spot_img
spot_img

ಕೃಷಿ ಮಸೂದೆಯ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಬೇಕು – ದುಂಡಪ್ಪಾ ಬೆಂಡವಾಡೆ

Must Read

spot_img

ಮೂಡಲಗಿ: ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಮಸೂದೆಗಳ ಬಗ್ಗೆ ಸಾಮಾನ್ಯ ರೈತರಿಗೆ ಅರಿವು ಮೂಡಿಸುವ ಕೆಲಸವನ್ನು ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಮಾಡಬೇಕು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾದ ದುಂಡಪ್ಪಾ ಬೆಂಡವಾಡೆ ಕರೆ ನೀಡಿದರು

ಸೋಮವಾರ (ಮಾ-01) ರಂದು ಕಲ್ಲೋಳಿ ಪಟ್ಟಣದ ಈರಣ್ಣ ಕಡಾಡಿ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಅರಭಾವಿ, ಗೋಕಾಕ ನಗರ ಹಾಗೂ ಗೋಕಾಕ ಗ್ರಾಮಾಂತರ ಮಂಡಲ ಕಾರ್ಯಕಾರಿಣಿ ಸಭೆಯನ್ನು ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೃಷಿ ಕಾಯಿದೆಗಳನ್ನು ತಿದ್ದುಪಡಿ ಮಾಡಿ ರೈತರ ಅಭ್ಯುದಯಕ್ಕೆ ಪೂರಕವಾಗಿದ್ದು ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಕಾಯಿದೆ ಬಗ್ಗೆ ಸಮಗ್ರ ಮಾಹಿತಿ ಪಡೆದು ರೈತರಿಗೆ ಅರಿವು ಮೂಡಿಸುವಂತೆ ತಿಳಿಸಿದರು.
ಬೆಳಗಾವಿ ಗ್ರಾಮಾಂತರ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ ಮೂಡಲಗಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳು ರೈತ ಪರವಾಗಿವೆ. ಮುಂಬರುವ ದಿನಗಳಲ್ಲಿ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಅದರ ಸದುಪಯೋಗ ರೈತಾಪಿ ಜನರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆಯನ್ನು ಅರಭಾವಿ ಮಂಡಲ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣ ದೇವರ ವಹಿಸಿದ್ದರು, ಬಸವರಾಜ ಕಡಾಡಿ, ಬೆಳಗಾವಿ(ಗ್ರಾ) ಪ್ರಧಾನ ಕಾರ್ಯದರ್ಶಿ ಪ್ರದೀಪ ಸಾಣಿಕೊಪ್ಪ, ಗೋಕಾಕ ನಗರ ಅಧ್ಯಕ್ಷ ಸುರೇಶ ಪತ್ತಾರ, ಗೋಕಾಕ ಗ್ರಾಮಾಂತರ ಅಧ್ಯಕ್ಷ ಚನ್ನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಸತ್ಯಪ್ಪ ಕೊಲ್ಲೂರ, ಅಡಿವೆಪ್ಪಾ ಕುರಬೇಟ, ಸೇರಿದಂತೆ ಅನೇಕ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಶ್ರೀಶೈಲ ಕೌಜಲಗಿ ಸ್ವಾಗತಿಸಿ, ಸುರೇಶ ಮಠಪತಿ ಕಾರ್ಯಕ್ರಮ ನಿರೂಪಿಸಿದರು. ಭೀಮಶಿ ಬಂಗಾರಿ ವಂದಿಸಿದರು.

- Advertisement -
- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!