ಸವದತ್ತಿ: ಕ್ರೀಡೆಯೆಂಬುದು ಸಂಘಟಿತ,ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ ಅಲ್ಲದೇ ಇದಕ್ಕೆ ಬದ್ಧತೆ ಮತ್ತು ನ್ಯಾಯದ ಆಟದ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಿರೇಮಠರು ತಮ್ಮ ದೈಹಿಕ ಮತ್ತು ಸ್ಪಧಾತ್ಮಕ ಕುಶಲತೆಯಿಂದ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಜಿಲ್ಲೆಗೆ ಪ್ರಥಮ ಬಂದು ರಾಜ್ಯಕ್ಕೆ ಆಯ್ಕೆಯಾಗಿರುವುದು ಅಭಿನಂದನಾರ್ಹ.ಇವರು ರಾಜ್ಯ ಮಟ್ಟದಲ್ಲೂ ಕೂಡ ಯಶಸ್ವಿಯಾಗಲಿ ಎಂದು ಅರ್ಜುನ ಕಂಬೋಗಿ ಹಾರೈಸಿದರು.
ಅವರು ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿರುವ ವೀರಯ್ಯ ಹಿರೇಮಠ ಇತ್ತೀಚೆಗೆ ಬೆಳಗಾವಿಯಲ್ಲಿ ಜರುಗಿದ ರಾಜ್ಯ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾದ ಪ್ರಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ಬಳಿಗಾರ ದೈಹಿಕ ಶಿಕ್ಷಣಾಧಿಕಾರಿ ವೈ.ಎಂ.ಶಿಂಧೆ.ಶಿಕ್ಷಣ ಸಂಯೋಜಕರಾದ ಎಂ.ಡಿ.ಹುದ್ದಾರ.ಕೆ.ಕೆ.ಢಂಗಿ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಫ್.ಜಿ.ನವಲಗುಂದ.ಎಚ್.ಆರ್.ಪೆಟ್ಲೂರ,
ಸಂಪನ್ಮೂಲ ವ್ಯಕ್ತಿಗಳಾದ ರಾಜು ಭಜಂತ್ರಿ.ಬಿಐಇಆರ್ಟಿಗಳಾದ ಸಿ.ವ್ಹಿ,ಬಾರ್ಕಿ. ಎಸ್.ಬಿ.ಬೆಟ್ಟದ.ಎಂ.ಎಂ.ಸಂಗಮ.ವೈ.ಬಿ.ಕಡಕೋಳ ಗಣಕ ಯಂತ್ರ ನಿರ್ವಾಹಕ ವಿನೋದ ಹೊಂಗಲ. ಮಂಜುನಾಥ ಮಿರಜಕರ ಮೊದಲಾದವರು ಉಪಸ್ಥಿತರಿದ್ದರು.
ಇವರ ಈ ಆಯ್ಕೆಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಎಸ್.ವ್ಹಿ.ಬೆಳವಡಿ.ಹಾಗೂ ಸರ್ವಸದಸ್ಯರು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಎಫ್.ಯು.ಪೂಜೇರ.ಬಿ.ಆರ್.ಸಿ.ಲೆಕ್ಕ ಪರಿಶೋಧಕರಾದ ಜೆ.ಎಸ್.ಶಿದ್ಲಿಂಗನವರ.ಈರಪ್ಪ ಅವರಾದ.ಮಲ್ಲಿಕಾರ್ಜುನ ಹೂಲಿ ಮೊದಲಾದವರು ಅಭಿನಂದಿಸಿದ್ದಾರೆ.