spot_img
spot_img

ಕವನ: ಎಲ್ಲಿ ಹೋದವೋ ಆ ಕ್ಷಣಗಳು..

Must Read

spot_img

ಎಲ್ಲಿ ಹೋದವೋ ಆ ಕ್ಷಣಗಳು..

- Advertisement -

ಎಲ್ಲಿ ಹೋದವೋ ಆ ಮಧುರ‌ ಕ್ಷಣಗಳು,
ಜಾತಿ-ಧರ್ಮಗಳ ಬೇಧವಿಲ್ಲದೇ ,
ಸಂತಸ ,ಸಂಭ್ರಮದಿಂದ
ಜರುಗುತ್ತಿದ್ದ ಗ್ರಾಮೀಣ ಜಾತ್ರೆಗಳು,
ಪುರಿ ,ಬತ್ತಾಸು,ಕಾರಸೇವೆ,ಹೂವು -ಜವನಗಳು ,
ನೆಂಟರೆಲ್ಲ ಒಂದೆಡೆ ಸೇರಿ ಮಾಡುತ್ತಿದ್ದ ,
ಸಿಹಿ-ಸಿಹಿಯಾದ ಭಕ್ಷ್ಯ-ಭೋಜನಗಳು….

ಯುಗಾದಿ-ದೀಪಾವಳಿ ಹಬ್ಬಗಳಲಿ,
ಊರ ಮುಂದಿನ ಕೆರೆಗಳಲಿ,
ರಾಸುಗಳ ಮೈ ತೊಳೆದು,
ಕೊಂಬುಗಳಿಗೆ ಬಣ್ಣ ಬಳಿದು,
ಹೂಹಾರ ಹಾಕಿ,ದಾವಣಿ ಹೊದಿಸಿ
ಗ್ರಾಮದೊಳಗೆ ಭಕ್ತಿಯಿಂದ ನಡೆಸುತ್ತಿದ್ದ
ಆಕರ್ಷಕ ರಾಸುಗಳ ಮೆರವಣಿಗೆಗಳು
ಎಲ್ಲಿ ಹೋದವೋ ಆ ಮಧುರ ಕ್ಷಣಗಳು..

ಭತ್ತ ಬಡಿದು ರಾಶಿ ಹಾಕಿ,
ಗಾಳಿಯಲಿ ತೂರುವಾಗ ಹಾಡುತ್ತಿದ್ದ,
ಹೆಣ್ಮಕ್ಕಳ ಸುಮಧುರ ಹಾಡುಗಳು ,
ಮೊರ ತುಂಬಿ,ಮನ ತುಂಬಿ ನೀಡುತ್ತಿದ್ದ
ಜಮೀನಿನ ಒಡೆಯನ ಮುಗ್ಧ ಮನಸಿನ ದಾನಗಳು…
ಎಲ್ಲಿ ಹೋದವೋ ಆ ಕ್ಷಣಗಳು..

- Advertisement -

ಮನೆಗೆ ಬಂದ ಅತಿಥಿಗಳಿಗೆ
ಮಾಡುತ್ತಿದ್ದ ಹಾಲು-ಹಣ್ಣಿನ ಆತಿಥ್ಯಗಳು ,
ಬೆಳೆದ ಕಾಯಿಪಲ್ಲೆಗಳ ದಾನಗಳು ,
ಆರೋಗ್ಯ ನೀಡುತ್ತಿದ್ದ ಕೈಔಷಧಿಗಳು ,
ಊರ ಮುಂದಿನ ಅರಳಿಕಟ್ಟೆಯ
ಪ್ರೀತಿ-ವಿಶ್ವಾಸದ ಹಿರಿಯರ ಸಭೆಗಳು
ಎಲ್ಲಿ ಹೋದವೋ ಆ ಕ್ಷಣಗಳು..

ಗ್ರಾಮಪಂಚಾಯ್ತಿ ರೇಡಿಯೋದಿಂದ
ಕೇಳುತ್ತಿದ್ದ ಅನುಕ್ಷಣದ ವಾರ್ತೆಗಳು,
ಮನಸೆಳೆಯುತ್ತಿದ್ದ ಯಕ್ಷಗಾನ ಪ್ರಹಸನ ಗಳು,
ತೊಗಲು ಬೊಂಬೆಯಾಟಗಳು,ರಂಗಭೂಮಿ‌ ನಾಟಕಗಳು,
ಬಾಲಕರ ಮನಗೆದ್ದಿದ್ದ ಬುಗುರಿ,ಲಗೋರಿ,ಗೋಲಿ ಆಟಗಳು,
ಬಾಲಕಿಯರ ಮನಸೆಳೆದಿದ್ದ ಹಗ್ಗದಾಟ,ಕುಂಟೆಬಿಲ್ಲೆ,ಕಟ್ಟೆಮನೆ,ಚೌಕಾಬಾರ ಆಟಗಳು..
ಎಲ್ಲಿ ಹೋದವೋ ಆ ಅತ್ಯಮೂಲ್ಯ ಕ್ಷಣಗಳು..


ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group