ಕೃಷಿ ಬಿಲ್ ವಿರೋಧಿಗಳೂ, ಕತ್ತೆಯ ಮಾಲಿಕನೂ…..!

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಒಂದು ದೊಡ್ಡ ನಗರದಲ್ಲಿ ಎಂಟು ಮಹಡಿಯ ಕಟ್ಟಡವನ್ನು ನಿರ್ಮಿಸಿದರು. ನಿರ್ಮಾಣದ ಸಂದರ್ಭದಲ್ಲಿ ಸದರಿ ಎಂಟು ಮಹಡಿಯ ಕಟ್ಟಡಕ್ಕೆ ಲಿಫ್ಟ್ ವ್ಯವಸ್ಥೆ ಆಗಿನ ಪರಿಸ್ಥಿತಿಗೆ ಅನುಗುಣವಾಗಿ ಮಾಡಿರಲಿಲ್ಲ.

ನೆಲ ಮಹಡಿಯಲ್ಲಿ ಇರುವವರು , ಒಂದು , ಎರಡು , ಮೂರು, ನಾಲ್ಕು ಮಹಡಿಗಳವರೆಗೆ ಹತ್ತುವುದು ಇಳಿಯುವುದನ್ನು ಹಾಗೂ ಹೀಗೂ ತಿಣುಕಾಡುತ್ತ ಅಲ್ಲಿ ವಾಸಿಸುವ ಬಾಡಿಗೆದಾರರು ಅದು ಹೇಗೋ ನಿಭಾಯಿಸುತ್ತಿದ್ದರು.

ಆದರೆ ಐದನೆಯ ಮತ್ತು ಅದರ ಮೇಲ್ಪಟ್ಟು ಇರುವ ಮಹಡಿಗಳ ಮೇಲೆ ವಾಸಿಸುತ್ತಿದ್ದವರಿಗೆ ಅತ್ಯಂತ ತ್ರಾಸದಾಯಕವಾಗಿತ್ತು.
ಆಗ ಆರನೆಯ ಮಹಡಿಯಲ್ಲಿ ವಾಸಿಸುತ್ತಿದ್ದವನೊಬ್ಬ , ತನ್ನ ವ್ಯವಹಾರ ಚತುರತೆಯಿಂದ ಒಂದು ಉಪಾಯ ಕಂಡು ಹಿಡಿದನು. ಆತ ಎರಡು ಕತ್ತೆ ಖರೀದಿಸಿದನು. ಯಾರಿಗೆ ಆ ಎಂಟು ಅಂತಸ್ತಿನ ಕಟ್ಟಡದ ಮೇಲೆ ತಮ್ಮ ತಮ್ಮ ಮಹಡಿಗಳಿಗೆ ಮೆಟ್ಟಿಲುಗಳ ಮೂಲಕ ಸಾಗಲು ಕಷ್ಟಕರವಾಗುತ್ತದೋ ಅಂಥವರು ತನ್ನ ಕತ್ತೆಗಳ ಮೇಲೆ ಕುಳಿತು ತಮ್ಮ ಮಹಡಿಗಳ ಕಡೆಗೆ ಹೋಗಬಹುದು. ಆದರೆ ಹಾಗೆ ಕತ್ತೆಗಳ ಮೇಲೆ ಹೋಗುವವರು ತಲಾ ಇಪ್ಪತ್ತು ರೂಪಾಯಿ ಕೊಡತಕ್ಕದ್ದು ಎಂದು ಕತ್ತೆಯ ಮಾಲಿಕ ಹೇಳಿದನು.

- Advertisement -

ಮೇಲಿನ ಮಹಡಿಗಳ ಕಡೆಗೆ ಹೋಗುವ ಬಹುತೇಕ ಎಲ್ಲರೂ ಕತ್ತೆ ಸಾಕಿದವನಿಗೆ ಹಣ ಕೊಡುತ್ತಾ ಸಾಗುತ್ತಾರೆ. ಇದು ಹೀಗೆಯೇ ಬಹಳಷ್ಟು ವರ್ಷಗಳ ಕಾಲ ನಡೆದಿರುತ್ತದೆ.

ಈಗ ಕಾಲ ಬದಲಾಗಿ, ಸದರಿ ಎಂಟು ಮಹಡಿಗಳ ಕಟ್ಟಡದಲ್ಲಿ ವಾಸಿಸುವವರ ಮೊಮ್ಮಕ್ಕಳು ಸುಜ್ಞಾನಿಗಳಾಗಿರುತ್ತಾರೆ. ಅವರೆಲ್ಲಾ ಸೇರಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಅದೆಂದರೆ , ಸದರಿ ಕಟ್ಟಡದಲ್ಲಿ ಲಿಫ್ಟ್ ಕೂಡ್ರಿಸುವದಕ್ಕೆ ನಿಶ್ಚಯಿಸುತ್ತಾರೆ.
ಅವರು ಲಿಫ್ಟ್ ಕೂಡ್ರಿಸಿದರೆ ತನ್ನ ಆದಾಯ ಕೈ ಬಿಟ್ಟು ಹೋಗುವುದೆಂಬ ಆತಂಕದಿಂದ ಕತ್ತೆಯ ಮಾಲಿಕನ ಮೊಮ್ಮಗ ಸಂಕಟ ಪಡುತ್ತಾನೆ.

ಆತ ಲಿಫ್ಟ್ ಅಳವಡಿಸಲು ತೀವ್ರವಾಗಿ ವಿರೋಧಿಸುತ್ತಾನೆ. ಲಿಫ್ಟ್ ಕೂಡ್ರಿಸಿದರೆ ಕರೆಂಟ್ ಬಿಲ್ ಜಾಸ್ತಿ ಬರುತ್ತದೆಂದು , ಕರೆಂಟ್ ಕೈಕೊಟ್ಟಾಗ ಲಿಫ್ಟ್ ನಲ್ಲಿಯೇ ಬಹಳ ಕಾಲ ಸಿಕ್ಕಿ ಬೀಳುವ ಸಂದರ್ಭವಿರುತ್ತದೆಂದು ಹಾಗೂ ಕೆಲವೊಮ್ಮೆ ಲಿಫ್ಟ್ ಆಕಸ್ಮಿಕವಾಗಿ ಕೆಳಕ್ಕೆ ಅಪ್ಪಳಿಸುವುದುಂಟು ಎಂದೆಲ್ಲಾ ವಾದಿಸಿ, ಯಾವ ಕಾಲಕ್ಕೂ ಲಿಫ್ಟ್ ಅಳವಡಿಸದಂತೆಯೂ , ಒಂದು ವೇಳೆ ಅಳವಡಿಸಿದರೆ ತನ್ನ ಮೇಲೆ ಹಾಗೂ ತನ್ನ ಕತ್ತೆಯ ಮೇಲೆ ಹೌಸಿಂಗ್ ಸೊಸೈಟಿಯವರು ಅನ್ಯಾಯ ಮಾಡುತ್ತಿದ್ದಾರೆಂದು ಮಾನವ ಹಕ್ಕುಗಳ ಆಯೋಗಕ್ಕೆ ಮತ್ತು ಕತ್ತೆಯ ಮೇಲೆ ಅನ್ಯಾಯ ಎಸಗುತ್ತಿದ್ದಾರೆಂದು ಪ್ರಾಣಿದಯಾ ಸಂಘಟನೆಯ ಕಡೆಗೆ ದೂರು ದಾಖಲಿಸುತ್ತೇನೆ ಎಂದು ಹೇಳುತ್ತಾನೆ.

ಇದೀಗ ಬಂದಿರುವ ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸುತ್ತಿರುವವರು ಕೂಡ ಕತ್ತೆಯ ಮಾಲಿಕನಂತೆ ಯೋಚಿಸುತ್ತಿದ್ದಾರೆಂದು ಅನ್ನಿಸುವುದಿಲ್ಲವೆ ?

ನೀಲಕಂಠ ದಾತಾರ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!