ಶೃಂಗೇರಿ ಶಾರದೆ
ಶೃಂಗೇರಿ ಶಾರದೆ
ನಾ ಕೈ ಮುಗಿದೆ
ವಿದ್ಯೆ ವಿಶಾರದೆ
ಸಂಗೀತ ನಿನ್ನದೆ
ಬಯಕೆ ಒಂದೇ
ನೀ ಹರಸಂದೆ
ನಿನ್ನ ಕೃಪೆ ಇರದೆ
ವಿದ್ಯೆ ಒಲಿಯುವದೆ
ಸಾಹಿತ್ಯ ಸುಧೆ
ಸಂಗೀತ ಸುರಸುಧೆ
ವಿಜ್ಞಾನ ಜ್ಞಾನಸುಧೆ
ಗಣಿತ ಗುಣಾತೀತ ಸುಧೆ
ನಿನ್ನ ಬಣ್ಣಿಸಲು
ಗುಣ ಗುಣಿಸಲು
ಧನಾತ್ಮಕ ಗುಣವಿರಲು
ಶೂನ್ಯವೆ ಇಲ್ಲ ನಿನ್ನೊಳು
ಬ್ರಹ್ಮಾಂಡ ವಿದ್ಯೆ
ನಿನ್ನೊಳು
ನಾವೆಲ್ಲ ವಿದ್ಯೆ
ಕಲಿಯಲು
ಕೋಟಿ ಕೋಟಿ
ಜನ್ಮಜನ್ಮಾಂತರಕ್ಕೂ
ಕಲಿಯಲು ಆಗ್ಬೇಕು
ಉತ್ಸುಕ ವಿದ್ಯೆ ಕಲಿಯಲು
ಅಗೋಚರ ನಿಗೂಢ
ವಿದ್ಯೆ ಬುದ್ಧಿ ಅವಘಢ
ಮಾಡದು ವಿದ್ವತ್ತು
ವಿದ್ವಾಂಸರ ಸಂಪತ್ತು
ದಡ್ಡ ನಿಗೆ ಸಣ್ಣ ವಿದ್ಯೆ
ಜಾಣನಿಗೆ ದೊಡ್ಡ ವಿದ್ಯೆ
ಕೋಟಿ ವಿದ್ಯೆಯಲ್ಲಿ
ಮೇಲು ಮೇಟಿ ವಿದ್ಯೆ
ಅನ್ನ ನಿನ್ನಿಂದ ಶಾರದೆ
ಕದಿಯದ ಸಂಪತ್ತು
ಬಾರದು ವಿಪತ್ತು
ಗೌರವ ಉತ್ತುಂಗ ಶಿಖರ
ನೀನಿದ್ದರೆ ಮನುಜ ಅಮರ
ಶ್ರೀಮತಿ ಪಾರ್ವತಿ ದೇವಿ. ಎಂ ತುಪ್ಪದ, ಬೆಳಗಾವಿ