ಕೌಜಲಗಿ : ‘ಹರ್ ಘರ್ ಜಲ್’ ಕಾಮಗಾರಿಗೆ ಚಾಲನೆ ನೀಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

ಗೋಕಾಕ : ಪೈಪಲೈನ್ ಮೂಲಕ 1242 ಮನೆಗಳಿಗೆ ಕುಡಿಯುವ ನೀರಿನ ಸೌಕರ್ಯ ತಲುಪಲಿದ್ದು, ಈ ಯೋಜನೆಗಾಗಿ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇತ್ತೀಚೆಗೆ ತಾಲೂಕಿನ ಕೌಜಲಗಿಯಲ್ಲಿ ಜರುಗಿದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಮಾತನಾಡಿದ ಅವರು, ಮನೆ ಮನೆಗೆ ಗಂಗೆ ಎಂಬ ವಿನೂತನ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ಇದನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು.

ಈಗಾಗಲೇ ಜಲಜೀವನ ಮಿಷನ್ ಯೋಜನೆಯಡಿ ಪಟಗುಂದಿ, ಧರ್ಮಟ್ಟಿ, ಗುಜನಟ್ಟಿ, ತುಕ್ಕಾನಟ್ಟಿ, ರಾಜಾಪೂರ, ದಂಡಾಪೂರ, ದುರದುಂಡಿ, ಬಡಿಗವಾಡ, ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಕಾಮಗಾರಿಗಳು ಚಾಲನೆಯಲ್ಲಿವೆ. ಕೌಜಲಗಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿಯೂ ಸಹ ಈ ಕಾಮಗಾರಿಗೆ ಕೋಟಿ ರೂ. ಅನುದಾನ ಮಂಜೂರಾಗಿದ್ದು, 3500 ಮೀಟರ್ ಪೈಪಲೈನ್ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.

ಗುದ್ದಲಿ ಪೂಜೆ : ಎಸ್‍ಸಿಪಿ ಟಿಎಸ್‍ಪಿ ಯೋಜನೆಯಡಿ 20 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಎಸ್‍ಸಿಪಿ ಟಿಎಸ್‍ಪಿ ಯೋಜನೆಯಡಿ ಅರಭಾವಿ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆದಿವೆ. ಇದರಲ್ಲಿ ಒಳಚರಂಡಿ ನಿರ್ಮಾಣ, ಸಿಸಿ ರಸ್ತೆ, ಸಮುದಾಯ ಭವನಗಳು ಸೇರಿದಂತೆ ಹಲವು ಕಾಮಗಾರಿಗಳು ನಡೆದಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯರಾದ ಶಾಂತಪ್ಪ ಹಿರೇಮೇತ್ರಿ, ಲಕ್ಷ್ಮಣ ಮಸಗುಪ್ಪಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಪ್ರಭಾಶುಗರ ನಿರ್ದೇಶಕ ಮಹಾದೇವಪ್ಪ ಭೋವಿ, ಯುವ ಮುಖಂಡ ರವಿ ಪರುಶೆಟ್ಟಿ, ಜಿಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಾನಂದ ಲೋಕನ್ನವರ, ಗ್ರಾಪಂ ಮಾಜಿ ಅಧ್ಯಕ್ಷರಾದ ಮಕ್ತುಮಸಾಬ ಖಾಜಿ, ಹೊಳೆಪ್ಪ ಲೋಕನ್ನವರ, ಅಶೋಕ ಉದ್ದಪ್ಪನವರ, ರಾಯಪ್ಪ ಬಳೋಲದಾರ, ಪಿಕೆಪಿಎಸ್ ಅಧ್ಯಕ್ಷ ಜಿ.ಎಸ್. ಲೋಕನ್ನವರ, ವೆಂಕಟೇಶ ದಳವಾಯಿ, ಫಕೀರಪ್ಪ ಪೂಜನ್ನವರ, ಹಾಸೀಂಸಾಬ ನಗಾರ್ಚಿ, ಶಂಕರ ಜೋತೆನ್ನವರ, ಮಹಾದೇವ ಬುದ್ನಿ, ರಾಮಪ್ಪ ಈಟಿ, ಗ್ರಾಕುನೀಸ ಮತ್ತು ನೈ ಇಲಾಖೆಯ ಎಇಇ ಇಮಾಮಸಾಬ ದಫೆದಾರ, ಪಿಡಿಓ, ಗ್ರಾಪಂ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!