ಅಂದು-ಇಂದು
ಹಿಂದೆ ಗುರುವಿದ್ದ,ಮುಂದೆ ಗುರಿ ಇತ್ತು
,ಎಲ್ಲೆಲ್ಲೂ ಆದರ್ಶ ವ್ಯಕ್ತಿಗಳ ಜನನ,
ಇಂದು ಎಲ್ಲೆಲ್ಲೂ ಬಾರ್ ಗಳು,ಪಬ್ ಗಳ ಹಾವಳಿ,
ಎಲ್ಲೆಲ್ಲೂ ಕುಡುಕರದೇ ಜತನ..
ಕರೋನಾ
ಐಶ್ವರ್ಯದ ಮದದಿ ಮೆರೆಯುತ್ತಿದ್ದ ಮನುಜನಿಗೆ,
ಕರೋನಾ ಹಾಕಿತು ಮಾಯಲಾರದ ಬರೆ,
ಬಡವರು,ಅಶಕ್ತರು,ವೃಧ್ಧರು,ಮಕ್ಕಳಿಗೆ
ದಯೆತೋರು, ಓ ಕರೋನಾ…
ರಾಷ್ಟ್ರದ ಇತಿಹಾಸ ನಿರ್ಮಿಸಿದವರ,
ರಾಷ್ಟ್ರದ ಭವಿಷ್ಯ ನಿರ್ಮಿಸುವವರ
ಉಳಿಸು ಕರೋನಾ…
ಯಾರದೋ ತಪ್ಪಿಗೆ ಯಾರಿಗೋ ಬರೆ ಯಾಕೆ ???
ದೇವನಿಗೆ
ಲಕ್ಷಾಂತರ ಭಕ್ತರ
ಲಕ್ಷ-ಲಕ್ಷ ಕೋರಿಕೆಗಳ
ಈಡೇರಿಸಲು ನಿನಗೆಷ್ಟು ಶ್ರಮ ?
ಅದಕಾಗಿ ನಿನ್ನ ಕರ್ತವ್ಯಕೆ
ರಜಾ ಹಾಕಿ ಬಿಟ್ಟೆಯಾ
ಓ ದೇವಾ….
ನಿನ್ನ ದರ್ಶನ
ನೀಡದಿದ್ದರೂ ಬೇಡ,
ಕರುಣೆ ತೋರಿ ಉಳಿಸು..
ಈ ಮಾನವ ಜೀವನವ…
ಪ್ರಶ್ನೋತ್ತರ
ಪ್ರಶ್ನೆ: ನಿಮ್ಮ ಮಗ
ಇದೀಗ ಸಂಪಾದನೆ
ಮಾಡ್ತಾ ಇದಾನಾ ??
ಉತ್ತರ: ಹೌದು ಸ್ವಾಮಿ,
ಮಾಡ್ತಾ ಇದಾನೆ,
ಶೂನ್ಯ ಸಂಪಾದನೆ !!!
ಗ್ಯಾರಂಟಿ
ಪೈಸೆಗೆ ಪೈಸೆ ಜೋಡಿಸಿ,ಒಟ್ಟಾಗಿಸಿ
ಮರೆಯದೇ ನಮ್ಮಲ್ಲೇ ಇಡಿ,
ಅದೃಷ್ಟವಿರುವವರೆಗೆ ಬರುವುದು ಬಡ್ಡಿ,
ಅದೃಶ್ಯವಾದಾಗ ಪರದಾಡಿ ಬರುವುದು ಬಿ.ಪಿ.,ಶುಗರ್ ಓಡೋಡಿ….
ವಾಸ್ತವ
ಅಂದು ಗುದ್ದಲಿ ಹಿಡಿಯಲು ಬೇಸರಿಸಿ,
ಬೆಂಗಳೂರಿಗೆ ಓಡಿಹೋದ ನಮ್ಮೂರ ಅಪ್ಪಾಜಿ,
‘ಬೆಂಗಳೂರೇ ಚಂದ’ ಎಂದು ಹಾಡುತ್ತಿದ್ದ,
ವೈರಸ್ ದಾಳಿಗೆ ಬೆದರಿ ರಾತ್ರೋರಾತ್ರಿ ಊರಿಗೆ ಧಾವಿಸಿ ಬಂದ….
ಬಂದ್,ಬಂದ್,ಬಂದ್..
ಪ್ರೇಮಿಗಳಿಗಂತೂ ಬರೀ ದುರ್ದಿನಗಳು,
ಉದ್ಯಾನವನಗಳೂ ಬಂದ್,
ಚಿತ್ರ ಮಂದಿರಗಳೂ ಬಂದ್,
ಮುತ್ತಿಡಲು,ಅಪ್ಪುಗೆ ಮಾಡಲೂ ವೈರಸ್ ನ ಬೆದರಿಕೆ,
ಶಾಲಾ-ಕಾಲೇಜುಗಳೂ ಬಂದ್,
ಹೀಗಾಗಿ ಪ್ರೇಮಿಗಳ ಓಡಾಟವೂ ಬಂದ್….
ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 72368