮಾರ ಶಿವಯೋಗಿಗಳ ತಪೋ ಭೂಮಿ. ಪಾಂಡವರ ಕಾಲದ ವಿರಾಟ ನಗರ.ಹೀಗೆ ಹೇಳುತ್ತ ಹೋದರೆ ಅದೊಂದು ಮಹಾ ಪರ್ವ.

ಇಂತಹ ನಾಡಿನಲ್ಲಿ ವಾಸವಾಗಿರುವ ಒಂದು ಮಧ್ಯಮ ವರ್ಗದ ಕುಟುಂಬ ಸುಗಂಧಿ ಮನೆತನ. ಹೆಸರೇ ಹೇಳುವಂತೆ ಈ ಮನೆತನ ನಾಡಿನಾದ್ಯಂತ ತನ್ನದೇ ಆದ ಸುಗಂಧ ಬೀರುತ್ರಿದೆ.ಬಹುಶಃ ಹಾನಗಲ್ ಪಟ್ಟಣದಲ್ಲಿ ಈ ಮನೆತನದ ಹೆಸರು ಕೇಳದವರೆ ಇಲ್ಲ. ಕಾರಣ ಯಾವತ್ತಿಗೂ ಕೂಡ ಈ ಮನೆತನ ಕಲೆಯನ್ನು ಬಿಟ್ಟು ಕೊಟ್ಟಿಲ್ಲ.ಮೂಲತಃ ಕೃಷಿಕರಾಗಿದ್ದು,ಪ್ರವೃತ್ತಿಯಲ್ಲಿ ಕಲಾರಾಧಕರು.

- Advertisement -

ಪ್ರತಿಭಾ ಕಾರಂಜಿ

ವಿದ್ಯಾರ್ಥಿಗಳಿಗೆ ಪ್ರತಿವರ್ಷ ಶಿಕ್ಷಣ ಇಲಾಖೆ,ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಹಾಕಿಕೊಂಡ ಒಂದು ಯೋಜನೆ. ಈ ಶಿಕ್ಷಣ ಇಲಾಖೆ ನಡೆಸುವ ಪ್ರತಿಭಾ ಕಾರಂಜಿಗೂ ಸುಗಂಧಿ ಮನೆತನಕ್ಕೂ ಇರುವ ಸಂಬಂಧವೇನು?ಎತ್ತಣ ಮಾಮರ ಎತ್ತಣ ಕೋಗಿಲೆ? ಎನ್ನುವ ಬಸವೇಶ್ವರ ವಚನದಂತೆ ಇವರಿಗೂ ಪ್ರತಿಭಾ ಕಾರಂಜಿಗೂ ಅವಿನಾಭಾವ ಸಂಬಂಧವಿದೆ. ಪ್ರತಿಭಾ ಕಾರಂಜಿಯ ಒಂದು ಸ್ಪರ್ಧೆಯೇ ಛಧ್ಮವೇಷ.ಇಲ್ಲಿ ಮಗು ತನ್ನಲ್ಲಿರುವ ವಿಶೇಷ ಪ್ರತಿಭೆಯನ್ನು ಹೊರ ಹಾಕಲು ವಿವಿಧ ಬಗೆಯ ವೇಷ ಭೂಷಣ ಧರಿಸಿ ಅದರ ಅನಾವರಣ ಮಾಡುತ್ತದೆ. ಈ ವೇಷಭೂಷಣ ಸಿದ್ದ ಪಡಿಸುವ ಕಾರ್ಯ ಈ ಮನೆತನದ್ದು.ಇವರು ಇಲ್ಲಿಯವರೆಗೆ ಮಾಡಿದ ವೇಷಭೂಷಣ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿರುವುದು ವಿಶೇಷ.

ಕಲಾ ಲೋಕ

ಇದೊಂದು ಅವಿಭಕ್ತ ಕುಟುಂಬ. ಇದರಲ್ಲಿ ಎಲ್ಲ ಸಹೋದರರು ಕಲಾವಿದರೆ.ಅವರ ಮನೆ ಎಂಬುದೇ ಒಂದು ಅದ್ಭುತ ಕಲಾ ಲೋಕ.ನಾಡಿನ ಹಲವಾರು ಸಂಸ್ಕ್ರತಿಯ ವೇಷಭೂಷಣಗಳು ಇಲ್ಲಿ ಲಭ್ಯ. ಇವರ ಮನೆಯೆಂಬುದೇ ಕಲಾವಿದರ ಪಾಲಿಗೆ ಸ್ವರ್ಗ. ಸರ್ ಅಥವಾ ಅಣ್ಣ ನಮಗೆ ಇಂತಹ ವೇಷಭೂಷಣ ಬೇಕು ಎಂದಾಗ ಇಲ್ಲ ಹೋಗಿ ಎಂದು ಹೇಳಿದ ಮಾತಿಲ್ಲ.

ಪ್ರಹಸನ ಕಲಾವಿದರು

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಡೆಸುವ ಯಾವುದಾದರೂ ಕಾರ್ಯಕ್ರಮ ಇದ್ದರೂ ಅಲ್ಲಿ ಇವರ ತಂಡ ಹಾಜರಾಗಿದ್ದು,ಕಲೆಯನ್ನು ಪ್ರದರ್ಶಿಸಿ ಬರುವುದುಂಟು. ಜೊತೆಗೆ ಬರುವಾಗ ಹಲವಾರು ವಿಭಿನ್ನ ವಿಚಾರಗಳೊಂದಿಗೆ ಬಂದ ಈ ಕಲಾವಿದರು ಅಲ್ಲಿ ಬಂದ ಇತರ ತಂಡದ ವೇಷಭೂಷಣಗಳು ತಮ್ಮಲ್ಲಿ ಇಲ್ಲದಿದ್ದರೆ ಅದನ್ನು ತಕ್ಷಣ ಸಿದ್ದಪಡಿಸಿಕೊಂಡು ಮುಂದಿನ ಪ್ರದರ್ಶನವನ್ನು ನೀಡುತ್ತದೆ.

ಬೇಡರ ವೇಷ

ಮೂಲತಃ ಬೇಡರ ವೇಷ ಎನ್ನುವ ಜಾನಪದ ಕಲೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ (ಶೈಕ್ಷಣಿಕ ಜಿಲ್ಲೆ) ಇದನ್ನು ಒಂದು ದಿನ ವೀಕ್ಷಿಸಿದ ಈ ಕಲಾವಿದರು ಹಾನಗಲ್ಲಿನಲ್ಲಿ ಏಕೆ ಪ್ರಚುರಪಡಿಸಲು ಸಾಧ್ಯವಿಲ್ಲ ಎಂದು ಯೋಚಿಸಿ ತಕ್ಕಣ ಅದಕ್ಕೆ ಸಂಬಂಧಿಸಿದ ವೇಷ ಭೂಷಣ ತಯಾರಿಸಿತು.ಅದನ್ನು ತಯಾರಿಸಿದ್ದು ಮಾತ್ರವಲ್ಲ ಇಡೀ ದೇಶದಾದ್ಯಂತ ಸಾವಿರಾರು ಪ್ರದರ್ಶನ ನೀಡಿದರು.

ರಂಗೀನ್ ರಾತ್ರಿ (ಕತ್ತಲ ರಾತ್ರಿ)

ಹಾನಗಲ್ ಜನತೆಗೆ ಇದು ಸುಂದರ ನೋಟ.ಹೋಳಿ ಹುಣ್ಣಿಮೆಯ ಹಿಂದಿನ ದಿನ ಹಾನಗಲ್ಲಿನಲ್ಲಿ ಮಾತ್ರ ನಡೆಯುವ ಏಕೈಕ ಪ್ರದರ್ಶನ.ಅಂದು ನಾಡಿನ ಹಲವಾರು ಭಾಗಗಳ ವಿವಿಧ ರೀತಿಯ ವೇಷಭೂಷಣಗಳನ್ನು ಧರಿಸಿ,ವಿವಿಧ ಸಂಸ್ಕ್ರತಿಯನ್ನು ಅನಾವರಣಗೊಳಿಸುತ್ತಾರೆ.ಇದನ್ನು ನೋಡಲೆಂದು ಸುತ್ತಮುತ್ತಲಿನ ಪ್ರದೇಶಗಳ ಜನರು ಬಂದಿರುತ್ತಾರೆ.ಇದರ ಸಂಪೂರ್ಣ ಉಸ್ತುವಾರಿಯನ್ನು ಸುಗಂಧಿ ಮನೆತನ ಒಪ್ಪಿಕೊಂಡಿರುತ್ತದೆ.ಜೊತೆಗೆ ಅದರ ಯಶಸ್ಸಿಗಾಗಿ ಶ್ರಮಿಸುತ್ತಿದೆ.

ರಾಣಿಗ್ಯಾ

ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ಒಂದು ಹಬ್ಬ ಮಾರಿ ಹಬ್ಬ. (ಗ್ರಾಮ ದೇವತೆ,ದ್ಯಾಮವ್ವನ ಜಾತ್ರೆ,ಮಾರಿ ಹಬ್ಬ, ಮಾರಿಕಾಂಬಾ ಜಾತ್ರೆ, ಮರೆಮ್ಮನ ಜಾತ್ರೆ) ಈ ಹಬ್ಬದಂದು ಹಲವಾರು ಬಗೆಯ ಆಚರಣೆಗಳು ನಡೆಯುತ್ತವೆ. ಅದರಲ್ಲಿ ಒಂಭತ್ತನೆಯ ದಿನ ದೇವಿಗಾಗಿ ಬಲಿ ಕೊಡುತ್ತಾರೆ.ಬಲಿ ಪೀಠದ ಮುಂದೆ ಒಬ್ಬ ವ್ಯಕ್ತಿ ಚಿತ್ರ ವಿಚಿತ್ರವಾಗಿ ದೇವಿಯನ್ನು ಬೈಯ್ಯುತ್ತಿರುತ್ತಾನೆ.ಅವನನ್ನು ಆಡು ಭಾಷೆಯಲ್ಲಿ ರಾಣಿಗ್ಯಾ ಎಂದು ಕರೆಯುತ್ತಾರೆ. ಈ ವೇಷವನ್ನು ಧರಿಸುವುದು ಇವರ ಕಾರ್ಯಗಳಲ್ಲಿ ಒಂದು.

ಅವಕಾಶ ವಂಚಿತರಾದರು

ನಮ್ಮ ನಾಡಿನ ಕಲೆಯನ್ನು ಪ್ರಚುರಪಡಿಸಲು ದೇಶದ ರಾಜಧಾನಿ ದೆಹಲಿಗೆ ತೆರಳಲು ಸಿದ್ದರಾದ ಇವರಿಗೆ ಪಟ್ಟ ಭದ್ರ ಹಿತಾಸಕ್ತಿಗಳು ದೆಹಲಿಗೆ ಹೋಗುವುದನ್ನು ತಪ್ಪಿಸಿವೆ.೨೦೨೦ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡದೆ ಅವಕಾಶ ವಂಚಿತರನ್ನಾಗಿ ಮಾಡಿದ್ದಾರೆ.

ಸೂರಜ್ ಕುಂಡ್

ಉತ್ತರ ಭಾರತದ ಪ್ರಮುಖ ಕುಂಭ ಮೇಳದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕೀರ್ತಿ ಇವರದು. ಇಲ್ಲಿಯೂ ಕೂಡ ಬೇಡರ ವೇಷ ಧರಿಸಿ ನಾಡಿನ ಕಲೆಯನ್ನು ಬೆಳಗಿಸಿದ್ದಾರೆ.

ಹೀಗೆ ಹಾನಗಲ್ಲಿನ ತವರು ನೆಲ ಇಂತಹ ಒಂದು ಶ್ರೇಷ್ಠ ಮಟ್ಟದ ಕಲಾವಿದರಿಗೆ ಜನ್ಮ, ನೀಡಿದ್ದು ಹೆಮ್ಮೆ ಎನಿಸುತ್ತದೆ. ಮತ್ತೊಮ್ಮೆ ಆ ಕುಟುಂಬಕ್ಕೆ ಶುಭವಾಗಲಿ.

ಇಂಗಳಗಿ ದಾವಲಮಲೀಕ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!