ಚುಟುಕು ಹಾಗೂ ಕವನ

0
2610

ನಮ್ಮೂರ ಸಿದ್ಧ

ನಮ್ಮೂರ ಸಿದ್ಧ
ಕುಟುಂಬ ಯೋಜನೆಗೆ ಬದ್ಧ,
ಆ-ರತಿಗೊಂದು,
ಈ-ರತಿಗೊಂದು
ಅವನಿಗೆ
ನಮ್ಮೂರಲ್ಲಿ
ಎರಡೇ ಮಕ್ಕಳು..


ಸಿ(ಕ)ಹಿಸುದ್ಧಿ

ಸೀಮೆಯೆಣ್ಣೆ ಸುರಿದು,
ಸೊಸೆಯರ ಕೊಲ್ಲುವ
ಅತ್ತೆಯರಿಗೊಂದು
ಸಿ(ಕ)ಹಿ ಸುದ್ದಿ,
ಹೀಗೇ ಸಾಗಿದರೆ
ಸೊಸೆಯರೇ
ನಿಮ್ಮನ್ನು ಕೊಲ್ಲುವರು
ಗುದ್ದಿ ಗುದ್ದಿ!!


ಫಲಕ

ಮಹಿಳಾ ಕಾಲೇಜೊಂದರ
ಮುಂದೆ,
ರಸ್ತೆ ಸೂಚನಾ ಫಲಕ
“ಈ ರಸ್ತೆಯಲಿ ಭಾರೀ
ಉಬ್ಬು-ತಗ್ಗುಗಳಿವೆ
ಎಚ್ಚರಿಕೆ…!!”

ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583,


ಹಾರು ನೀ ಹಾರು

ಗೂಡಲಿದ್ದ ಮರಿಯೊಂದು
ಜಾರಿ ಕೆಳಗೆ ಬಿದ್ದಿತು
ಹಾರಲು ಬಾರದೇ ಭಯದಿ
ಮುದುಡಿ ನಡುಗುತ್ತಿತ್ತು.

ದೂರದ ಪೊದೆಯಲಿ ಠಕ್ಕ
ನರಿಯೊಂದು ಪಿಳಿಪಿಳಿ
ಕಣ್ಣು ಬಿಡುತ್ತಿತು
ಮರಿಯನು ತಿನ್ನಲು ಕಾದು
ಕುಳಿತಿತ್ತು.

ಕಾಗೆಯೊಂದು ಹಾರಿ ಬಂದು
ಮರದ ಮೇಲೆ ಕುಳಿತಿತು
ಭಯದಿ ನಡುಗುವ ಮರಿಯ
ನೋಡಿತು
ಕಾವ್ ಕಾವ್ ಕಾವ್ ಕಾವ್
ಎಂದು ಕೂಗಿತು.

ಮರಿಯ ಸುತ್ತ ಮುತ್ತ ಹಾರಿತು
ಅತ್ತ ಇತ್ತ ಮತ್ತೆ ಮತ್ತೆ ನೋಡಿತು
ನರಿಯ ಬೆನ್ನಿಗೆ ಹಾರಿ ಕುಕ್ಕಿತು
ಮರಿಯ ಬಾಯಲಿ ಮಾಂಸ ಇಕ್ಕಿತು

ಕೊಕ್ಕಿನಿಂದ ಮರಿಯ ಹಿಡಿದು
ಮತ್ತೇ ಮರಕೆ ಹಾರಿತು
ಮರದ ಮೇಲೆ ಹಾವು ಕಂಡು
ಕೆಳಗೆ ಹಾರುತಾ ಬಂದಿತು.

ಎಲ್ಲಿ ಹೋಗಲಿ ಹೇಗೆ ಕಾಪಾಡಲಿ ಎನ್ನುತಾ
ರೆಕ್ಕೆ ಬಿಚ್ಚುಮೇಲಕೆ ಹಾರು
ಕಬಳಿಸಲು ಕಾಯುತಿರುವವರ
ಸೆದೆಬಡಿಯಲು ಹಾರು ನೀ
ಮೇಲೆ ಮೇಲೆ ಹಾರು ಎಂದಿತು.

ದೂರದ ಬೆಟ್ಟ ಕಣ್ಣಿಗೆ ಬಿತ್ತು
ದುಷ್ಟರನು ಕಂಡರೆ ದೂರ ಸರಿ
ಎಂದಿತು
ಮರಿಯೊಂದಿಗೆ ಏಕಾಂತ ಸೇರಿತು
ನೆಮ್ಮದಿಯಿಂದ ಉಸಿರು ಬಿಟ್ಟಿತು.

ಪುಷ್ಪಾ ಮುರಗೋಡ
ಗೋಕಾಕ