- Advertisement -
ಇಲ್ಲೇ ಇದ್ದೀನಿ
ಇಲ್ಲೇ ಇದ್ದೀನಿ
ಹೀಗೇ ಇರುವೆ
ಒಂಟಿ ಜೀವ ಕಾಡುತ್ತಿದೆ
ನಿನ್ನ ನೆನಪಲ್ಲೇ
ಪ್ರತಿಕ್ಷಣ ಬದುಕಿರುವೆ
ನಿನ್ನ ಉಸಿರೇ ನನ್ನ ಉಸಿರಾಗಿದೆ.
ಏನು ಮೋಡಿ ಮಾಡಿರುವೆ ನೀನು
ಇಷ್ಟು ವರ್ಷ ಇಲ್ಲದ್ದು
ಪ್ರೀತಿ ಪ್ರೇಮ
ಈ ಉಕ್ಕುಕ್ಕಿ ಬರುತ್ತಿದೆ
ನಿನ್ನ ಮಾತು, ನಿನ್ನ ಭರವಸೆ
ಹೊಸದಿಗಂತ ನಿತ್ಯ ಚೇತನ
ಕಾರಂಜಿಯಂತೆ ಪುಟಿಯುತ್ತಿದೆ
ನೀನೇ ನನ್ನ ಸರ್ವಸ್ವ
ಕನಸು ಬಯಕೆಯ ಬುತ್ತಿ
ಉಸಿರು ಕಾವ್ಯ ಕವನ
ಚಂದ್ರ ಮಧುಚಂದ್ರ
ಒಂಟಿ ಬದುಕಿನ ಬಾಳಬಟ್ಟೆ
- Advertisement -
ಅಕ್ಕಮಹಾದೇವಿ ತೆಗ್ಗಿ