ಇಂಗ್ಲೆಂಡಿನಲ್ಲಿ ‘ಅನಿಯಂತ್ರಿತವಾಗಿ’ ಹರಡುತ್ತಿರುವ ಕೊರೋನಾ ವೈರಸ್ ನ ರೂಪಾಂತರಿತ ತಳಿಯನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಚರ್ಚಿಸಲು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ನೇತೃತ್ವದಲ್ಲಿ ಇಂದು ಜಂಟಿ ನಿಗಾ ಮಂಡಳಿಯ ಮಹತ್ವದ ಸಭೆಯೊಂದನ್ನು ಕರೆಯಲಾಗಿತ್ತು ಎಂದು ಹಿಂದುಸ್ತಾನ್ ಟೈಂಸ್ ವರದಿ ಮಾಡಿದೆ.
ರೂಪಾಂತರಿತ ಕೊರೋನಾ ತಳಿಯು ಸುಮಾರು ಶೇ.೭೦ ರಷ್ಟು ಸಾಂಕ್ರಾಮಿಕವಾಗಿದೆ ಎಂದು ಹೇಳಿರುವ ಲಂಡನ್ ನ ಮುಖ್ಯ ಆರೋಗ್ಯಾಧಿಕಾರಿ ಕ್ರಿಸ್ ವ್ಹಿಟ್ಟಿಯವರ ಹೇಳಿಕೆಯ ನಂತರ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ದೇಶದಲ್ಲಿ ನಿಯಂತ್ರಣ ಕ್ರಮಗಳನ್ನು ಹೇರುವ ಬಗ್ಗೆ ಯೋಚನೆ ಮಾಡುವಾಗಲೇ ಕೇಂದ್ರ ಆರೋಗ್ಯ ಸಚಿವರು ಈ ಮಹತ್ವದ ಸಭೆ ಕರೆಯಲಾಗಿದೆ.
ಇತ್ತೀಚೆಗೆ ಯುರೋಪ್ ಹಾಗೂ ಇತರೆ ದೇಶಗಳು ಬ್ರಿಟನ್ನಿಗೆ ವಿಮಾನ ಹಾರಾಟವನ್ನು ನಿಷೇಧ ಹೇರಿರುವುದನ್ನು ಇಲ್ಲಿ ಸ್ಮರಿಸಬಹುದು.