ಬೀದರ – ಬೀದರ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಫೆ.8ರಂದು ಕೋವಿಶಿಲ್ಡ್ ಲಸಿಕೆ ಪಡೆದುಕೊಂಡರು.
ನಗರದ ಮಂಗಲಪೇಟದಲ್ಲಿರುವ ಪೊಲೀಸ್ ಆರೋಗ್ಯ ಕೇಂದ್ರಕ್ಕೆ ಬೆಳಗ್ಗೆ ಖುದ್ದು ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ ಅವರು ಕೋವಿಶಿಲ್ಡ್ ನ ಮೊದಲನೇ ಲಸಿಕೆಯನ್ನು ನೀಡಿದರು.
ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕೊವಿಶಿಲ್ಡ್ ಲಸಿಕೆ ಬಗ್ಗೆ ಯಾವುದೇ ಭಯಭೀತಿಗೆ ಅವಶ್ಯಕತೆ ಇರುವುದಿಲ್ಲ. ಅತ್ಯಂತ ಸುರಕ್ಷಿತವಾದ ಕೋವಿಶಿಲ್ಡ್ ಲಸಿಕೆಯನ್ನು ಈಗಾಗಲೇ ಗುರುತಿಸಿದ, ಮಂಚೂಣಿಯಲ್ಲಿರುವ ಇಲಾಖೆಗಳ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯು ತಪ್ಪದೇ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಡಾ.ವಿ.ಜಿ.ರೆಡ್ಡಿ ಅವರು, ಮೊದಲ ಹಂತದಲ್ಲಿ ಗುರುತಿಸಿದ ಇಲಾಖೆಗಳಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೋವಿಶಿಲ್ಡ್ ಲಸಿಕೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಫೆ.8ರಂದು ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.
ಲಸಿಕೆ ನೀಡುವ ಮೊದಲು ಆರೋಗ್ಯ ಇಲಾಖೆಯ ಸಿಬ್ಬಂದಿಯು ಮಾನ್ಯ ಜಿಲ್ಲಾಧಿಕಾರಿಗಳಿಂದ ಅವರ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ ಸಂಖ್ಯೆ ಸೇರಿದಂತೆ ಅಗತ್ಯ ವಿವರ ಪಡೆದುಕೊಂಡರು.
ವರದಿ: ನಂದಕುಮಾರ ಕರಂಜೆ
Times of ಕರ್ನಾಟಕ,ಬೀದರ