ಕವನ : ಆಚರಿಸಿದೆವು ಸ್ವಾತಂತ್ರ್ಯೋತ್ಸವ

Must Read

ಆಚರಿಸಿದೆವು ಸ್ವಾತಂತ್ರೋತ್ಸವ

ಗೆಳೆಯರೆ
ಆಚರಿಸಿದೆವು ನಾವು ಸ್ವಾತಂತ್ರೋತ್ಸವ
ದೇಶದ ಗಡಿ ಸೈನಿಕರ ಸರ್ಪಗಾವಲು
ಸಂಸತ್ತು ವಿಧಾನ ಸಭೆಗೆ ಬಿಗಿ ಭದ್ರತೆ
ಮಂತ್ರಿಗಳು ನಾಯಕರಿಗೆ ಜೀವ ರಕ್ಷಣೆ
ಸಾಯುತ್ತಿದ್ದಾರೆ ಯೋಧರು ರೈತರು
ರಕ್ತದೊಕಳಿ ಉಗ್ರ ಅಟ್ಟಹಾಸ
ಬಾಂಬ್ ಫಿರಂಗಿಗಳ ಹಾರಾಟ
ನಿಷ್ಠೆ ಸ್ವಾಭಿಮಾನದ ಮಾರಾಟ
ಇಲ್ಲ ಇಲ್ಲಿ ದೇಶ ಪ್ರೇಮ ಸ್ವಾತಂತ್ರ
ಬದುಕು ಅನಿಶ್ಚಿತ ಪರತಂತ್ರ
ಬಣ್ಣ ಬಣ್ಣದ ಬಲೂನ್ ಪತಾಕೆ
ರಂಗು ರಂಗಿನ ಉಡುಪಿನ ಮಕ್ಕಳು
ಜೈ ಜವಾನ್ ಜೈ ಕಿಸಾನ್ ಘೋಷಣೆ
ಕಳ್ಳ ಕಾಕರ ಭ್ರಷ್ಟ ನಾಯಕರ ಪೋಷಣೆ
ಆಗಸ್ಟ್ ೧೫ ಸಾರ್ವತ್ರಿಕ ರಜೆ
ಶಾಲಾ ಮಕ್ಕಳಿಗೆ ಶಿಕ್ಷಕರಿಗೆ ನಿಲ್ಲುವ ಸಜೆ
ಎಲ್ಲರ ಸಮ್ಮುಖದಲ್ಲಿ ಧ್ವಜಾರೋಹಣ
ಭ್ರಷ್ಟ ಮಂತ್ರಿ ಶಾಸಕರ ಅಬ್ಬರದ ಭಾಷಣ
ನೆಲ ಜಲ ಗಣಿ ಕೃಷಿಯ ಕಳವಳ
ಜೋರಾಗಿ ಚಪ್ಪಾಳೆ ಹಾರ ಸತ್ಕಾರ
ಪುಟ್ಟ ಕಂದಮ್ಮಗಳ ಗಾಂಧಿ ಭಗತರ ಪಾತ್ರ
ಜಹಾಂಗೀರ ಜಾಮುನ ಸಿಹಿ ಭೋಜನ
ಸಂಜೆ ಕಲಾವಿದರ ಹಾಡು ತಬಲಾ ವಾದನ
ಬಾನುಲಿ ದೂರದರ್ಶನದಲಿ ನೇರ ಬಿತ್ತರ
ಮತ್ತೆ ಮಾಡಿ ಮುಗಿಸಿದೆವು ಸ್ವಾತಂತ್ರೋತ್ಸವ
ದಶಕಗಳಿಂದ ಒಂದು ದಿನದ ನಾಟಕ
ಬನ್ನಿ ಇನ್ನಾದರು ಗಟ್ಟಿಗೊಳಿಸುವ ನಮ್ಮತನ
ಮರೆಯುವುದು ಬೇಡ
ನಮ್ಮವರ ತ್ಯಾಗ ಬಲಿದಾನ

ಡಾ. ಶಶಿಕಾಂತ .ಪಟ್ಟಣ -ರಾಮದುರ್ಗ -ಪೂನಾ

Latest News

ಕವನ : ಕವಿತೆಗೊಂದು ಕರೆಯೋಲೆ

ಕವಿತೆಗೊಂದು ಕರೆಯೋಲೆ ಬರೆಯಲೆಂದು ಕುಳಿತ ನನಗೆ ಪದಗಳೇ ಸಿಗುತಿಲ್ಲ... ನುಡಿಗಳೆಲ್ಲ ಮುನಿಸಿಕೊಂಡು ದೂರ ಓಡುತಿವೆಯಲ್ಲ...!ಬೆರಳುಗಳಿಗೂ ಲೇಖನಿಗೂ ಒಳಗೊಳಗೆ ನಡೆಯಿತಾ? ಒಳಜಗಳ!! ಮನಃಪಟದಲೋ ಸಾವಿರಾರು ಅಕ್ಷರ ಬಳಗ... ಕವಿತೆ ಕಟ್ಟಲದೇಕೋ ಆಗದೆ ಸಾಗಿದೆ ಕಾಳಗ...ಪ್ರೀತಿಯಿಂದ ಕವಿತೆಗೊಂದು ಓಲೆ ಬರೆದು...

More Articles Like This

error: Content is protected !!
Join WhatsApp Group