spot_img
spot_img

ಛಾಯಾಗ್ರಾಹಕರಿಗೆ ವಿಶೇಷ ಪ್ಯಾಕೇಜ್ ಒದಗಿಸಲು ಮನವಿ

Must Read

- Advertisement -

ಸಿಂದಗಿ: ತಾಲೂಕಾ ಛಾಯಾಗ್ರಾಹಕರಿಗೆ ವಿಶೇಷ ಪ್ಯಾಕೇಜನಲ್ಲಿ ಪರಿಹಾರ ಒದಗಿಸಿಕೊಡುವಂತೆ ಆಗ್ರಹಿಸಿ ತಾಲೂಕಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಹಶೀಲ್ದಾರ ಸಂಜೀವಕುಮಾರ ದಾಸರ ಅವರ ಮುಖಾಂತರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜು ಚಳ್ಳಗಿ, ಪಂಡಿತ ಯಂಪೂರೆ, ಸಿದ್ದು ಪೂಜಾರಿ ಕಲಕೇರಿ ಮಾತನಾಡಿ, ಇಂದಿನ ತಂತ್ರಜ್ಞಾನದ ಹಾವಳಿಯಲ್ಲಿ ಛಾಯಾಗ್ರಾಹಕರ ವ್ಯಾಪಾರ ವಹಿವಾಟು ತೀರಾನೇ ಕಡಿಮೆಯಾಗಿ ಅಲ್ಪಸ್ವಲ್ಪವಾಗಿ ವಹಿವಾಟು ನಡೆದಿತ್ತು ಇದರ ಮಧ್ಯೆ ಮದುವೆ ಸಿಜೆನ್‍ನಲ್ಲಿಯೇ ಕಳೆದ 2 ವರ್ಷಗಳಿಂದ ಈ ಕೊರೋನಾ ಆವರಿಸಿ ಲಾಕ್‍ಡೌನ್ ಆಗಿದ್ದರಿಂದ ಯಾವುದೇ ಮದುವೆ, ಮುಂಜಿವೆ, ಸಭೆ-ಸಮಾರಂಭಗಳು ನಡೆದಿಲ್ಲಾ ಇದರಿಂದ ತಾಲೂಕಿನ ಛಾಯಾಗ್ರಾಹಕರ ಬದುಕು ಸಂಕಷ್ಟದಲ್ಲಿದೆ ವಿಶೇಷ ಪ್ಯಾಕೇಜ್‍ನಲ್ಲಿ ಪರಿಹಾರ ಒದಗಿಸಿಕೊಡುವಂತೆ ಕಳೆದ ಬಾರಿಯು ಕೂಡಾ ಮನವಿ ಮಾಡಿಕೊಳ್ಳಲಾಗಿತ್ತು.

ಆದರೆ ಅದಕ್ಕೆ ಯಾವುದೇ ಮನ್ನಣೆ ದೊರಕಲಿಲ್ಲ ಮತ್ತೆ ಈ ಬಾರಿಯ ಲಾಕ್‍ಡೌನ್ ಯಾವುದೇ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ ಎಂದು ಸರಕಾರ ಆದೇಶ ಹೊರಡಿಸಿರುವುದರಿಂದ ತಾಲೂಕಿನ 2 ನೂರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಫೋಟೋಗ್ರಾಫರಗಳು ಗಂಭೀರ ಸ್ಥಿತಿ ಅನುಭವಿಸುಂತಾಗಿದ್ದು. ಮುಖ್ಯಮಂತ್ರಿಗಳು ರಾಜ್ಯದ ಕೆಳವರ್ಗದ ಹಾಗೂ ಮಧ್ಯಮ ವರ್ಗದ ಸಮುದಾಯದವರನ್ನು ಪರಿಗಣಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು ಈ ಬಾರಿಯ 2 ನೇ ಅಲೆಯ ಪ್ಯಾಕೇಜ್‍ನಲ್ಲಿ ರಾಜ್ಯದ ಎಲ್ಲ ಛಾಯಾಗ್ರಾಹಕರನ್ನು ಕಡೆಕಣಿಸಿದ್ದು ದುರದುಷ್ಟರಕರದ ಸಂಗತಿಯಾಗಿದ್ದು ಇದನ್ನೆ ನಂಬಿ ಜೀವನ ನಡೆಸುತ್ತಿದ್ದು ಛಾಯಾಗ್ರಾಹಕರ ಜೀವನಾಂಶಕ್ಕಾಗಿ ವಿಶೇಷ ಪ್ಯಾಕೇಜ್‍ನಲ್ಲಿ ರೂ.10 ಸಾವಿರ ಪರಿಹಾರ ಸೌಲಭ್ಯ ಒದಗಿಸಿಕೊಟ್ಟಿದ್ದಾದರೆ ಅನುಕೂಲವಾಗುತ್ತದೆ.

- Advertisement -

ಕೂಡಲೇ ಎಲ್ಲ ಛಾಯಾಗ್ರಾಹಕರ ದೈನಂದಿನ ಸ್ಥಿತಿ ಸುಧಾರಣೆಗೆ ಈ ಪ್ಯಾಕೇಜನಲ್ಲಿ ಪರಿಗಣಿಸಿ ಪರಿಹಾರ ಒದಗಿಸಿ ಕೊಡಬೇಕು ಎಂದು ತಾಲೂಕಾ ಛಾಯಾಗ್ರಾಹಕರ ಸಂಘದ ಎಲ್ಲ ಸದಸ್ಯರು ಮನವಿ ಮಾಡಿಕೊಂಡರು.

ಈ ವೇಳೆ ಅಧ್ಯಕ್ಷ ರೂಪಸಿಂಗ್ ಚವ್ಹಾಣ, ಪುಟ್ಟು ಸಂಗಮ, ಮಲ್ಲು ಸಿಂದಗಿ, ಅನೀಲ ಕೊಳಕೂರ, ಗಂಗಾಧರ ವಿಶ್ವಕರ್ಮ, ಶಂಕರ ತಳವಾರ, ಕುಮಾರ ನಾಯ್ಕೋಡಿ, ಮೌನೇಶ ಕಟ್ಟಿಮನಿ, ಅಲೋಕ ರೊಡಗಿ, ವೀಣಾ ಸ್ಟುಡಿಯೋ, ಮಾನಸ ಗಂಗಾ ಸ್ಟುಡಿಯೋ, ಸೋಮು ಹೂಗಾರ ಸೇರಿದಂತೆ ಹಲವರಿದ್ದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group