ಗುರ್ಚಿ ಹಾಡು

0
1378

ಇದೊಂದು ಜಾನಪದ ಹಾಡು.ಮಳೆ ಬಾರದೇ ಇದ್ದಾಗ ತಲೆ ಮೇಲೆ ಗುರ್ಚಿಯನ್ನಿಟ್ಟುಕೊಂಡು ಮನೆ ಮನೆ ಅಡ್ಡಾಡಿ ನೀರು ಹುಯ್ದುಕೊಂಡು ಮಳೆಗಾಗಿ ಬೇಡುವ ಹಾಡು. ಸಣ್ಷವರಿದ್ದಾಗ ಈ ಹಾಡು ಕೇಳಿ ಮಜಾ ಪಡೆಯದವರೇ ಇಲ್ಲ. ಈಗ ಅದನ್ನು ಭ್ರಷ್ಟಾಚಾರಿ ರಾಜಕಾರಣಿಗೆ ಹೋಲಿಸಿ ಬರೆಯಲಾಗಿದೆ.


ಭ್ರಷ್ಟಾಚಾರಿ

ಬುಚಿ೯ ಬುಚಿ೯
ಎಲ್ಲಾಡಿ ಬಂದಿ

ಖುಚಿ೯ಗಾಗಿ
ಸುತ್ತಾಡಿ ಬಂದಿ

ಹಳ್ಳಾ ಕೊಳ್ಳಾ
ಮಾರಿ ತಿಂದಿ

ಮೆಂಬರ ಆಗಿ
ಮೆರದಾಡಿ ಬಂದಿ.

ಹುಯ್ಯೋ ಹುಯ್ಯೋ
ಮಳೆರಾಯ ಅಂದಿ.

ರೊಕ್ಕದ ಮಳೆಯು
ಬರಲಿ ಅಂದಿ.

ಗಟಾರ ಮಾಡಿಸುವ
ರೊಕ್ಕಾ ಏಲ್ಲಾ
ಬಳಿದು ತಿಂದಿ.

ಬುಚಿ೯ ಬಚಿ೯
ಎಲ್ಲಾಡಿ ಬಂದಿ

ಮೆಂಬರ ಆಗಲು
ಸುತ್ತಾಡಿ ಬಂದಿ.

ಕೊನೆಗೂ ನೀನು
ಆರಿಸಿ ಬಂದಿ.

ಮುನಸಿಪಾಲ್ಟಿ
ಮೆಂಬರ ಆದಿ

ಹಂದಿ ಹಂಗ
ರೊಕ್ಕಾ ತಿಂದಿ

ಮಂದಿ ಮುಂದ
ಸಾಚಾ ಅಂದಿ.

ಕಮ್ಮಿಷನ ದಂಧೆ
ನಂದು ಅಂದಿ.

ಬುಚಿ೯ ಬುಚಿ೯
ಎಲ್ಲಾಡಿ ಬಂದಿ.

ಖುಚಿ೯ಗಾಗಿ
ಸುತ್ತಾಡಿ ಬಂದಿ

ರೊಕ್ಕಾ ಮಾಡೋದು
ದಂಧೆ ಅಂದಿ.

ಕವಿ.ಡಾ.ಎಚ್.ಆರ್.ಜಗದಾರ.