ಸವದತ್ತಿ– ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಗ್ರಾಮದ ಜನತೆಗೆ ಕುಡಿಯುವ ನೀರಿನ ತೊಂದರೆಯಾಗಬಾರದೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬೆಳಗಾವಿ ಉಪ ವಿಭಾಗ.ಸವದತ್ತಿ ಸನ್ 2020-21ನೇ ಸಾಲಿನ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಹಿರೇಕುಂಬಿ ಗ್ರಾಮದ ಜನರ ಪ್ರತಿಯೊಂದು ಮನೆ ಮನೆಗಳಿಗೆ ಪೈಪ್ ಲೈನ್ ಮೂಲಕ ಮೀಟರ ಅಳವಡಿಸಿ ನೀರು ಪೂರೈಸುವ ಕಾಮಗಾರಿಗೆ ಶಾಸಕ ಹಾಗೂ ವಿಧಾನಸಭೆ ಉಪಸಭಾದ್ಯಕ್ಷ ಆನಂದ ಮಾಮನಿಯವರು ಹಿರೇಕುಂಬಿ ಗ್ರಾಮದಲ್ಲಿ 160 ಲಕ್ಷ ರೂಪಾಯಿಗಳ ವೆಚ್ಚದ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಗುರುನಾಥ ಗಂಗಲ. ಗ್ರಾಮದ ಮುಖಂಡರಾದ ಮಕ್ತುಮಸಾಬ ಕೊಣ್ಣೂರ.ಬಸವರಾಜ ಗೊರವನಕೊಳ್ಳ.ಶಿವು ಜಾಡರ.ಮಕ್ತುಮಸಾಬ ಮುಲ್ಲಾನವರ.ಬಿ ಎನ್ ಶ್ರೀಹರಿ.ನಾಗರಾಜ ಹೀರೆಮಠ.ಲೋಕೇಶ ಶಿರಣ್ಣವರ.ನಿಂಗಪ್ಪ ಉಳುವಣ್ಣವರ, ಕಲ್ಮೇಶ ರೂಗಿ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬೆಳಗಾವಿ ಉಪ ವಿಭಾಗ.ಸವದತ್ತಿಯ ಸಹಾಯಕ ಕಾ ನಿ ಅಭಿಯಂತರ ಎಮ್ ಜಿ ರೇವಣಕರ.ಹಾಗೂ ಪಿಡಿಒ. ಹನುಮಂತ ಕೊಂಟಿಕಲ್ಲ ಉಪಸ್ಥಿತರಿದ್ದರು.