ಬ್ರಂಪ್ಟನ್ (ಕೆನಡಾ) – ಭಾರತವು ಕೆನಡಾ ದೇಶಕ್ಕೆ ಕೊರೋನಾ ಲಸಿಕೆ ಪೂರೈಸಿದ್ದಕ್ಕೆ ಕೃತಜ್ಞತಾಪೂರ್ವಕವಾಗಿ ಅಲ್ಲಿನ ನಾಗರಿಕರು ತಂತಮ್ಮ ಕಾರುಗಳ ಮೇಲೆ ಭಾರತದ ಧ್ವಜ ಹೊತ್ತು ರ್ಯಾಲಿ ನಡೆಸಿರುವ ವಿಡಿಯೋ ಒಂದು ವೈರಲ್ ಆಗಿದೆ.
ಭಾರತ ಸ್ವತಂತ್ರಗೊಂಡು ಎಪ್ಪತ್ತು ವರ್ಷಗಳಲ್ಲಿ ವಿದೇಶದಲ್ಲಿ ತ್ರಿವರ್ಣ ಧ್ವಜಕ್ಕೆ ಇಂಥ ಒಂದು ಸಮ್ಮಾನ ಸಿಕ್ಕಿದ್ದು ಮೊದಲ ಬಾರಿ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಾರತದ ಹೆಗ್ಗಳಿಕೆ ಜಾಗತಿಕವಾಗಿ ಹೆಚ್ಚಿದ್ದು ವಿಶ್ವದ ಉನ್ನತ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಮಹಾಮಾರಿ ಕೊರೋನಾ ವಿಶ್ವಕ್ಕೆ ಅಪ್ಪಳಿಸಿದ ನಂತರ ಲಾಕ್ ಡೌನ್ ಎಂಬ ಹೊಸ ತಂತ್ರ ಪ್ರಯೋಗಿಸಿದ ಮೊದಲ ದೇಶವಾಗಿ ಭಾರತದಲ್ಲಿ ಕೊರೋನಾ ಸಾವಿನ ಸಂಖ್ಯೆ ಎಲ್ಲ ದೇಶಗಳಿಗಿಂತಲೂ ನಿಯಂತ್ರದಲ್ಲಿತ್ತು. ಲಾಕ್ ಡೌನ್ ಕಾರಣದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆದರೂ ಬೆದರದೆ ಮೋದಿಯವರ ಆತ್ಮ ನಿರ್ಭರ ಭಾರತದ ಕಲ್ಪನೆ ಅಡಿಯಲ್ಲಿ ಸ್ವದೇಶೀಯವಾಗಿ ಉತ್ಪಾದನೆ ಮಾಡಿದ ಕೊರೋನಾ ಲಸಿಕೆ ಈಗ ವಿಶ್ವಾದ್ಯಂತ ಪ್ರಸಿದ್ಧವಾಗಿದೆ. ಲಸಿಕೆಗಾಗಿ ಭಾರತದ ಕಡೆ ಕೆಲವು ದೇಶಗಳು ಮುಖ ಮಾಡಿದ್ದು ಲಸಿಕೆ ಪೂರೈಸಿದ ಭಾರತಕ್ಕೆ ಹಲವು ರೀತಿಯಲ್ಲಿ ಕೃತಜ್ಞತೆ ಸಲ್ಲಿಸುತ್ತಿವೆ.
ಭಾರತ ಕೆನಡಾ ದೇಶಕ್ಕೆ ಲಸಿಕೆ ಪೂರೈಸಿದ್ದು ಅಲ್ಲಿನ ನಾಗರಿಕರು ತಮ್ಮ ಕಾರುಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ರ್ಯಾಲಿ ಮಾಡಿದರು.