ಬೀದರ – ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ಬಿಜೆಪಿಯಲ್ಲಿ ಒಡಕು ಮೂಡಿದ್ದನ್ನು ಸಾಕ್ಷಾತ್ಕರಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಅವರ ಮುಂದೆ 18 ಜನ ಟಕೆಟ್ ಅಕಾಂಕ್ಷಿಗಳು ತಮ್ಮ ಅಸಮಾಧಾನ ಹೊರಹಾಕಿದ ಘಟನೆ ಜರುಗಿತು.
ಬಸವ ಕಲ್ಯಾಣದ ಉಪ ಚುನಾವಣೆಯ 18 ಟಿಕೆಟ್ ಆಕಾಂಕ್ಷಿಗಳು ಕಾರ್ಯಕರ್ತರ ಸಮಾವೇಶ ಸಮಾರಂಭದ ವೇದಿಕೆಯ ಕೆಳಗಡೆ ಕಾರ್ಯಕರ್ತರ ಜೊತೆ ಸಾಲಾಗಿ ಕುಳಿತಿದ್ದರು. ದಯವಿಟ್ಟು ಎಲ್ಲರು ವೇದಿಕೆ ಮೇಲೆ ಬನ್ನಿ ಅಂತಾ ಸಂಸದ ಭಗವಂತ ಖೊಬಾ ಮನವಿ ಮಾಡಿದ್ದರು ಆದರೂ ಶರಣು ಸಲಗರ ಒಬ್ಬರನ್ನು ಬಿಟ್ಟು ಯಾರೊಬ್ಬರೂ ವೇದಿಕೆಯ ಮೇಲೆ ಬರಲೇ ಇಲ್ಲ.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕಾಡವಾದೆ ಸೇರಿದಂತೆ ಹಲವರು ವೇದಿಕೆ ಮೇಲೆ ಬರಲು ಹಿಂದೇಟು ಹಾಕಿದ್ದರು ನಂತರ
ಪ್ರತಿಯೊಬ್ಬರ ಹೆಸರು ಕೂಗಿ ವೇದಿಕೆಗೆ ಕರೆದವರು ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ.ಬಳಿಕ 18 ಜನ ವೇದಿಕೆ ಮೇಲೆ ಒಲ್ಲದ ಮನಸಿನಿಂದ ಬಂದರು.
ಪರಸ್ಪರ ಕೈ ಹಿಡಿದು ಒಗ್ಗಟ್ಟಿನ ಮಂತ್ರ ಜಪಿಸಿಲು ಹೇಳಿದರು.
ಇದರಿಂದ ಜಿಲ್ಲಾ ಬಿಜೆಪಿಯಲ್ಲಿ ಯಾವುದೂ ಸರಿಯಿಲ್ಲವೆಂಬುದು ಈ ಘಟನೆಯಿಂದ ಬಹಿರಂಗವಾಗಿದ್ದು ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಟಿಕೆಟ್ ಆಕಾಂಕ್ಷಿಗಳ ಈ ಅಸಮಾಧಾನವನ್ನು ಯಾವ ರೀತಿ ಹೋಗಲಾಡಿಸುವರೋ ಎಂಬುದು ಕುತೂಹಲಕಾರಿಯಾಗಿದೆ.
ವರದಿ: ನಂದಕುಮಾರ ಕರಂಜೆ
Times of ಕರ್ನಾಟಕ, ಬೀದರ