ಗೋ ಹತ್ಯೆ ಮತ್ತು ನಾನು

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ಮತ್ತೊಂದು ಕೂಗು.ಹಾಗಾದರೆ ಗೋ ಹತ್ಯೆ ಮಾಡಲು ನನಗೇನು ಅಧಿಕಾರ ಇದೆ.ಒಂದು ಕ್ಷಣ ಯೋಚಿಸಿ. ಗೋವನ್ನು ಹತ್ಯೆ ಮಾಡಬೇಕೆ?ಅಥವಾ ಬೇಡವೆ ಎಂದು. ಗೋ ಭೂಲೋಕಕ್ಕೆ ಕಾಮಧೇನು.

ಅನಾದಿ ಕಾಲದಿಂದಲೂ ಮಾನವನಿಗೂ ಗೋವಿಗೂ ಅವಿನಾಭಾವ ಸಂಬಂಧ ಇದೆ. ವೇದ ಕಾಲದಲ್ಲಿ ಋಷಿಮುನಿಗಳ ಹೋಮ ಹವನ ಯಾಗ ಯಜ್ಞಗಳಿಗೆ ಪ್ರಾಮುಖ್ಯವಾಗಿ ಬೇಕಾದ ಗೋ ಮೂತ್ರ , ಗೋ ಮಯ, ಹಾಲು ತುಪ್ಪ, ಇತ್ಯಾದಿಗಳಿಗಾಗಿ ಅವರು ತಮ್ಮ ಆಶ್ರಮಗಳಲ್ಲಿ ಗೋವುಗಳನ್ನು ಸಾಕುತ್ತಿದ್ದರು.

ಬೆಳಗ್ಗಿನ ಜಾವವೇ ಎದ್ದು ಹಸುವನ್ನು ಮೀಯಿಸಿ ಹಣೆಗೆ ತಿಲಕವಿಟ್ಟು ಪೂಜಿಸಿ ನಂತರವೇ ಹಾಲನ್ನು ಹಿಂಡುತ್ತಿದ್ದರು. ದನಗಳನ್ನೂ ಮಕ್ಕಳಂತೆಯೇ ಪ್ರೀತಿಸಿ ಪೋಷಿಸುತ್ತಿದ್ದರು. ಹಾಲನ್ನು ಕಾಯಿಸಿ ದೇವರಿಗರ್ಪಿಸಿಯೇ ತಾವು ಉಪಯೋಗಿಸುತ್ತಿದ್ದರು. ಹಸುವಿಗೆ ಗೋಗ್ರಾಸ ನೀಡಿದ ಬಳಿಕವೇ ತಾವು ಭೋಜನ ಸೇವಿಸುತ್ತಿದ್ದರು. ಕೆಲವು ಮನೆತನಗಳಲ್ಲಿ ಇಂದಿಗೂ ಗೋಗ್ರಾಸ ನೀಡದೆ ಊಟ ಮಾಡುವ ಪದ್ಧತಿ ಇಲ್ಲ!

- Advertisement -

ಹಸುವನ್ನು ಕಾಮಧೇನು, ಗೋವು ಸೇರಿದಂತೆ ಇನ್ನು ಸಾಕಷ್ಟು ಹೆಸರುಗಳಿಂದ ಕರೆಯಲಾಗುತ್ತದೆ. ಹಸುಗಳನ್ನು ಪೂಜಿಸುವುದರಿಂದ ವಾಸ್ತು ಸಮಸ್ಯೆಗಳು ಬಹುಬೇಗ ಬಗೆಹರಿಯುತ್ತದೆ ಎಂದು ಹೇಳಲಾಗಿದೆ. ಆದರೆ ಗೋವನ್ನು ಪೂಜಿಸಲು ಅದಕ್ಕೆ ಆದ ಸಮಯ, ಸಂದರ್ಭಗಳಿವೆ.

ಹಿಂದೂ ಧರ್ಮದಲ್ಲಿ ಹಸುವಿಗೆ ವಿಶೇಷ ಸ್ಥಾನ, ಮಾನ, ಗೌರವವಿದೆ. ಹಸುವನ್ನು ಪೂಜನೀಯ ಭಾವನೆಯಿಂದ ಕಾಣಲಾಗುತ್ತದೆ. ಅಷ್ಟು ಮಾತ್ರವಲ್ಲ ಹಿಂದೂ ಧರ್ಮಗ್ರಂಥಗಳಲ್ಲಿ ಹಸುವಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಹಸುವಿನಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿದ್ದಾರೆಂದು ನಂಬಲಾಗುತ್ತದೆ.

ಪುರಾಣ ಮತ್ತು ಉಪನಿಷತ್ತುಗಳಲ್ಲೂ ಗೋಮಾತೆಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ನಾವು ಹೆಚ್ಚಿನ ದೇವಾಲಯಗಳ ವಾಸ್ತುಶಿಲ್ಪದಲ್ಲಿ ಹಸುವಿನ ಚಿತ್ರವನ್ನು ನೋಡಬಹುದು. ಗೋಮಾತೆಯನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದೂ ಕೂಡ ನಂಬಲಾಗುತ್ತದೆ.

ಮನೆಯಲ್ಲಿ ಹಸುವನ್ನು ಸಾಕುವುದರಿಂದ ವಾಸ್ತು ದೋಷವು ನಿವಾರಣೆಯಾಗುತ್ತದೆ. ಆದರೆ ಮನೆಯಲ್ಲಿರುವ ಹಸುವಿಗೆ ಉತ್ತಮ ಆಹಾರವನ್ನೇ ನೀಡಿ ಅದನ್ನು ಆರೋಗ್ಯವಂತವಾಗಿರುವಂತೆ ನೋಡಿಕೊಳ್ಳಬೇಕು.

ಯಾವುದೇ ಆಹಾರ ಪದಾರ್ಥವನ್ನು ಅಥವಾ ತರಕಾರಿಗಳನ್ನು ಬೇಯಿಸಿ ಅದರ ಬಿಸಿ ಆರಿದ ನಂತರ ಮನೆಯಲ್ಲಿರುವ ಹಸುವಿಗೆ ಅಥವಾ ಬೀದಿಯಲ್ಲಿರುವ ಯಾವುದಾದರೂ ಹಸುವಿಗೆ ನೀಡಬೇಕು. ಈ ರೀತಿಯಾಗಿ ನಾವು ಆಹಾರವನ್ನು ಸೇವಿಸುವ ಮೊದಲು ಹಸುಗಳಿಗೆ ಆಹಾರ ನೀಡಿ ನಂತರ ನಾವು ಸೇವಿಸಿದರೆ ವಾಸ್ತು ದೋಷವು ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ.
ಹಸುವಿನ ಹಾಲನ್ನು ಏನು ಮಾಡಬೇಕು ಗೊತ್ತಾ..?:

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವುದಾದರೂ ಶುಭ ಕಾರ್ಯವಿದ್ದರೆ ಅಥವ ಪೂಜೆ ಗಳಿದ್ದರೆ ಆ ಸಂದರ್ಭದಲ್ಲಿ ಹಸುವಿನ ಹಾಲಿನಿಂದ ಪಂಚಾಮೃತವನ್ನು ತಯಾರಿಸಬೇಕು. ಈ ರೀತಿ ಮಾಡುವುದರಿಂದ ಕೂಡ ವಾಸ್ತು ಸಮಸ್ಯೆಗಳು ಬಗೆಹರಿಯುತ್ತದೆ ಎಂದು ನಂಬಲಾಗಿದೆ.

ಒಂದು ವೇಳೆ ಹಸು ನಿಮ್ಮ ಮನೆಯಲ್ಲಿದ್ದರೆ ಮನೆಗೆ ತಾಗುವಂತೆ ಅಂದರೆ ಮನೆಯ ಗೋಡೆಗೆ ಸರಿಯಾಗಿ ಹಸುವಿನ ಕೋಣೆಯನ್ನು ತಯಾರಿಸಬೇಕು. ಇದರಿಂದ ಮನೆಯ ಪಕ್ಕದಲ್ಲೇ ಹಸುವಿರುತ್ತದೆ ಹಾಗಾಗಿ ಮನೆಯ ಕುಟುಂಬದವರಿಗೆ ಉಂಟಾಗಬಹುದಾದ ಎಲ್ಲಾ ಅಸ್ವಸ್ಥತೆಗಳನ್ನು ಕೂಡ ನಿವಾರಿಸುತ್ತದೆ. ಮನೆಯ ಹತ್ತಿರವೇ ಹಸುವಿನ ಹಟ್ಟಿಯನ್ನು ಮಾಡಿ ಅದರಲ್ಲಿ ಹಸುವನ್ನಿಟ್ಟರೆ ಸಾಲದು ಅದಕ್ಕೆ ಪ್ರತಿನಿತ್ಯ ಪೂಜೆಯನ್ನೂ ಕೂಡ ಸಲ್ಲಿಸುತ್ತಿರಬೇಕು.

ಕೇವಲ ಒಂದು ಹಸು ನಮಗೆ ಇಷ್ಟೆಲ್ಲಾ ಮಾಡುವ ಒಂದು ಹಸುವನ್ನು ಇಂದು ನಮ್ಮ ಸ್ವಾರ್ಥ ಸಾಧನೆಯ ಕಾರಣಕ್ಕಾಗಿ ಕಸಾಯಿಖಾನೆ ಕಳುಹಿಸಿ ಸುಮ್ಮನಾಗುತ್ತಿದ್ದೇವೆ. ಏಕೆ ನಮ್ಮ ಹಸು ತುಂಬ ವಯಸ್ಸಾಯಿತು. ಅದರಿಂದ ನಮಗೆ ಇನ್ನೂ ಯಾವುದೇ ಲಾಭವಿಲ್ಲ ಎಂದು. ನಮ್ಮ ತಂದೆ ತಾಯಿಯರನ್ನು ವೃದ್ದಾಪ್ಯದ ದಿನಗಳಲ್ಲಿ ವೃದ್ದಾಶ್ರಮಕ್ಕೆ ಅಥವಾ ಅನಾಥಾಶ್ರಮಕ್ಕೆ ಕಳುಹಿಸಿ ಕೊಡುವಂತೆ.

ಗೋವಿನ ಹಾಡು

ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ನೀ ನಾರಿಗಾದೆಯೋ ಎಲೆ ಮಾನವ…….

ಇಲ್ಲಿ ಗೋವು ತನ್ನನ್ನು ತಾನು ವರ್ಣಿಸಿಕೊಂಡು ಭೂಮಿಯ ಮೇಲೆ ಮಾನವನ ಅಸ್ತಿತ್ವವನ್ನು ಪ್ರಶ್ನಿಸುತ್ತಿದೆ. ಮಾನವ ಇಂದು ತನ್ನ ಲಾಭಕೋರತನಕ್ಕಾಗಿ ಮೂಲ ಸಂಸ್ಕ್ರತಿಯನ್ನು ಮರೆತು ಮಾನವ ರೂಪದ ಮೃಗವಾಗುತ್ತಿದ್ದಾನೆ.

ಒಂದು ಗೋವನ್ನು ಒಂದು ದಿನದ ಆಹಾರಕ್ಕಾಗಿ ತಿನ್ನುವ, ನಾವು ಮೊದಲ ತುತ್ತು ತಿನ್ನುವ ಮೊದಲು ಒಂದು ಕ್ಷಣ ಯೋಚಿಸಿ ಈ ತುತ್ತು ನನ್ನ ಕೈಯಲ್ಲಿದೆ ಎಂದರೆ ಇದೇ ಹಸು ಅಲ್ಲವೇ ನನ್ನ ಕೈಗೆ ಬರುವಂತೆ ಮಾಡಿದ್ದು.

ಅಮ್ಮನ ಎದೆ ಹಾಲು ಕಡಿಮೆಯಾದಾಗ ಇದೇ ಹಸುವಿನ ಹಾಲು ಕುಡಿದು ಬೆಳೆದದ್ದು.ಹಾಗಾದರೆ ಒಮ್ಮೆ ಯೋಚಿಸಿ ನಾವು ಯಾರನ್ನು ತಿನ್ನುತ್ತ ಬದುಕುತ್ತಿದ್ದೇವೆ ಎಂದು.

ಭೂಮಿಯ ಮೇಲೆ ಬದುಕಬೇಕು ನಿಜ.ಆದರೆ ಒಂದು ಪ್ರಾಣಿಯನ್ನು ಕೊಂದು ತಿಂದಲ್ಲ.ಗೋವನ್ನು ಕೊಲ್ಲಲು ನಮಗೇನು ಹಕ್ಕಿದೆ.ಒಂದು ವೇಳೆ ಕೊಂದು ತಿಂದದ್ದೆ ಆದರೆ ನಮ್ಮ ತಾಯಿಯನ್ನು ನಾವೇ ಕೊಂದು ತಿಂದಂತೆ ಅಲ್ಲವೇ?

ಶ್ರೀ ಇಂಗಳಗಿ ದಾವಲಮಲೀಕ

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!