ಗೋಹತ್ಯೆ ನಿಷೇಧ ನಿಜವಾಗಿಯೂ ಸಾಧ್ಯವೇ ?

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

(ಹೀಗೊಂದು ಅಭಿಪ್ರಾಯ)

ಧರ್ಮದ ಪ್ರಕಾರ ಸಂಪೂರ್ಣ ಗೋಹತ್ಯೆ ನಿಷೇಧವಾಗಬೇಕೆಂದರೆ ಅದಕ್ಕೆ ವಯಸ್ಸಿನ ಮಿತಿ ಇರಬಾರದು ಆದರೆ ಸರಕಾರ ಕಾರ್ಯಕರ್ತರ ಕಮೆಂಟ್ ದಾಳಿಗಳಿಗೆ ಬೇಸತ್ತು ಮೂಗಿಗೆ ತುಪ್ಪ ಸವರುವ ಕಾನೂನು ತಂದಿತು .ಕೆಲವರು ಉಘೆ ಉಘೇ ಅನ್ನುತ್ತಿದ್ದಾರೆ ಕೂಡಾ, ಸರಕಾರವೂ ಬೇರೇನು ಮಾಡೊಕೆ ಸಾಧ್ಯ ? ಯಾಕೆಂದರೆ ಸರಕಾರಕ್ಕೆ ವಾಸ್ತವದ ಅರಿವಿದೆ!

ಸರಕಾರದ ಮುಂದಿನ ಕಾನೂನಿನ ಪ್ರಕಾರ ಕೊಟ್ಟವನೂ ತೆಗೆದುಕೊಂಡವನೂ ಜೊತೆಗೆ ಸಾಗಿಸಿದವನೂ ತಪ್ಪಿತಸ್ಥ .ಅದು ಯಾವಾಗ ಅಂದರೆ 13 ವರ್ಷದ ಒಳಗಿನ ಹಸುಗಳ ಕುರಿತಾಗಿ ಮಾತ್ರ! 13 ಕಳೆದ ಮೇಲೆ ಇಲಾಖೆಯ ಅನುಮತಿ ಬೇಕು .ಆ ಅನುಮತಿ ಕೊಡುವವ ಡೇತ್ ಆಫ್ ಬರ್ತ್ ನೋಡಿ ಅನುಮತಿಸುವುದಲ್ಲ ಬದಲಿಗೆ ಹಲ್ಲಿನ ಆಧಾರದಲ್ಲಿ , ಕಣ್ಣಳತೆಯಲ್ಲಿ ದನದ ವಯಸ್ಸನ್ನು ಅಳೆಯಬಹುದು ಅಥವಾ ಗಾಂಧೀಜಿ ಚಿತ್ರವಿರುವ ಕಾಗದ ಆಧಾರದಲ್ಲಿ ಅಳೆಯಬಹುದು. ಆಗ 8 ವರ್ಷದ ಹಸುವು ಕೂಡಾ 13 ಆಗಿ ಬೆಳೆಯಬಹುದು .ಅದಕ್ಕೇ ನಾನು ಅಂದಿದ್ದು “ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತೆ ಈ ಜಗದಲಿ ಕಾಣೋ13 ವರ್ಷದ ವಯಸ್ಸಿನ ಸರ್ಟಿಫಿಕೇಟ್ ಹಸುವಿಗೆ ಸಿಗದೇನೋ ?” ಅಂತಾ .

ನಮ್ಮಂತಹ ಎರಡು ಮೂರು ಎಕರೆ ಜಾಗ ಇರುವ ಸಣ್ಣರೈತರ ಮನೆಯವರು ,ಒಂದೆರಡು ದನವನ್ನು ಮುದುಕಿಯಾಗುವ ವರೆಗೂ ಸಾಕಬಹುದು .ಯಾಕೆಂದರೆ ನಮಗೆ ಅದರ ಗೊಬ್ಬರ ಕೃಷಿಗೆ ಸಹಕಾರಿ ಆದರೆ ಹೈನು ಉದ್ಯಮದಲ್ಲಿ ತೊಡಗಿಸಿಕೊಂಡವನಿಗೆ ಇದು ಸಾಧ್ಯವೇ ? ಆತ ಎಷ್ಟು ವರ್ಷ ಸಾಕಬಹುದು ? ವೃದ್ಧ ದನಗಳ ಕುರಿತಾಗಿ ಭಾವನಾತ್ಮಕವಾಗಿ ಮಾತನಾಡಬಹುದೇ ಹೊರತು ವಾಸ್ತವ ಬಹಳ ಕಷ್ಟವಿದೆ ಇದು ಅನುಭವದ ಮಾತು, ಒಂದೋ ಸರಕಾರ ಸುಸಜ್ಜಿತ ಗೋ ಶಾಲೆಗಳನ್ನು ಸ್ಥಾಪಿಸಿ ಅಲ್ಲಿ ವೃದ್ಧ ದನಗಳನ್ನು ಸಾಕುವ ವ್ಯವಸ್ಥೆ ಮಾಡಿ ಎಲ್ಲ ರೀತಿಯ ವಯಸ್ಸಿನ ಗೋಹತ್ಯೆ ನಿಷೇಧ ಮಾಡಿದರೆ ಮಾತ್ರ ಧರ್ಮಪಾಲನೆ ಮಾಡಬಹುದು .

- Advertisement -

ಈಗ ಪಾಸಾದ ಮಸೂದೆಯಿಂದ ಏನು ತಡೆಯಬಹುದು ಅಂದರೆ, ಕರುಗಳ ಅಮಾನವೀಯ ಸಾಗಾಣಿಕೆ ಅಥವಾ ಕಳ್ಳ ಸಾಗಾಣಿಕೆ ತಡೆಯಬಹುದು ಆದರೆ ನಮ್ಮ ವ್ಯವಸ್ಥೆ ಅಷ್ಟೊಂದು ಪ್ರಾಮಾಣಿಕವಾಗಿ ಕೆಲಸ ಮಾಡಬಲ್ಲುದೇ ?ನಮ್ಮೂರಲ್ಲಂತೂ ಜನಪ್ರತಿನಿಧಿ ಇಂತಹವರನ್ನು ಬಿಡಿಸಲು ತುದಿಗಾಲಲ್ಲಿ ನಿಂತಿರುತ್ತಾರೆ.ಒಂದು ವೇಳೆ ಈಗ ಆದರೂ ಮುಂದೊಂದು ದಿನ ಸರಕಾರ ಬದಲಾದರೆ ಕಾನೂನಿನ ಕಥೆ ಏನು ? ಸುಮ್ಮನೆ ಭಾವೋದ್ವೇಗಕ್ಕೆ ಒಳಗಾಗಬೇಡಿ ಸಾಧ್ಯವಾದರೆ ಮನೆಯಲ್ಲಿ ಒಂದು ದನ ಸಾಕಿ ಅದನ್ನು ತಪ್ಪಿಯೂ ಕಟುಕನಿಗೆ ಮಾರುವುದು ಬೇಡ ,ಹಿಂದಿನ ಕಾಲದ ಕಟುಕರೂ ಸಹಿತ ಹಾಲು ಕೊಡುವ ದನದ ಹತ್ಯೆ ಮಾಡುತ್ತಿರಲಿಲ್ಲ ಈಗಿನ ಕಟುಕರಿಗೆ ಆ ಕರುಣೆಯೂ ಇಲ್ಲ .

ಎಲ್ಲಿಯವರೆಗೆ ಹಿಂದೂಗಳ ಧಾರ್ಮಿಕಭಾವನೆ ಗೌರವಿಸಬೇಕು ಎಂಬ ಪ್ರಜ್ಞೆ ಸರಕಾರ ಹಾಗೂ ಗೋಮಾಂಸ ಭಕ್ಷಕರಿಗೆ ಬರುವುದಿಲ್ಲವೋ ಅಲ್ಲಿಯವರೆಗೆ ಯಾರು ಎಷ್ಟೇ ಪ್ರಬಲ ಕಾನೂನು ತಂದರೂ ಗೋಹತ್ಯೆ ನಿಷೇಧ ಅಸಾಧ್ಯ .

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!