ಗ್ರಾಮ್ಯ ಭಾಷೆಯಿಂದ ಗ್ರಾಥಿಕ ಭಾಷೆಗೆ ಹೊಂದಿಕೊಳ್ಳುವಲ್ಲಿ ಶಿಕ್ಷಕರ, ಮಕ್ಕಳ ಮತ್ತು ಪಾಲಕರ ಸವಾಲುಗಳು ಮತ್ತು ಪರಿಹಾರೋಪಾಯಗಳು

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಭಾಷೆ ಎಂದಾಕ್ಷಣ ಅದಕ್ಕೆ ಅದರದೇ ಆದ ಮಹತ್ವ ಇರುತ್ತದೆ. ಹಾಗೆ ನೋಡಿದರೆ,ಭಾಷೆಯನ್ನು ನಾವು ನಮ್ಮ ಸಂವಹನ ನಡೆಸಲು ಬಳಸಿಕೊಳ್ಳುತ್ತಿದ್ದೇವೆ.ಭಾಷೆ ಪ್ರತಿ ಜೀವಿಯ ವ್ಯವಹಾರಿಕ ಬದುಕು. ಇಂತಹ ಭಾಷೆಯಲ್ಲಿ ನಾವು ಎರಡು ವಿಧಗಳನ್ನು ಕಾಣುತ್ತೇವೆ. ಒಂದು ಗ್ರಾಮ್ಯ ಭಾಷೆ.

ಮತ್ತೊಂದು ಗ್ರಾಂಥಿಕ ಭಾಷೆ.ಇವೆರಡೂ ಕೂಡ ವಿಭಿನ್ನವಾದ ಅಧ್ಯಯನ. ಇಲ್ಲಿ ಭಾಷೆಯ ಮೇಲೆ ಹಿಡಿತ ಸಾಧಿಸುವುದು ಅವಶ್ಯ ಮತ್ತು ಅನಿವಾರ್ಯ ಕಾರಣ ಇಷ್ಟೇ, ಜೀವಿ ಭಾಷೆಯನ್ನು ಬಿಟ್ಟು ಬದುಕಲಾರದು.ಪ್ರತಿಯೊಂದು ಭಾಷೆಯೂ ತನ್ನದೇ ಆದ ಆಳ ಅಗಲವನ್ನು ಹೊಂದಿರುತ್ತದೆ. ತನ್ನದೇ ಆದ ಇತಿಹಾಸ ಹೇಳುತ್ತದೆ. ಭಾಷೆಯನ್ನು ಬೆಳೆಸಿಕೊಂಡು ಬಂದ ಬಗೆ ಮಾತ್ರ ವಿಭಿನ್ನವಾದ ಅಧ್ಯಯನ.

ಗ್ರಾಮ್ಯ ಭಾಷೆ

ಮೇಲೆ ಹೇಳಿದಂತೆ ಭಾಷೆಯಲ್ಲಿ ಮೊದಲು ಗ್ರಾಮ್ಯ ಭಾಷೆ ಎಂದರೇನು ಎಂಬುದನ್ನು ತಿಳಿಯೋಣ. ಗ್ರಾಮ್ಯ ಭಾಷೆ ಎನ್ನುವುದು,ಭಾಷೆಯ ಮೂಲ ಇತಿಹಾಸ.

- Advertisement -

ಬಹುಶಃ ಭಾಷೆ ಇಲ್ಲಿಂದಲೇ ರೂಪಗೊಳ್ಳುತ್ತದೆ. ಇದನ್ನು ನಾವು ಜನಪದ ಆಡು ನುಡಿ ಎಂದು ಕರೆಯಲೂಬಹುದು. ಇದು ಪ್ರಾದೇಶಿಕವಾಗಿ ಭಿನ್ನವಾಗಿ ಉಚ್ಚರಿಸಲ್ಪಡುತ್ತದೆ. ಒಂದು ಅಧ್ಯಯನದ ಪ್ರಕಾರ ಪ್ರತಿ ಹತ್ತು ಕಿಲೋಮೀಟರ್ ದೂರಕ್ಕೆ ಒಂದು ಕನ್ನಡ ಪದ ಬೇರೊಂದು ಅರ್ಥ ಕೊಡುತ್ತದೆ.

ಇಲ್ಲಿ ಯಾವುದೇ ವ್ಯಾಕರಣ, ಛಂದಸ್ಸು, ಅಲಂಕಾರದ ಯಾವುದೇ ಸಮಸ್ಯೆ ಇರುವುದಿಲ್ಲ.ಜೊತೆಗೆ ಈ ಭಾಷೆ ಸಂಪೂರ್ಣವಾಗಿ ಬದಲಾಗಿರುತ್ತದೆ.ಉದಾಹರಣೆಗೆ ನೋಡುವುದಾದರೆ,ಉತ್ತರ ಕರ್ನಾಟಕದ ಕನ್ನಡ ಭಾಷೆಗೂ ದಕ್ಷಿಣ ಕರ್ನಾಟಕದ ಕನ್ನಡ ಭಾಷೆಗೂ ತುಂಬ ವ್ಯತ್ಯಾಸ ಕಂಡುಬರುತ್ತದೆ.

ಗ್ರಾಂಥಿಕ ಭಾಷೆ

ಇದು ಪುಸ್ತಕೀಯ ಭಾಷೆ.ಇಲ್ಲಿ ವ್ಯಾಕರಣ, ಛಂದಸ್ಸು, ಅಲಂಕಾರ ಮುಂತಾದವುಗಳ ಸಮ್ಮಿಲನ ಈ ಭಾಷೆ.ಈ ತರಹದ ಭಾಷೆ ಹೆಚ್ಚಾಗಿ ದಕ್ಷಿಣ ಕರ್ನಾಟಕದಲ್ಲಿ ಕಂಡುಬರುತ್ತದೆ.ಇದನ್ನು ಒಂದು ಅರ್ಥದಲ್ಲಿ ಹೇಳುವುದಾದರೆ ಶಾಸ್ತ್ರೀಯ ಭಾಷೆ ಎನ್ನಬಹುದು.

ಶಿಕ್ಷಕರ ಸವಾಲುಗಳು

ವೃತ್ತಿಗಳಲ್ಲಿ ಅತ್ಯಂತ ಶ್ರೇಷ್ಠ ವೃತ್ತಿ ಶಿಕ್ಷಕ ವೃತ್ತಿ. ಈ ವೃತ್ತಿ ತುಂಬ ಸವಾಲುಗಳನ್ನು ಎದುರಿಸಲು ಅವಕಾಶ ಮಾಡಿಕೊಡುತ್ತದೆ. ಅವುಗಳಲ್ಲಿ ಮೊದಲು ಭಾಷೆ ಸಮಸ್ಯೆ. ಇಲ್ಲಿ ಶಿಕ್ಷಕರು ೭೦% ಬೇರೆಬೇರೆ ಪ್ರಾಂತ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನಮಗೆ ಮೊದಲನೆಯ ಸಮಸ್ಯೆ ಭಾಷೆ.ಕಾರಣ ನಮ್ಮ ಪ್ರಾಂತ್ಯದ ಭಾಷೆಗೂ ನಾವು ಕರ್ತವ್ಯ ನಿರ್ವಹಿಸುವ ಪ್ರಾಂತ್ಯದ ಭಾಷೆಗೂ ತುಂಬ ವ್ಯತ್ಯಾಸ ಕಂಡುಬರುತ್ತದೆ. ಉತ್ತರ ಕರ್ನಾಟಕ ಪ್ರಾಂತ್ಯದ ಒಬ್ಬ ಶಿಕ್ಷಕ ದಕ್ಷಿಣ ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರೆ, ತುಂಬ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅ ಕಾರವೂ ಕೆಲವು ಜಿಲ್ಲೆಗಳಲ್ಲಿ ಆ ಕಾರವಾಗಿ ಬದಲಾಗುತ್ತದೆ. ಮತ್ತೆ ಕೆಲವು ಜಿಲ್ಲೆಗಳಲ್ಲಿ ಹ ಕಾರವಾಗಿ ಬದಲಾಗುತ್ತದೆ.

  • ಅಕ್ಕಿ- ಹಕ್ಕಿ
  • ಅಣ್ಣ- ಹಣ್ಣ
  • ಆಲು-ಹಾಲು
  • ಆಸರೆ-ಹಾಸರೆ…..

ಕಾಗುಣಿತ ದೋಷ

ಕೆಲವು ಜಿಲ್ಲೆಗಳಲ್ಲಿ ಅ ಕಾರಕ್ಕೆ ಬದಲಿಗೆ ಆ ಕಾರವನ್ನು ಬಳಸುತ್ತಾರೆ.ಕ ಎನ್ನುವುದನ್ನು ಕಾ ಎಂದು ಉಚ್ಚರಿಸಲಾಗುತ್ತದೆ.

ಕೆಲವೊಮ್ಮೆ ಇದು ಆಭಾಸಕ್ಕೆ ಈಡಾಗುತ್ತದೆ. ಉದಾಹರಣೆಗೆ ನಿಮಗೆ ಆದರದ ಸ್ವಾಗತ ಎನ್ನುವ ಬದಲಿಗೆ ಹಾದರದ ಸ್ವಾಗತ, ಹಣ್ಣನು ಅಣ್ಣನ್ನು ತಿಂದನು,ಅಕ್ಕಿಯು ಹಕ್ಕಿಯನ್ನು ತಿಂದಿತು ಎಂದು ಉಚ್ಚರಿಸಿದಾಗ ಏನಾಗಬಹುದು. ಇಂತಹ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಪಾಲಕರ ಸವಾಲುಗಳು

ಪಾಲಕರೂ ಕೂಡ ಇದೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಪಾರಿಭಾಷಿಕ ಪದಗಳ ಬಳಕೆ. ಯಾವ ಸಂದರ್ಭಗಳಲ್ಲಿ ಯಾವ ಪದಗಳನ್ನು ಬಳಸಬೇಕು ಎಂಬುದನ್ನು ತಿಳಿಯದೇ ತಪ್ಪುಗಳನ್ನು ಮಾಡುತ್ತಾರೆ.

ಪರಿಹಾರೋಪಾಯಗಳು

  1. ನಾಲಿಗೆ ದ್ವಂದ್ವ: ಪ್ರತಿ ಮಗುವಿಗೂ ನಾಲಿಗೆ ದ್ವಂದ್ವ ನಿವಾರಣೆ ಮಾಡುವ ಪದಗಳನ್ನು ಬಳಸುವುದು. ಉದಾಹರಣೆಗೆ:ತರಿ ಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೆಯ್ತಿತ್ತು.ಕಪ್ಪು ಕುಂಕುಮ ಕೆಂಪು ಕುಂಕುಮ. ಈ ತರಹದ ವಾಕ್ಯಗಳ ರಚನೆ ಮತ್ತು ಉಚ್ಚಾರಣೆ.
  2. ಗ್ರಾಮ್ಯ ಭಾಷೆಯನ್ನು ಗ್ರಾಂಥಿಕ ಭಾಷೆಯಲ್ಲಿ ಸಮ್ಮಿಲನ. ಶಿಕ್ಷಕ ತಾನು ಬೋಧಿಸುವ ಪ್ರಾಂತ್ಯದ ಭಾಷೆಯನ್ನು ತನ್ನ ಗ್ರಾಮ್ಯ ಭಾಷೆಯೊಂದಿಗೆ ಸಮ್ಮಿಳನಗೊಳಸಿಕೊಳ್ಳಬೇಕು. ಆದರೆ ಮೂಲ ಭಾಷೆಗೆ ಯಾವುದೇ ಚ್ಯುತಿ ಬಾರದಂತೆ ಬೋಧಿಸಬೇಕು.
  3. ಮುಕ್ತ ಸ್ವಾತಂತ್ರ್ಯ: ಮಕ್ಕಳಿಗೆ ಮುಕ್ತವಾಗಿ ಸಂವಹನ ನಡೆಸಲು ಅವಕಾಶ ಮಾಡಿಕೊಡಬೇಕು. ಅವರ ಭಾಷೆಯ ಸೊಗಡನ್ನು ತಿಳಿಸಲು ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು.
  4. ಕ್ರಿಯಾ ಸಂಶೋಧನೆ: ಶಿಕ್ಷಕರು ತಮ್ಮ ತರಗತಿ ಕೋಣೆಯಲ್ಲಿ ಯಾವ ಅಂಶಗಳನ್ನು ಕಲಿಯಲು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಾರೆ. ಅದಕ್ಕೆ ಏನು ಪರಿಹಾರ ನೀಡಲು ಸಾಧ್ಯ ಎಂಬುದರ ಕುರಿತು ಕ್ರಿಯಾ ಸಂಶೋಧನೆ ನಡೆಸಬೇಕು.

ಶ್ರೀ ಇಂಗಳಗಿ ದಾವಲಮಲೀಕ
ಸಹ ಶಿಕ್ಷಕರು
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಮನ ಹಳ್ಳಿ.ಅಂಚೆ:ಮಂತಗಿ.ತಾ: ಹಾನಗಲ್. ಜಿ:ಹಾವೇರಿ.

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!