ಚೆನ್ನಮ್ಮನ ಕಿತ್ತೂರ : ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ‌ ಕಛೇರಿಯಲ್ಲಿಂದು ವಿದ್ಯಾರ್ಥಿ ಸ್ನೇಹಿ,ಶಿಕ್ಷಕ ಸ್ನೇಹಿ ,ಪಾಲಕ ಸ್ನೇಹಿ ಶೈಕ್ಷಣಿಕ ಆ್ಯಪ್ ಬಿಡುಗಡೆ ಮಾಡಲಾಯಿತು

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಇಂದಿನ ದುರಿತ ಕರೋನ ಕಾಲದಲ್ಲಿ‌ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆ ಹಲವು ತಂತ್ರಜ್ಞಾನಗಳ ಬಳಕೆಗೆ ನಾಂದಿಯಾಯಿತು ಅದರಲ್ಲಿ ಗೂಗಲ್ ಮೀಟ್ ಟೀಚ್ಮೆಂಟ್,ಜೂಮ್ ಹೀಗೆ ಹಲವು ಸಾಮಾಜಿಕ ಜಾಲತಾಣಗಳು ಗುಣಮಟ್ಟದ ಶಿಕ್ಷಣ ನೀಡುವ ಪ್ರಕ್ರಿಯೆ ಯಲ್ಲಿ ಪಾಲ್ಗೊಂಡವು.ಇದನ್ನ ಗಮನಿಸಿದ ಶಾಸಕರಾದ ಮಹಾಂತೇಶ ದೊಡಗೌಡರ ಹಾಗೂ ತಮ್ಮದೇ ಆದ ಕಾರ್ಯಶೈಲಿಯಿಂದ ಜನಿತರಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಟಿ.ಬಳಿಗಾರ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶಿವಶಂಕರ ಹಾದಿಮನಿ ,ಶಿಕ್ಷಣಸಂಯೋಜಕರಾದ ಮಹೇಶ ಹೆಗಡೆಯವರ ಬಿ ಆರ್ ಪಿಗಳು ನಾವು ಏಕೆ ನಮ್ಮ ಸರಕಾರಿ ಶಾಲೆಗಳ ಮಕ್ಕಳಿಗೆ ಆ್ಯಪ್ ಮೂಲಕ ಶಿಕ್ಷಣ ದೊರಕಿಸಬಾರದು? ಅಂದುಕೊಂಡಾಗ ಉದಯಿಸಿದ್ದೇ ಗ್ರೂಪಿ ಆ್ಯಪ್. ಅದರ ಫಲವಾಗಿ ಇಂದು ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಅಂಗೈಯಲ್ಲಿ ತಂತ್ರಜ್ಞಾನದ ಮೂಲಕ ಶಿಕ್ಷಣ ತಲುಪಿದೆ.

ಬಸವಂತರಾವ ದೊಡಗೌಡರ ಫೌಂಡೇಶನ್ ಹಾಗೂ ಆ್ಯಪ್ ತಯಾರಕರಾದ ನಿತಿನ್ ಮಹಾದೇವಪ್ಪರವರ ನೆರವಿನಿಂದ ಕಾರ್ಯಸಿದ್ದವಾಗಿ ಅಧಿಕೃತ ವಾಗಿ ಇಂದು ಲೋಕಾರ್ಪಣೆ ಮಾಡಲಾಯಿತು.

- Advertisement -

ಬೆಂಗಳೂರಿನ ಆ್ಯಪ್ ಮಾಲಿಕರಾದ ನಿತಿನ್ ರವರ ನೆರವಿನಿಂದ ಕಿತ್ತೂರ ತಾಲೂಕಿನ ಎಲ್ಲ ಸರಕಾರಿ ಶಾಲೆಗಳಿಗೆ (ಪ್ರಾಥಮಿಕ ಹಾಗೂ ಮಾಧ್ಯಮಿಕ) ಶಾಲೆಗಳಿಗೆ ಉಚಿತವಾಗಿ ನೀಡಿರುವದರಿಂದ ಶೈಕ್ಷಣಿಕ ಪ್ರಗತಿಯ ಹಾದಿಯಲ್ಲಿ ಇದೊಂದು ವಿಶಿಷ್ಟ ಮೈಲುಗಲ್ಲಾಗಿದೆ.ಇಂದು ಅಧಿಕೃತ ವಾಗಿ ಶಾಸಕರು ಶೈಕ್ಷಣಿಕ ರಂಗದ ಅಧಿಕಾರಿಗಳು ಶಿಕ್ಷಕ ಸಂಘಟನೆಯ ಸದಸ್ಯರು, ಹಾಗೂ ಶಿಕ್ಷಕರ ಎದುರಿನಲ್ಲಿ ಆ್ಯಪ್ ನಲ್ಲಿ ಹಿತನುಡಿಯ ಮಾತಿನ ಮೂಲಕ ಚಾಲನೆ ನೀಡಿದರು

ಆ್ಯಪ್ ನ ವೈಶಿಷ್ಟ್ಯಗಳು:

  • ಆ್ಯಪ್ ಮೂಲಕ ಪಾಠ ಮಾಡಬಹುದು
  • ಇ ಗ್ರಂಥಾಲಯ ಮಾಡಿಕೊಳ್ಳಬಹುದು
  • ಮಗುವಿನ ವೈಯಕ್ತಿಕ ದಾಖಲೆಗಳ ನಿರ್ವಹಣೆ
  • ನೋಟಿಸ್ ಬೋರ್ಡ್
  • ಶಿಕ್ಷರ ಸಭೆ
  • ಪಾಲಕರಿಗೆ ಸಂದೇಶಗಳನ್ನು ತಲುಪಿಸಬಹುದು
  • ಹಾಜರಾತಿ ನಿರ್ವಹಣೆ

ನಮ್ಮ ಸರಕಾರಿ ಶಾಲೆಯ ಮಕ್ಕಳು ಸ್ಪರ್ಧಾಯುಗದಲ್ಲಿ ಮುಂದೆ ಇರಬೇಕು ಎಲ್ಲ ರಂಗದಲ್ಲೂ ಪೈಪೋಟಿ ನೀಡಬೇಕು ಎನ್ನುವ ನಿಟ್ಟಿನಲ್ಲಿ ಈ ಆ್ಯಪ್ ಸಹಕಾರಿಯಾಗಲಿದೆ.ಇದನ್ನು ಎಲ್ಲರೊಂದಿಗೆ ಚರ್ಚಿಸಿ ಜಾರಿ ಮಾಡಲಾಗಿದೆ.

-ಆರ್.ಟಿ ಬಳಿಗಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು


ನಮ್ಮ ಹಳ್ಳಿಯ ಮಕ್ಕಳು ತಂತ್ರಜ್ಞಾನದ ಮೂಲಕ ಶಿಕ್ಷಣ ಪಡೆದು ಗುಣಮಟ್ಟದ ಶಿಕ್ಷಣ ಪಡೆಯಲು ಈ ಅ್ಯಪ್ ನ್ನು ಚಾಲನೆ ಮಾಡಿದ್ದೇವೆ.

– ಮಹಾಂತೇಶ ದೊಡಗೌಡರ, ಶಾಸಕರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!