ಕವನ: ಆಹಾರ ಬ್ರಹ್ಮ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಆಹಾರ ಬ್ರಹ್ಮ

ಶತಶತಮಾನಗಳಿಂದಲೂ
ಹಸಿದ ಹೊಟ್ಟೆಗಳಿಗೆ
ಆಹಾರ ಬೆಳೆಯುತಿರುವ ಓ ರೈತ
ನೀನೊಬ್ಬ ವಿಶ್ವ ರಕ್ಷಕ..
ಮನುಜ ಕುಲದ ‘ಆಹಾರ ಬ್ರಹ್ಮ,’

ನಾಡಿನ ಆಡಳಿತದ ಹಾವು-ಏಣಿ ಆಟದಲಿ,
ಅಧಿಕಾರದ ತಲೆಗಳು ಉರುಳಲಿ,
ಹೊಸ ತಲೆಗಳು ಠೇಂಕಾರ ಮಾಡಲಿ ,
ನಿನ್ನ ಸುತ್ತ-ಮುತ್ತ ಏನೇನು ನಡೆದರೂ,
ಮಳೆ-ಗಾಳಿ-ಬಿಸಿಲೆನ್ನದೇ
ಕೃಷಿ ಭೂಮಿಯೇ ನಿನ್ನ ಕರ್ಮಭೂಮಿ ,
ಕೃಷಿ ಕಾಯಕವೇ ನಿನ್ನುಸಿರು..

ನಿನ್ನ ವೃತ್ತಿಗೆ, ಕುಲಕಸುಬಿಗೆ
ಮಾನವ ಜೀವನಕೆ ಉಸಿರು ನೀಡುವ ತಾಕತ್ತಿದೆ ,
ಸಾವಿರಾರು ವರ್ಷಗಳ ಭವ್ಯ ಇತಿಹಾಸವಿದೆ ,
ತಾನುಂಡು,ಲಕ್ಷಾಂತರ ಜನರ ಹಸಿವು
ತಣಿಸಿದ,ಪ್ರಾಣಿ-ಪಕ್ಷಿಗಳ ಕಾಪಾಡಿದ ತೃಪ್ತಿಯಿದೆ…

- Advertisement -

ಮಳೆ ಇಲ್ಲದಾಗ , ನಿಟ್ಟುಸಿರಿಟ್ಟ
ನಭದತ್ತ ನಿರಾಸೆಯಿಂದ ನೋಡುವ ;
ಅತಿವೃಷ್ಟಿಯಾದಾಗ..
ಬೆಳೆದ ಬೆಳೆ ನೀರು ಪಾಲಾದಾಗ ,
ನಿನ್ನ ಬಾಳ ಗೋಳು ಅಸದಳ ,
ಅನಾವೃಷ್ಟಿಯಾದಾಗ..
ಕಷ್ಟಪಟ್ಟು ಬೆಳೆದ ಬೆಳೆ
ಬಿಸಿಲಿಗೆ ಸುಟ್ಟು ಕರಕಲಾದಾಗ
ನಿನ್ನ ಕಣ್ಣಂಚಿನ ಕಂಬನಿ
ಖಾವಿಧಾರಿಗಳಿಗೇನು ಗೊತ್ತು ??

ಭೂತಾಯಿಯ ಹದವಾಗಿ ಉತ್ತು ,
ಬೀಜ ಬಿತ್ತಿ,ಬೆಳೆ ತೆಗೆಯುವ ನಿನಗೆ
ಭೂತಾಯಿಯೇ ಬಾಳದೇವತೆ..
ಜಮೀನಿನ ಸುತ್ತ ಹಸಿರು ಸಸಿಗಳ ನೆಟ್ಟು ,
ಮಕ್ಕಳಂತೆ ಅಕ್ಕರೆಯ ತೋರುವ ,
ನೀ ನಿಜವಾದ
‘ಪರಿಸರ ಸಂರಕ್ಷಕ ‘..

ಬೆಳೆದ ಬೆಳೆಯಲ್ಲೇ ಹಬ್ಬ ,ಹರಿದಿನ ,
ಊರ ಸಂತೆ,ಜಾತ್ರೆ,ಮಕ್ಕಳ ಮದುವೆ,ಸೀಮಂತ,
ವೃದ್ಧ ತಂದೆ-ತಾಯಿಗಳ ಆರೈಕೆ ..
ಎಲ್ಲವನೂ ಹಿತವಾಗಿ ನಡೆಸುವ ನೀನೊಬ್ಬ ನೈಜ ‘ಕಾಯಕ ಯೋಗಿ ‘..
ರೈತನೆಂಬ ಕುಲಕಸುಬಿನ ನಿನಗೆ
ಜಾತಿ,ಮತ,ಧರ್ಮಗಳಿಲ್ಲ ,
ನೀನೊಬ್ಬ ‘ವಿಶ್ವಮಾನವ ‘

ಶ್ರಮ ಹಾಗೂ ದುಡಿಮೆಯ ತ್ಯಜಿಸಿ ,
ಎಲ್ಲರಂತೆ ಅಧಿಕಾರದ ಬೆನ್ನು ಬಿದ್ದಿದ್ದರೆ ,
ರೈತ ಸಹೋದರರೆಲ್ಲ ಒಗ್ಗಟಿನಲಿ ಮುನ್ನಲೆಗೆ ಬಂದಿದ್ದರೆ ,
ಎಲ್ಲಾ ಅಧಿಕಾರ -ಸಿಂಹಾಸನಗಳೂ
ನಿನ್ನ ರೈತ ಸಮುದಾಯದ ಬೀಡಾಗುತ್ತಿತ್ತು…

ಅಧಿಕಾರದ ವ್ಯಾಮೋಹ ಪಡದೇ ,
ಸರಳ,ಸುಸಂಸ್ಕೃತ, ಶ್ರಮಜೀವಿ ಬದುಕಿನ
‘ಕಾಯಕ ಯೋಗಿ ‘ ನೀನಾದೆ
ಓ ರೈತ ! ನಿನಗೆಂದಿಗೂ ಇದೆ
ಎಲ್ಲ ಮನುಜರ ,ಪ್ರಾಣಿ-ಪಕ್ಷಿಗಳ ಶುಭಹಾರೈಕೆ….


ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು,ಪತ್ರಕರ್ತರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!