- Advertisement -
ದೋಕಾಯುಕ್ತರು ಬೇಕಾಗಿದ್ದಾರೆ !
——————————-
ಬೇಕಾಗಿದ್ದಾರೆ ಅರ್ಜೆಂಟಾಗಿ
ದೋಕಾಯುಕ್ತರು ಬೇಕಾಗಿದ್ದಾರೆ.
ಭೂ ಹಗರಣ ಡಿ ನೋಟಿಫಿಕೇಶನ್
ಗಣಿ ಆಕ್ರಮ ಲಂಚ ವ್ಯವಹಾರ
ಖರೀದಿ ಯೋಜನೆ ಕರ್ಮಕಾಂಡ
ನೋಟು ಎಣಿಸುವ ಯಂತ್ರ
ಕೊಳ್ಳೆ ಹೊಡೆಯುವ ತಂತ್ರ
ಕೆರೆ ನುಂಗಿದ ಪ್ರಕರಣಗಳಿಗೆ
ಆಡಳಿತ ವಿರೋಧ ಪಕ್ಷಗಳ
ಬಾರಾ ಬಾನಗಡಿಗಳಿಗೆ
ಬಿ ಫಾರಂ ಹಾಕಿ ಕ್ಲೀನ ಚಿಟ್
ಕೊಡುವವರು ಬೇಕಾಗಿದ್ದಾರೆ.
ಹೆಂಡತಿ ಮಕ್ಕಳ ಹೆಸರಲಿ
ಬೇನಾಮಿ ಸೈಟು ಆಸ್ತಿ ಮಾಡಿ
ಮುಪ್ಪಿನಲಿ ವೃದ್ಧಾಶ್ರಮ ನಡೆಸಲು
ನಿವೃತ್ತ ಅಧಿಕಾರಿ ಬೇಕಾಗಿದ್ದಾರೆ.
ಮಗನಿಗೆ ಕಚೇರಿ ಮನೆಯಲ್ಲಿ
ಹಣ ಕೂಡಿಸುವ ಅಪ್ಪ ಬೇಕಾಗಿದ್ದಾರೆ.
ಕಳ್ಳರಿಗೆ ಸುಳ್ಳರಿಗೆ ಭ್ರಷ್ಟರಿಗೆ ಆದ್ಯತೆ
ಲಂಚಕೊರರಿಗೆ ಭಾರಿ ಬೇಡಿಕೆ .
ಮತ್ತೆ ತಿಂದು ಗುಡಿಸಿ ಸಾರಿಸಿ
ರಂಗವಲ್ಲಿ ಹಾಕಲು ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಅರ್ಜೆಂಟಾಗಿ
ದೋಕಾಯುಕ್ತರು ಬೇಕಾಗಿದ್ದಾರೆ.
ದಕ್ಷ ಪ್ರಾಮಾಣಿಕರಿಗಿಲ್ಲ ಅವಕಾಶ.
–
ಡಾ.ಶಶಿಕಾಂತ.ಪಟ್ಟಣ.ಪೂನಾ