ಕವನ : ಬನ್ನಿರೈ ಬಸವ ಭಕ್ತರೆ

0
150

ಬನ್ನಿರೈ ಬಸವ ಭಕ್ತರೇ

ಬನ್ನಿರೈ ಬಸವ ಭಕ್ತರೇ
ಒಂದಾಗುವ ಬನ್ನಿ
ಸತ್ಯ ಸಮತೆ ಶಾಂತಿ ಪ್ರೀತಿ
ಜಗಕೆ ಸಾರ ಬನ್ನಿ
ಹಸಿದ ಹೊಟ್ಟೆಗೆ
ಅನ್ನವಿಕ್ಕಿ ಬಂಧುವೆನ್ನ ಬನ್ನಿ
ಅರಿವೇ ಗುರು
ಲಿಂಗ ಜಂಗಮ
ದುಡಿಮೆ ಪಾವನ ಎನ್ನಿ
ಬಿಟ್ಟು ಹೋದ ಬಸವ ಭಕ್ತಿ
ಮತ್ತೆ ಮೆರೆಸ ಬನ್ನಿ
ದುಡಿಮೆ ದೇವರು
ಶ್ರಮವೆ ಪೂಜೆ
ಶರಣ ಪಥಕೆ ಬನ್ನಿ
ಬಸವ ಅಲ್ಲಮ ಅಕ್ಕರನ್ನು
ಹೊತ್ತು ನಡೆಯ ಬನ್ನಿ
ವಚನ ಅಸ್ತ್ರ ಗಣಾಚಾರ
ಹೊಸ ಬದುಕ
ಕಟ್ಟ ಬನ್ನಿ
_______________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ