ಕಾಯಕ ನಿರತರಾಗೋಣ: ಅನಿಲ ಬೆನಕೆ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಇತ್ತಿಚೆಗೆ ಕಾರ್ತಿಕ ಮಾಸದ ದೀಪೋತ್ಸವ ಹಾಗೂ ಶ್ರೀ ಶಿವಬಸವ ದೇವಸ್ಥಾನದಲ್ಲಿ ಹೊಸದಾಗಿ ಶ್ರೀ ಶಿವಾನುಭವ ಮಂಟಪದ ಉದ್ಘಾಟನೆ ಮತ್ತು ಶ್ರೀ ಶಿವಬಸವ ಅನುಭವ ಮಂಟಪಕ್ಕೆ ದೇಣಿಗೆ ನೀಡಿರುವ ಮಹಾದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಬಸವನ ಕುಡಚಿ ದೇವರಾಜ ಅರಸು ಕಾಲೋನಿಯಲ್ಲಿ ಏರ್ಪಡಿಸಲಾಗಿತ್ತು.

ಸಾನ್ನಿಧ್ಯವನ್ನು ಶ್ರೀಮ ನಿ ಪ್ರ. ಸ್ವ. ಮಹಾಂತದೇವರು ವಿರಕ್ತಮಠ ಶೇಗುಣಸಿ, ಅವರು ವಹಿಸಿದ್ದರು. ಅಧ್ಯಕ್ಷತೆ ಯನ್ನು ಶ್ರೀ ಭೂಷಣ ಹೆಗಡೆ ನಿವೃತ್ತ ಕರ್ನಲ್ ಅವರು ವಹಿಸಿದ್ದರು.
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಇಂದು ವಿಜ್ಞಾನ ಮುಂದುವರೆದರೂ ಭಕ್ತ ಕಾಯಕ ಅಣ್ಣ ಬಸವಣ್ಣನ ಇಚ್ಚೆಯಂತೆ ಕಾಯಕನಿರತರಾಗೋಣ ಎಂದು ಕರೆನೀಡಿದರು.

- Advertisement -

ಬಸವಣ್ಣವರ ವಚನಗಳು ದೇಶ ವಿದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ಅನುವಾದಗೊಂಡಿವೆ. ವಚನ ಅಧ್ಯಯನ ಇಂದಿನ ಮಕ್ಕಳಿಗೆ ಅತಿ ಅವಶ್ಯಕ ಎಂದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಂಗಳಾ ಮೆಟಗುಡ್ಡ, ಕ.ಸಾ.ಪ ಜಿಲ್ಲಾ ಅಧ್ಯಕ್ಷರು ಇವರು ವಹಿಸಿದ್ದರು. ಮಹಿಳೆಯರು ಇವತ್ತಿನ ದಿನ ಪುರುಷರಂತೆ ಸಮಾನತೆ ಕಲ್ಪಿಸಿದರು ಅಣ್ಣ ಬಸವಣ್ಣವರು ಕಾರಣ. ಶರಣ-ಶರಣೆಯರು ಸಂಸ್ಕೃತಿ ಅಳವಡಿಸಿಕೊಂಡು ಸಾಗೋಣ ಎಂದರು.

ಶ್ರೀಮತಿ ರತ್ನ ಪ್ರಭಾ ಬೆಲ್ಲದ ಅಧ್ಯಕ್ಷರು ಅ.ಭಾ.ವಿ. ಮಹಾಸಭಾ ಬೆಳಗಾವಿ. ಇವರು ಹನ್ನೆರಡನೇ ಶತಮಾನದ ಶರಣರ ವಚನಗಳು ಎಲ್ಲರಿಗೆ ಸ್ಪೂರ್ತಿದಾಯಕವಾಗಿವೆ. ಅವುಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದರಂತೆ ಅರಿಯೋಣ ಎಂದರು.

ಎಂ.ವೈ. ಮೆಣಸಿನಕಾಯಿ ಅವರು ಅತಿಥಿಗಳಾಗಿ ಮಾತನಾಡುತ್ತ, ಲಿಂಗಪೂಜೆ ಜಂಗಮ ಸೇವೆಗೂ ಮಿಗಿಲಾಗಿ ಬಡತನಕ್ಕೆ ಮರುಗಿ ಅಜ್ಞಾನಕ್ಕೆ ಕೊರಗಿ ಸಮಾಜ ಸೇವೆಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಭಕ್ತಿ ಪರಮಾತ್ಮ ಒಲಮೆಯನ್ನು ಸಾಧಿಸದೇ ಯಾವ ಮಾನವ ತನ್ನ ಬದುಕಿನಲ್ಲಿ ಸುಖ ಶಾಂತಿ ಸಂತೃಪ್ತಿಗಳನ್ನು ಪಡೆಯಲು ಸಾಧ್ಯವಿಲ್ಲ. ಎಂದರು ಅನುಭವ ಮಂಟಪಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು ಡಾ. ಸತೀಶ ರು. ಚಾವಲಗೇರ, ಗುರುಬಸಯ್ಯ ಮಠದ, ಶೇಖಪ್ಪ ಜಿ ಶಿಗ್ಗಾವಿ, ನೀಲಕಂಠ ಶಿ ಕುಡಚಿಮಠ ಡಾ. ಭೂಪಾಲ ಅಲಕನೂರೆ ಇನ್ನೂ ಅನೇಕರನ್ನು ಸನ್ಮಾನಿಸಲಾಯಿತು.

ನವಜೀವನ ಆಸ್ಪತ್ರೆಯವರು ಎಲ್ಲರಿಗೂ ಗೌರವ ಮೊಮೆಂಟೊ ನೀಡಿದರು. ಶ್ರೀ ಮ.ನಿ.ಪ್ರ. ಮಹಾಂತ ದೇವರು ಧರ್ಮ ಜಾಗೃತಿ ಆಗುವುದರೊಂದಿಗೆ ಬಸವ ತತ್ವ ಅನುಸರಿಸುವ ಎಲ್ಲರೂ ಲಿಂಗ ದಾರಿಗಳಾಗಿ ಶಿವನ ಕೃಪಗೆ ಪಾತ್ರರಾಗಬೇಕು ಎಂದು ವಚನದಲ್ಲಿ ತಿಳಿಸಿದರು. ಶ್ರೀ ವೀರಯ್ಯ ಶಿ. ಮಾಸ್ತಮರ್ಡಿಮಠ, ಬಿ. ಎಂ. ಹವಾಣಿ, ಎಸ್.ಜಿ. ನರಗುಂದ ಜ್ಯೋತಿ ಮಠಮತಿ, ಎಸ್.ಬಿ. ಪಾಟೀಲ, ಎಂ.ಬಿ. ಮಡಿವಾಳರ ಎ ಬಿ ನರಗುಂದ ಶರಣಶರಣೆಯರು ಉಪಸ್ಥಿತರಿದ್ದರು.

ಶ್ರೀ ಮಾತಂಗ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭ ಬಿ.ಬಿ. ಮಠಪತಿ ಸ್ವಾಗತಿಸಿ ವಂದನಾರ್ಪಣೆ ಸಲಿಸಿದರು, ಶ್ರೀ ಸೋಮಶೇಖರ ಖೋದನ್ನವರ ನಿರುಪಿಸಿದರು.

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!