ಕವನ : ಜೀವ ಮುಕ್ತಿ

0
93

ಜೀವ ಮುಕ್ತಿ

ನೀನು ಮರೆಯಾಗಿ
ಹೋದೆ ಎಂದು
ಬಳಲಲಿಲ್ಲ ನಾನು
ನಿನ್ನ ನೆನಪಲಿ
ನಿನ್ನ ನೆನಹುವಿನಲಿ
ನೂಕುತ್ತಿರುವೆ ಬದುಕು
ನಿನ್ನ ಶಕ್ತಿ

ಕೈ ಹಿಡಿದು ನಡೆದೆವು
ಮೂರು ದಶಕದ ಜೀವನ
ನಿನಗೆ ನಾನು ನನಗೆ ನೀನು
ಮರೆತು ಹೋದ ಪಯಣ
ನಿನ್ನ ಉಸಿರಲಿ ನಾನು ಬೆರೆತೆ
ನನ್ನ ಜೀವಕೆ ಸ್ಫೂರ್ತಿ
ಇರಲಿ ಸ್ನೇಹ ಪ್ರೀತಿ ಜೀವ ಮುಕ್ತಿ
________________________
ದೀಪಾ ಪೂಜಾರಿ ಕುಶಾಲನಗರ