ಕವನ: ಮಿತ್ರ ಬಸಣ್ಣ ಸಸಾಲಟ್ಟಿಗೆ

Must Read

ಮಿತ್ರ ಬಸಣ್ಣ ಸಸಾಲಟ್ಟಿಗೆ

ಹಾರಿತು ಹಕ್ಕಿ ಕಳಚಿ ಎಲ್ಲ ಸಂಬಂಧಗಳನು
ಬಿಡಿಸಿಕೊಂಡು ಬಚ್ಚಿಟ್ಟಿದ್ದ ತನ್ನ ರೆಕ್ಕೆಗಳನು
ಬಾನಿನಾಚೆಯ ದಿಗಂತದ ಮೂಲ ನೆಲೆಯನು
ಸೇರಲು ಸಾಕೇಂದು ಭವಬಂಧದ ಬದುಕನು

ಭವಬಂಧದ ಬದುಕಲಿ ಅವರಿವರು ನಾನು ನೀನು
ತನಗಾಗಿರದ ತನ್ನದಲ್ಲದ ಏನೇನೋ ಕನಸುಗಳನು
ಹೊತ್ತ ಭಾರಕ್ಕೆ ಬಾಗುತ್ತಿದ್ದ ಬೆನ್ನೆಲುಬಿನ ಹುರಿಯನು
ಮರೆತು ನಂಬಿದ್ದು ಮಬ್ಬುಮಂಜಿನ ದಾರಿಯನು

ಬಂದಾಗರಚುವ ಜೀವ ಸೇರುವದು ಸ್ಥಬ್ದತೆಯನು
ಹಂಗು ಹರಿದು ತೊರೆದು ಬಿಟ್ಟೆಲ್ಲ ಕಿರುಚಾಟವನು
ಸುಖದ ದೇಹಕ್ಕನಿವಾರ್ಯ ನರಳಿಸುವ ನೋವನು
ಸಹಿಸುವದು ಬಿಡುವದು ಬಳಲಿ ತಾನಿದ್ದ ತನುವನು

ಗೆಳೆಯಾ
ನೀನಿಂದು ಮುಂದಿರುವಿ ಸೇರಲಾಮನೆಯನು
ತೊರೆದಿರುವಿ ಬೆಸೆದ ನಮ್ಮ ಇಲ್ಲಿಯ ಸಂಬಂಧವನು
ಸೇರುವದಿದೆ ನಾವೆಲ್ಲ ನಾಳೆ ಅದೆ ನಮ್ಮ ಮನೆಯನು
ಆ ಸಂಬಂಧ ಹಂಗಿನದಲ್ಲ ಮತ್ತೆ ನಿನ್ನ ಕೂಡವೆನು

ಜೆ ಪಿ ವಿಜಯಕುಮಾರ

1 COMMENT

  1. ಮಾನ್ಯ ಸಂಪಾದಕರಿಗೆ ಹಾಗು ತಮ್ಮೆಲ್ಲ ಸಿಬ್ಬಂದಿಗೆ ಅನಂತ ನಮನಗಳು ತಮ್ಮ ಪತ್ರಿಕೆಯಲ್ಲಿ ಮಿತ್ರ ಬಸಣ್ಣ ಸಸಾಲಟ್ಟಿಗೆ ಕವನ ಪ್ರತಟಿಸಿದ್ದು ನಾನು ತಮಗೆ ಋುಣಿಯಾಗಿರುವೆ. 🙏🙏🙏

Comments are closed.

Latest News

ಗಂಡನ ಮನೆಯವರ ಕಿರುಕುಳ ; ಗೃಹಿಣಿ ಆತ್ಮಹತ್ಯೆ, ಅನಾಥವಾದ ೧೧ ತಿಂಗಳ ಮಗು

ಬೀದರ - ಗಂಡ, ಅತ್ತೆ, ಮಾವ ಸೇರಿ ಗೃಹಿಣಿಗೆ ಸತತವಾಗಿ ಮಾನಸಿಕ ಕಿರುಕುಳ ನೀಡಿದ ಕಾರಣ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರನಲ್ಲಿ ನಡೆದಿದೆಹೌದು...

More Articles Like This

error: Content is protected !!
Join WhatsApp Group